ತಿರುವನಂತಪುರಂ: ಕೇರಳದಲ್ಲಿ ಮೇ 8 ರಿಂದ 16ನೇ ತಾರೀಖಿನವರೆಗೆ ಲಾಕ್​ಡೌನ್ ಜಾರಿ ಮಾಡಿ ಸಿಎಂ ಪಿಣರಾಯಿ ವಿಜಯನ್ ಇಂದು ಆದೇಶ ಹೊರಡಿಸಿದ್ದಾರೆ.

ಪ್ರಸ್ತುತ ಕೇರಳದಲ್ಲಿ ರಾತ್ರಿ 9ಗಂಟೆಯಿಂದ ಬೆಳಗ್ಗೆ 5ರವರೆಗೆ ನೈಟ್​ ಕರ್ಫ್ಯೂ ಹಾಗೂ ವಾರಾಂತ್ಯದಲ್ಲಿ ಭಾಗಶಃ ಲಾಕ್​ಡೌನ್​​ನಂತ ನಿಯಮಗಳನ್ನ ಹೇರಲಾಗಿದೆ. ಶನಿವಾರದಿಂದ ರಾಜ್ಯಾದ್ಯಂತ ಸಂಪೂರ್ಣ ಲಾಕ್​ಡೌನ್ ಜಾರಿಯಾಗಲಿದೆ.

ಕೊರೊನಾ ಎರಡನೇ ಅಲೆ ವ್ಯಾಪಕವಾಗಿರುವ ಹಿನ್ನೆಲೆ ಈಗಾಗಲೇ ಅನೇಕ ರಾಜ್ಯಗಳು ಲಾಕ್​ಡೌನ್ ಹಾಗೂ ಕರ್ಫ್ಯು ಹೇರಿಕೆಯ ಮೊರೆ ಹೋಗಿವೆ. ಇನ್ನು ದೇಶಾದ್ಯಂತ ಸಂಪೂರ್ಣ ಲಾಕ್​ಡೌನ್ ಮಾಡಬೇಕು, ಇಲ್ಲವಾದ್ರೆ 3ನೇ ಕೊರೊನಾ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹಲವು ತಜ್ಞರು ಹೇಳಿದ್ದಾರೆ.

ದೇಶವ್ಯಾಪಿ ಲಾಕ್​ಡೌನ್ ಮಾಡುವ ಬಗ್ಗೆ ಉತ್ತರಿಸಿರೋ ನೀತಿ ಆಯೋಗದ ಸದಸ್ಯ ವಿ.ಕೆ ಪೌಲ್, ಇನ್ನು ಹೆಚ್ಚಿನ ಕ್ರಮ ಕೈಗೊಳ್ಳುವ ಅಗತ್ಯವಿದ್ದರೆ ಏನು ಮಾಡಬೇಕು ಎಂಬ ಆಯ್ಕೆಗಳನ್ನು ಚರ್ಚಿಸಲಾಗುತ್ತಿದೆ. ಸೋಂಕಿನ ಸರಪಳಿಯನ್ನು ಮುರಿಯುವ ಸಲುವಾಗಿ ನಿರ್ಬಂಧಗಳನ್ನು ವಿಧಿಸಲು ರಾಜ್ಯಗಳಿಗೆ ಈಗಾಗಲೇ ಮಾರ್ಗಸೂಚಿ ಇದೆ ಎಂದು ಹೇಳಿದ್ದಾರೆ.

The post ಕೇರಳದಲ್ಲಿ ಮೇ 8ರಿಂದ 16ರವರೆಗೆ ಲಾಕ್​ಡೌನ್ ಜಾರಿ appeared first on News First Kannada.

Source: newsfirstlive.com

Source link