ಕೇದಾರನಾಥದಲ್ಲಿ ಕನ್ನಡಿಗನ ಕಲಾ ಕುಸುರಿ; ಆದಿ ಗುರು ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ


ನವದೆಹಲಿ: ಅದ್ವೈತ ತತ್ವ ಪ್ರತಿಪಾದಕ ಆದಿ ಶಂಕರಾಚಾರ್ಯರ ಪ್ರತಿಮೆಯನ್ನ ಕೇದಾರನಾಥದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. 

2013ರ ಉತ್ತರಾಖಂಡ್ ಪ್ರವಾಹದಲ್ಲಿ ಆದಿ ಶಂಕರಾಚಾರ್ಯರ ಸಮಾಧಿ ಧ್ವಂಸಗೊಂಡಿತ್ತು. ಇದೀಗ ಅದನ್ನ ಪುನರ್​ ನಿರ್ಮಾಣ ಮಾಡಲಾಗಿದ್ದು, ನೂತನ ಪ್ರತಿಮೆ 12 ಅಡಿ ಉದ್ದ, 9 ಅಡಿ ಅಗಲದ 28 ಟನ್ ತೂಕ ಹೊಂದಿದೆ. ಅದನ್ನು ಇದೀಗ ಮೋದಿ ಅವರು ವಿಶೇಷ ಪೂಜೆ ಸಲ್ಲಿಸಿ ಅನಾವರಣಗೊಳಿಸಿದ್ದಾರೆ.

ಇಂದು ಬೆಳಗ್ಗೆ ಕೇದಾರನಾಥ್​ಕ್ಕೆ ಆಗಮಿಸಿದ್ದ ಮೋದಿ, ಮೊದಲು ಶಿವ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಆ ಬಳಿಕ ನೂತನ ಪ್ರತಿಮೆಯನ್ನ ಉದ್ಘಾಟನೆ ಮಾಡಿ ಪ್ರರ್ಥನೆ ಸಲ್ಲಿಸಿದ್ದಾರೆ. ಇನ್ನು ಈ ವಿಶೇಷ ಪ್ರತಿಮೆಯನ್ನ ಮೈಸೂರುನ ಶಿಲ್ಪಿ ತಯಾರಿಸಿರುವುದು ವಿಶೇಷ

ಇದನ್ನೂ ಓದಿ:ಮತ್ತೆ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು; ಕೇದಾರನಾಥದಲ್ಲಿ ಕನ್ನಡಿಗನ ಕಲಾ ಕುಸುರಿ ಅನಾವರಣ

News First Live Kannada


Leave a Reply

Your email address will not be published. Required fields are marked *