ಕೇರಳದಲ್ಲಿ ತೌಕ್ತೆ ಸೈಕ್ಲೋನ್ ಅಬ್ಬರ, ಇಂದು ಕರ್ನಾಟಕಕ್ಕೆ ಅಪ್ಪಳಿಸಲಿರುವ ಚಂಡಮಾರುತ

ಕೇರಳದಲ್ಲಿ ತೌಕ್ತೆ ಸೈಕ್ಲೋನ್ ಅಬ್ಬರ, ಇಂದು ಕರ್ನಾಟಕಕ್ಕೆ ಅಪ್ಪಳಿಸಲಿರುವ ಚಂಡಮಾರುತ

ತಿರುವನಂತಪುರಂ: ಅರಬ್ಬಿ ಸಮುದ್ರದಲ್ಲಿ ಎದ್ದಿರುವ ತೌಕ್ತೆ ಚಂಡಮಾರುತದ ಅಬ್ಬರ ಕೇರಳದಲ್ಲಿ ಜೋರಾಗಿದೆ. ಇದರಿಂದ ಭಾರಿ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ 9 ಎನ್​ಡಿಆರ್​​​ಎಫ್​​ ತಂಡಗಳು ಕೇರಳಕ್ಕೆ ದೌಡಾಯಿಸಿವೆ. ಇನ್ನು ತೌಕ್ತೆ ಚಂಡಮಾರುತ ಇಂದು ಕರ್ನಾಟಕದ ಕರಾವಳಿಗೆ ಅಪ್ಪಳಿಸಲಿದ್ದು, ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೊಡಗು, ದಕ್ಷಿಣ ಕನ್ನಡದಲ್ಲೂ ಎಚ್ಚರದಿಂದಿರುವಂತೆ ಹವಾಮಾನ ಇಲಾಖೆ ಸೂಚಿಸಿದೆ.

The post ಕೇರಳದಲ್ಲಿ ತೌಕ್ತೆ ಸೈಕ್ಲೋನ್ ಅಬ್ಬರ, ಇಂದು ಕರ್ನಾಟಕಕ್ಕೆ ಅಪ್ಪಳಿಸಲಿರುವ ಚಂಡಮಾರುತ appeared first on News First Kannada.

Source: newsfirstlive.com

Source link