ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಕೇದಾರನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಇಂದು ಬೆಳಗ್ಗೆ ದೇವಸ್ಥಾನಕ್ಕೆ ಆಗಮಿಸಿದ ಪ್ರದಾನಿ ಮೋದಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾರುದ್ರಾಭಿಷೇಕ ಮಾಡಿದರು. ಆ ಬಳಿಕ ಅವರು ಸರಸ್ವತಿ ಅಷ್ಟಪಥ ಯೋಜನೆಯ ಕಾಮಗಾರಿಗಳನ್ನು ವೀಕ್ಷಣೆ ಮಾಡಲಿದ್ದು ಶಂಕರಾಚಾರ್ಯರ ನೂತನ ಪ್ರತಿಮೆಯನ್ನ ಲೋಕಾರ್ಪಣೆಗೊಳಿಸಲಿದ್ದಾರೆ.
ಪ್ರಧಾನಿ ಮೋದಿಗೆ ಉತ್ತಾರಖಾಂಡ್ ಮುಖ್ಯಮಂತ್ರಿ ಪುಷ್ಕೆರ್ ಧಮಿ ಸಾರ್ತ್ ನೀಡಿದ್ದು ಮೋದಿ ಭೇಟಿ ಹಿನ್ನೆಲೆ ದೇಗುಲಕ್ಕೆ ಭಕ್ತರಿಗೆ ನಿಷೇಧ ಹೇರಲಾಗಿದೆ. ಇನ್ನು ಪ್ರಧಾನಿಯಾದ ಬಳಿಕ ಕೇದಾರನಾಥ್ಕ್ಕೆ ಮೋದಿ ಅವರ 5 ನೇ ಭೇಟಿ ಇದಾಗಿದೆ. ಇನ್ನು ₹400 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಾಗಾರಿಗಳನ್ನ ಉದ್ಘಾಟನೆ ಮಾಡಲಿರುವ ಮೋದಿ ನಂತರ ಸಾರ್ವಜನಿಕರನ್ನ ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ:ಕೇದಾರನಾಥ್ನಲ್ಲಿ ಪ್ರಧಾನಿ ಮೋದಿ.. ₹400 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ
शैल सुन्दर अति हिमालय, शुभ मन्दिर सुन्दरम ।
निकट मन्दाकिनी सरस्वती, जय केदार नमाम्यहम ।।प्रधानमंत्री श्री @narendramodi केदारनाथ में भगवान केदार का रुद्राभिषेक कर रहे हैं। pic.twitter.com/NZt0HV5FnT
— BJP (@BJP4India) November 5, 2021