ಇಂದು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಆಸ್ಟ್ರೇಲಿಯಾಗೆ 173 ರನ್ ಟಾರ್ಗೆಟ್ ನೀಡಿದೆ. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಭರ್ಜರಿ ಅರ್ಧಶತಕ ಗಳಿಸಿದರು. ಇವರ ಅದ್ಭುತ ನೆರವಿನಿಂದಾಗಿ ನ್ಯೂಜಿಲೆಂಡ್ ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್ ಪೇರಿಸಲು ಸಾಧ್ಯವಾಗಿದೆ.
ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 28, ನಾಯಕ ಕೇನ್ ವಿಲಿಯಮ್ಸನ್ 85, ಗ್ಲೆನ್ ಫಿಲಿಪ್ಸ್ 18 ರನ್ ಗಳಿಸಿದರು.
The post ಕೇನ್ ವಿಲಿಯಮ್ಸನ್ ಸಿಡಿಲಬ್ಬರದ ಅರ್ಧಶತಕ; ಆಸ್ಟ್ರೇಲಿಯಾಗೆ ನ್ಯೂಜಿಲೆಂಡ್ 173 ರನ್ ಟಾರ್ಗೆಟ್ appeared first on News First Kannada.