ಕೇರಳದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತನ ಬರ್ಬರ ಹತ್ಯೆ; ಪಿಎಫ್​ಐ ಕೈವಾಡವೆಂದ ಬಿಜೆಪಿ | Murder RSS Worker Hacked To Death In Kerala


ಕೇರಳದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತನ ಬರ್ಬರ ಹತ್ಯೆ; ಪಿಎಫ್​ಐ ಕೈವಾಡವೆಂದ ಬಿಜೆಪಿ

ಆರ್​ಎಸ್​ಎಸ್​ ಕಾರ್ಯಕರ್ತ ಶ್ರೀನಿವಾಸನ್

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್‌ನಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತನನ್ನು (RSS Worker) ಅಪರಿಚಿತ ಶನಿವಾರ ಮಧ್ಯಾಹ್ನ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಾಲಕ್ಕಾಡ್ (Palakkad) ಪಟ್ಟಣದ ಹೃದಯಭಾಗದಲ್ಲಿರುವ ಆರ್​ಎಸ್​ಎಸ್​ ಕಾರ್ಯಕರ್ತ ಶ್ರೀನಿವಾಸನ್ (45) ಎಂಬುವರ ಅಂಗಡಿಯಲ್ಲೇ ಅವರ ಮೇಲೆ ಗುಂಪೊಂದು ದಾಳಿ ನಡೆಸಿದೆ.

ಆರೋಪಿಗಳು ದ್ವಿಚಕ್ರವಾಹನದಲ್ಲಿ ಸ್ಥಳಕ್ಕೆ ಬಂದಿದ್ದಾರೆ ಎನ್ನಲಾಗಿದೆ. ತಕ್ಷಣ ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸನ್ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಈ ಘಟನೆ ನಡೆದ ಸ್ಥಳದ ಸಮೀಪದ ಹಳ್ಳಿಯೊಂದರಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನಾಯಕನನ್ನು ಹತ್ಯೆ ಮಾಡಿದ ಒಂದೇ ದಿನದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತನ ಕೊಲೆಯಾಗಿರುವುದು ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ.

ಶುಕ್ರವಾರ ಮಧ್ಯಾಹ್ನ ಮಸೀದಿಯೊಂದರಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದ ಸುಬೈರ್ (43) ಅವರನ್ನು ಎಲಪ್ಪುಲ್ಲಿಯಲ್ಲಿ ಹತ್ಯೆ ಮಾಡಲಾಗಿತ್ತು. ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಶ್ರೀನಿವಾಸನ್ ಹತ್ಯೆಯ ಹಿಂದೆ ಪಿಎಫ್‌ಐನ ರಾಜಕೀಯ ಶಾಖೆಯಾದ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕೈವಾಡವಿದೆ ಎಂದು ಆರೋಪಿಸಿದೆ.

TV9 Kannada


Leave a Reply

Your email address will not be published.