ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ: ಮೈಸೂರಿನಲ್ಲಿ ನಿರ್ಮಿಸಿರುವ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ | Narendra Modi to Unveil Shankaracharya Idol in Kedarnath Which Built in Mysore


ಕೇದಾರನಾಥಕ್ಕೆ ಪ್ರಧಾನಿ ಮೋದಿ ಭೇಟಿ: ಮೈಸೂರಿನಲ್ಲಿ ನಿರ್ಮಿಸಿರುವ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ

ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಿರುವ ಮೈಸೂರಿನಲ್ಲಿ ನಿರ್ಮಿಸಲಾಗಿರುವ ಶಂಕರಾಚಾರ್ಯರ ಪ್ರತಿಮೆ

ಪ್ರಧಾನಿ ನರೇಂದ್ರ ಮೋದಿ ಮೋದಿ ಶುಕ್ರವಾರ (ನ.5) ಉತ್ತರಾಖಂಡ್ ರಾಜ್ಯದ ಕೇದಾರನಾಥಕ್ಕೆ ಭೇಟಿ ನೀಡುವರು. ನಾಳೆ ಕೇದಾರದಲ್ಲಿ ಶಂಕರಾಚಾರ್ಯರ ಸಮಾಧಿ ಸ್ಥಳವನ್ನು ಭಕ್ತರ ದರ್ಶನಕ್ಕೆ ಅನಾವರಣಗೊಳಿಸುವರು. ಪ್ರಧಾನಿ ಮೋದಿ, ಕೇದಾರನಾಥಕ್ಕೆ ಭೇಟಿ ನೀಡುವ ದಿನವೇ ಬಿಜೆಪಿ ನಾಯಕರು ದೇಶದ ನೂರು ಪವಿತ್ರ ಸ್ಥಳಗಳಿಗೆ ಭೇಟಿ ನೀಡುವರು. ಕರ್ನಾಟಕದ ಶೃಂಗೇರಿಗೆ ನಾಳೆ ಭಕ್ತರು ಭೇಟಿ ನೀಡುವಂತೆ ಬಿಜೆಪಿ ಆಹ್ವಾನಿಸಿದೆ.

ಕೇದಾರನಾಥದಲ್ಲಿ ಸ್ಥಾಪಿಸಿರುವ ಆದಿಗುರು ಶಂಕರಾಚಾರ್ಯರ ಪ್ರತಿಮೆಯನ್ನು ಮೈಸೂರಿನಲ್ಲಿ ನಿರ್ಮಿಸಲಾಗಿದೆ. ಈ ಪ್ರತಿಮೆಯನ್ನೂ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಈ ಪ್ರತಿಮೆಯನ್ನು ಮೈಸೂರಿನಲ್ಲಿ ನಿರ್ಮಿಸಲಾಗಿದೆ. ಪ್ರಧಾನಿ ಕಾರ್ಯಾಲಯದ ಸೂಚನೆ ಮೇರೆಗೆ ಮೈಸೂರಿನ ಖ್ಯಾತ ಶಿಲ್ಪಿ ಪ್ರತಿಮೆ ನಿರ್ಮಿಸಿದ್ದಾರೆ. ಕೇದಾರನಾಥದಲ್ಲಿಯೇ ಶಂಕರಾಚಾರ್ಯರು ದೇಹತ್ಯಾಗ ಮಾಡಿದರು ಎಂಬ ನಂಬಿಕೆ ಪ್ರಚಲಿತದಲ್ಲಿದೆ.

ಶ್ರೀನಗರದ ಪ್ರಸಿದ್ಧ ಶಂಕರಾಚಾರ್ಯ ದೇವಸ್ಥಾನದಿಂದ ಹಿಡಿದು ಕೇರಳದ ಎರ್ನಾಕುಲಂನಲ್ಲಿರುವ ಆದಿ ಶಂಕರಾಚಾರ್ಯರ ಜನ್ಮಸ್ಥಳ ಮತ್ತು ಗುಜರಾತ್‌ನ ಸೋಮನಾಥ ದೇವಸ್ಥಾನದವರೆಗೆ ಹಲವೆಡೆ ಶಂಕರಾಚಾರ್ಯರು ಸಂಚರಿಸಿದ್ದ ಕುರುಹುಗಳಿವೆ. ಕೇಂದ್ರ ಸಚಿವರು, ಸಂಸದರು ಮತ್ತು ಬಿಜೆಪಿಯ ಹಿರಿಯ ನಾಯಕರು ನಾಳೆ ದೇಶದ 100ಕ್ಕೂ ಹೆಚ್ಚು ಪವಿತ್ರ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದಾರೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಅಗತ್ಯ ಸಿದ್ದತೆಗಳನ್ನು ಬಿಜೆಪಿ ಮಾಡಿಕೊಂಡಿದೆ.

ರಾಷ್ಟ್ರವ್ಯಾಪಿ ಕಾರ್ಯಕ್ರಮದ ಭಾಗವಾಗಿ, ಬಿಜೆಪಿಯು 12 ಜ್ಯೋತಿರ್ಲಿಂಗಗಳನ್ನು ಹೊರತುಪಡಿಸಿ ಪುರಿ (ಒಡಿಶಾ), ಶೃಂಗೇರಿ (ಕರ್ನಾಟಕ), ದ್ವಾರಕಾ (ಗುಜರಾತ್) ಮತ್ತು ಜ್ಯೋತಿರ್ಮಠ (ಉತ್ತರಾಖಂಡ) ದಲ್ಲಿರುವ ಆದಿ ಶಂಕರಾಚಾರ್ಯರಿಗೆ ಸಂಬಂಧಿಸಿದ ನಾಲ್ಕು ಧಾಮಗಳಿಗೆ ಸಾಧುಗಳು ಮತ್ತು ಭಕ್ತರನ್ನು ಆಹ್ವಾನಿಸಿದೆ. ಗುಜರಾತಿನ ಸೋಮನಾಥ ದೇವಾಲಯ ಮತ್ತು ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯ ಮತ್ತು 87 ಇತರ ಪ್ರಮುಖ ದೇವಾಲಯಗಳನ್ನು ಆದಿ ಶಂಕರಾಚಾರ್ಯರು ದೇಶಾದ್ಯಂತ ತಮ್ಮ ಪ್ರಯಾಣದ ಸಮಯದಲ್ಲಿ ನಡೆದ ಮಾರ್ಗದಲ್ಲಿ ಸ್ಥಾಪಿಸಲಾಯಿತು.

ಬಿಜೆಪಿ ಮೂಲಗಳು ಹೇಳುವ ಪ್ರಕಾರ, ಕೇಂದ್ರ ಸಚಿವರು ಮತ್ತು ಹಿರಿಯ ಬಿಜೆಪಿ ಸಂಸದರು ಮತ್ತು ಪಕ್ಷದ ಮುಖಂಡರು ಪ್ರಮುಖ ಸ್ಥಳಗಳಿಗೆ ಪ್ರಯಾಣಿಸಲಿದ್ದಾರೆ. ನಾಳೆ ಬೆಳಿಗ್ಗೆ ಕೇದಾರನಾಥದಲ್ಲಿ ಪ್ರಧಾನ ಮಂತ್ರಿ ಮೋದಿ ಎರಡು ಗಂಟೆಗಳ ಕಾಲ ಉಪಸ್ಥಿತರಿರುತ್ತಾರೆ. ಈ ಹೆಚ್ಚಿನ ನಾಯಕರು ತಮ್ಮ ತವರು ರಾಜ್ಯಗಳಲ್ಲಿರುವ ಪವಿತ್ರ ಸ್ಥಳಗಳಿಗೆ ಪ್ರಯಾಣಿಸುತ್ತಾರೆ. ಕೇದಾರನಾಥದಿಂದ ಪ್ರಧಾನಮಂತ್ರಿ ಕಾರ್ಯಕ್ರಮದ ನೇರಪ್ರಸಾರಕ್ಕಾಗಿ ಈ ಎಲ್ಲಾ ಸ್ಥಳಗಳಲ್ಲಿ ಎಲ್‌ಇಡಿಗಳು ಮತ್ತು ದೊಡ್ಡ ಪರದೆಗಳನ್ನು ಹಾಕಲಾಗುತ್ತಿದೆ. ಪ್ರಧಾನಮಂತ್ರಿ ಮೋದಿ, ಕೇದಾರನಾಥದಲ್ಲಿ ಆದಿ ಶಂಕರಾಚಾರ್ಯರ ಪುನರ್ ನಿರ್ಮಾಣಗೊಂಡಿರುವ ಸಮಾಧಿ (2013ರ ಪ್ರವಾಹದ ನಂತರ) ಮತ್ತು ಅವರ ಪ್ರತಿಮೆ ಸೇರಿದಂತೆ ಹಲವಾರು ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. ಕೇದಾರನಾಥದಲ್ಲಿ ಪ್ರತಿಷ್ಠಾಪನೆ ಮಾಡಿರುವ ಆದಿ ಗುರು ಶಂಕರಾಚಾರ್ಯರ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ಕೆತ್ತಿದ್ದಾರೆ. ಕೇದಾರನಾಥ ಭೇಟಿ ವೇಳೆ ಪ್ರಧಾನಿ ಮೋದಿ ಭಾಷಣವನ್ನೂ ಮಾಡಲಿದ್ದಾರೆ.

ಉತ್ತರಾಖಂಡ ಸರ್ಕಾರದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಹಲವಾರು ವಿಐಪಿಗಳು ಮತ್ತು ಇತರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಪ್ರಧಾನಿಯವರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ. ದೇಶದ ವಿವಿಧ ಅಖಾಡಗಳ ಮಹಾಮಂಡಲೇಶ್ವರರನ್ನು (ಮುಖ್ಯಸ್ಥರು) ಕೇದಾರನಾಥದಲ್ಲಿ ಪ್ರಧಾನಮಂತ್ರಿ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಆಹ್ವಾನಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪ್ರಧಾನಿ ಮೋದಿ ಭೇಟಿ ಮತ್ತು ದೇಶದಾದ್ಯಂತ ಬಿಜೆಪಿಯ ಮೆಗಾ ಕಾರ್ಯಕ್ರಮವು ಉತ್ತರಾಖಂಡ ಚುನಾವಣೆಗೆ ತಿಂಗಳುಗಳ ಮುಂಚಿತವಾಗಿ ನಡೆಯುತ್ತಿದೆ. ಚಾರ್ ಧಾಮ್‌ಗಳನ್ನು ನಿರ್ವಹಿಸಲು ದೇವಸ್ಥಾನ ಕಾಯ್ದೆಯನ್ನು ಜಾರಿಗೊಳಿಸುವ ಕುರಿತು ಬಿಜೆಪಿಯು ರಾಜ್ಯದ ಸ್ಥಳೀಯ ಅರ್ಚಕರಿಂದ ಆಕ್ಷೇಪಣೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ಪ್ರಧಾನಿ ಮೋದಿ ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ವಾರ ಕೇದಾರನಾಥ್ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿದ್ದ ಉತ್ತರಾಖಂಡ್ ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಕೇದಾರನಾಥ್ ದೇವಸ್ಥಾನದ ಬಳಿ ಅರ್ಚಕರು ಘೇರಾವ್ ಹಾಕಿದ್ದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇದಾರನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ನಂತರ ಶ್ರೀ ಆದಿ ಶಂಕರಾಚಾರ್ಯರ ಪುನರ್ ನಿರ್ಮಾಣಗೊಂಡಿರುವ ಸಮಾಧಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

2013ರ ಪ್ರವಾಹದಲ್ಲಿ ನಾಶವಾದ ನಂತರ ಸಮಾಧಿಯನ್ನು ಪುನರ್ ನಿರ್ಮಿಸಲಾಯಿತು. ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ಸಂಪೂರ್ಣ ಪುನರ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ, ಅವರು ಯೋಜನೆಯ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿದ್ದಾರೆ ಮತ್ತು ಮೇಲ್ವಿಚಾರಣೆ ಮಾಡಿದ್ದಾರೆ. ಪ್ರಧಾನಮಂತ್ರಿಯವರು ಸರಸ್ವತಿ ಆಸ್ತಪಥದ ಉದ್ದಕ್ಕೂ ಕಾರ್ಯಗತಗೊಂಡ ಮತ್ತು ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸುತ್ತಾರೆ. ಸಾರ್ವಜನಿಕ ಱಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.

ಪ್ರಧಾನಿಯಾಗಿ ಮೋದಿಯವರು ಕೇದಾರನಾಥಕ್ಕೆ ನೀಡುತ್ತಿರುವ ಐದನೇ ಭೇಟಿ ಇದಾಗಿದೆ. ಸರಸ್ವತಿ ತಡೆಗೋಡೆ ಆಸ್ಥಾಪತ್ ಮತ್ತ ಘಾಟ್​ಗಳ ತಡೆಗೋಡೆ, ತೀರ್ಥ ಪುರೋಹಿತ ಮನೆಗಳು ಮತ್ತು ಮಂದಾಕಿನಿ ನದಿಯ ಗರುಡ್ ಚಟ್ಟಿ ಸೇತುವೆ ಸೇರಿದಂತೆ ಪೂರ್ಣಗೊಂಡಿರುವ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ₹ 130 ಕೋಟಿಗೂ ಅಧಿಕ ವೆಚ್ಚದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಸಂಗಮ ಘಾಟ್‌ನ ಪುನರಾಭಿವೃದ್ಧಿ, ಪ್ರಥಮ ಚಿಕಿತ್ಸೆ ಮತ್ತು ಪ್ರವಾಸಿ ಸೌಲಭ್ಯ ಕೇಂದ್ರ, ಆಡಳಿತ ಕಚೇರಿ ಮತ್ತು ಆಸ್ಪತ್ರೆ, ಎರಡು ಅತಿಥಿ ಗೃಹಗಳು, ಪೊಲೀಸ್ ಠಾಣೆ, ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್, ಮಂದಾಕಿನಿ ಆಸ್ಥಾಪತ್ ಸರತಿ ಸೇರಿದಂತೆ ₹ 180 ಕೋಟಿಗೂ ಹೆಚ್ಚು ಮೌಲ್ಯದ ಬಹು ಯೋಜನೆಗಳಿಗೆ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ. ರೈನ್‌ಶೆಲ್ಟರ್ ಮತ್ತು ಸರಸ್ವತಿ ನಾಗರಿಕ ಮೂಲಸೌಕರ್ಯ ಬಿಲ್ಡಿಂಗ್ ಸೇರಿದಂತೆ ವಿವಿಧ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುವರು.

ಇದನ್ನೂ ಓದಿ: ಉತ್ತರಾಖಂಡ ಸರ್ಕಾರದ ವಿರುದ್ಧ ಆಕ್ರೋಶ; ಕೇದಾರನಾಥ ದೇಗುಲದ ಹೊರಗೆ ತಲೆಕೆಳಗಾಗಿ ನಿಂತು ಪ್ರತಿಭಟನೆ ನಡೆಸುತ್ತಿರುವ ಅರ್ಚಕ
ಇದನ್ನೂ ಓದಿ: ಸಾಕಿನ್ನು ನಿಲ್ಲಿಸಿ: ಮಿಲಿಟರಿ ಸ್ಮಶಾನದಲ್ಲಿ ನಿಂತ ಪೋಪ್​ ಶಸ್ತ್ರಾಸ್ತ್ರ ತಯಾರಿಕೆಗೆ ನೀಡಿದ ಸಂದೇಶವಿದು

TV9 Kannada


Leave a Reply

Your email address will not be published. Required fields are marked *