ಕೇರಳಕ್ಕೆ ನೊರೊವೈರಸ್​ ಕಂಟಕ.. ಏನಿದು..? ಲಕ್ಷಣಗಳು ಏನೇನು..?


ಕೇರಳ: ದೇವರನಾಡು ಎಂದೇ ಖ್ಯಾತಿಗಳಿಸಿರುವ ಕೇರಳದಲ್ಲಿ ಇದೀಗ ಕೊರೊನಾ ತಣ್ಣಗಾಗಿರುವ ಹೊತ್ತಲ್ಲಿ ಹೊಸದೊಂದು ವೈರಸ್​ ಪತ್ತೆಯಾಗಿ ಆತಂಕ ಸೃಷ್ಟಿಸಿದೆ.

ಹೌದು ಕೊರೊನಾ ಸೋಂಕಿನ ಜೊತೆಗೆ ಕೇರಳದಲ್ಲಿ ‘ನೊರೊವೈರಸ್’​ ಎಂಬ ಹೊಸ ವೈರಸ್​ನ ಕಾಟ ಶುರುವಾಗಿದೆ. ಎರಡು ವಾರಗಳ ಅಂತರದಲ್ಲಿ 13 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ ಅಂತಾ ಆರೋಗ್ಯ ಸಚಿವೆ ವೀಣಾ ಜಾರ್ಜ್​ ಮಾಹಿತಿ ನೀಡಿದ್ದಾರೆ.

ಏನಿದು ಸೋಂಕು?
ನೊರೊವೈರಸ್, ಕಲುಷಿತ ನೀರು, ಆಹಾರ ಜೊತೆಗೆ ಪ್ರಾಣಿಗಳಿಂದ ಹರಡುವ ರೋಗ ಎನ್ನಲಾಗಿದೆ. ಕಳೆದ ವಾರದಲ್ಲಿ ವಯನಾಡ್ ಜಿಲ್ಲೆಯ ವೈತಿರಿ ಬಳಿಯ ಪೂಕೋಡ್‌ ನಲ್ಲಿರುವ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ಈ ಸೋಂಕು ದೃಢಪಟ್ಟಿದೆ. ಸದ್ಯ ಈ ರೋಗದ ಕುರಿತು ಹೋರಾಡಲು ಸ್ವಚ್ಛೆತೆಯನ್ನು ಕಾಪಾಡಿಕೊಳ್ಳುವಂತೆ ಕೇರಳ ಸರ್ಕಾರ ಮನವಿ ಮಾಡಿದೆ.

ಸೋಂಕಿನ ಲಕ್ಷಣಗಳೇನು?

  • ನೊರೊವೈರಸ್ ಸೋಂಕು ಜಠರ, ಕರುಳಿಗೆ ಹಾನಿ ಉಂಟುಮಾಡುತ್ತದೆ
  • ಊಟ ಸೇವನೆಯ ನಂತರ ಹೊಟ್ಟೆ ಮತ್ತು ಕರುಳಿನ ಒಳಪದರದ ಉರಿಯೂತ, ತೀವ್ರ ವಾಂತಿ, ಅತಿಸಾರವನ್ನು ಉಂಟು ಮಾಡುತ್ತದೆ.
  • ಕಲ್ಮಶ ಮಿಶ್ರಿತ ಕುಡಿಯುವ ನೀರಿನ ಮೂಲಕವೇ ಈ ವೈರಸ್‌ ಸೋಂಕು ಅತಿಯಾಗಿ ಹರಡುತ್ತದೆ ಎನ್ನಲಾಗಿದೆ.
  • ನೊರೊವೈರಸ್ ಆರೋಗ್ಯವಂತ ಜನರ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ, ಆದರೆ ಚಿಕ್ಕಮಕ್ಕಳು, ವಯಸ್ಸಾದವರು ಮತ್ತು ಇತರೆ ರೋಗಗಳಿರುವವರಲ್ಲಿ ಇದು ಗಂಭೀರವಾಗಿರಬಹುದು.
  • ಪದೇ ಪದೇ ಅತಿಯಾದ ತಲೆನೋವು ಕಾಣಿಸಿಕೊಳ್ಳುಲು ಆರಂಭಿಸಿದ್ರೆ ನೊರೊವೈರಸ್​ನ ಪ್ರಾಥಮಿಕ ಹಂತ ಕಾಣಿಸಿಕೊಂಡಂತೆ.

ಮಾರ್ಗಸೂಚಿ ರಿಲೀಸ್​ ಮಾಡಿದ ಸರ್ಕಾರ
ನೊರೊವೈರಸ್​ನ ಆರಂಭಿಕ ಹಂತದಲ್ಲಿ ಕಟ್ಟಿಹಾಕಲು ಪ್ಲಾನ್​ ರೂಪಿಸಿರುವ ಕೇರಳ ಸರ್ಕಾರ ಕೊರೊನಾ ಮಾದರಿಯಂತೆ ನೊರೊವೈರಸ್​ಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹೆಚ್ಚಾಗಿ ಸ್ವಚ್ಛತೆ  ಕಾಪಾಡಿಕೊಳ್ಳುವುದು ಮತ್ತು ಕುಡಿಯುವ ನೀರಿನ ಆಕರಗಳನ್ನು ಶುಚಿಗೊಳಿಸಿ ಬಳಸಿಕೊಳ್ಳುವುದು. ಸದಾ ಕೈಗಳನ್ನು ಸೋಪ್​ ಮತ್ತು ಸ್ಯಾನಿಟೈಜರ್​​ಗಳಿಂದ ತೊಳೆಯುವುದು.

ನೀರಿನ ಆಕರಗಳಿಂದಲೇ ಇದು ಹರಡುವ ಸಾಧ್ಯತೆ ಹೆಚ್ಚಿರುವ ಕಾರಣ ಸದ್ಯ ಕುದಿಸಿದ ನೀರು ಮತ್ತು ಶುದ್ಧವಾದ ನೀರನ್ನು ಹೆಚ್ಚಾಗಿ ಬಳಸಬೇಕು. ಜೊತೆಗೆ ಮೀನು, ಏಡಿ ಇತರೆ ಸೀ ಫುಡ್​ಗಳನ್ನು ಚೆನ್ನಾಗಿ ಬೇಯಿಸಿದ ನಂತರ ಸೇವಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್​ ತಿಳಿಸಿದ್ದಾರೆ.

ಇದನ್ನೂ ಓದಿ: ದೇವರನಾಡಲ್ಲಿ ಬೆಚ್ಚಿ ಬೀಳಿಸಿದ ಹೊಸ ವೈರಸ್; 13 ಮಂದಿಗೆ ನೊರೊವೈರಸ್ ಸೋಂಕು

News First Live Kannada


Leave a Reply

Your email address will not be published.