ಕೇದಾರನಾಥ್​​ನಲ್ಲಿ ಪ್ರಧಾನಿ ಮೋದಿ.. ₹400 ಕೋಟಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ


ನವದೆಹಲಿ: ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಉತ್ತರಾಖಂಡ್​ನ ಕೇದಾರನಾಥ್​ ತಲುಪಿದ್ದಾರೆ. ಇನ್ನೇನು ಕೆಲವೇ ಹೊತ್ತಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಆದಿ ಶಂಕರಾಚಾರ್ಯರ ಪ್ರತಿಮೆ ಹಾಗೂ ಸಮಾಧಿಯನ್ನ ಅನಾವರಣ ಮಾಡಲಿದ್ದಾರೆ.

Image

ಆದಿ ಗುರು ಶಂಕರಾಚಾರ್ಯರ ಸಮಾಧಿ ಜೀಣೋದ್ಧಾರ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಅದನ್ನ ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 2013ರ ಉತ್ತರಾಖಂಡ್ ಪ್ರವಾಹದಲ್ಲಿ ಆದಿ ಶಂಕರಾಚಾರ್ಯರ ಸಮಾಧಿಯನ್ನು ಧ್ವಂಸಗೊಂಡಿತ್ತು, ಇದೀಗ ಅದನ್ನ ಪುನರ್​ ನಿರ್ಮಾಣ ಮಾಡಲಾಗಿದೆ. ಇದರೊಂದಿಗೆ ಯಾತ್ರಾರ್ಥಿಗಳ ನಿವಾಸ ಸರಸ್ವತಿ ಘಾಟ್ ಕೂಡ ಸಿದ್ಧಗೊಂಡಿದ್ದು, ಅದು ಕೂಡ ಲೋಕಾರ್ಪಣೆಯಾಗುತ್ತಿದೆ.

Image

ಸರಸ್ವತಿ ರಿಟೈನಿಂಗ್ ವಾಲ್ ಅಸ್ಥಾಪಥ್ ಮತ್ತು ಘಾಟ್‌ಗಳು, ಮಂದಾಕಿನಿ ರಿಟೈನಿಂಗ್ ವಾಲ್ ಅಸ್ಥಾಪತ್, ತೀರ್ಥ ಪುರೋಹಿತರ ಮನೆಗಳು ಮತ್ತು ಮಂದಾಕಿನಿ ನದಿಯ ಗರುಡ್ ಚಟ್ಟಿ ಸೇತುವೆ ಸೇರಿದಂತೆ ₹400 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಕಾಮಾಗಾರಿಗಳನ್ನ ಉದ್ಘಾಟನೆ ಮಾಡಲಿದ್ದಾರೆ. ನಂತರ ಸಾರ್ವಜನಿಕರನ್ನ ಉದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ.

News First Live Kannada


Leave a Reply

Your email address will not be published. Required fields are marked *