ತಿರುವನಂತಪುರಂ: ದೇಶದಾದ್ಯಂತ ಕೊರೊನಾ ಸೋಂಕು ಏರಿಕೆ ಕಾಣುತ್ತಿದೆ.. ಮತ್ತೊಂದೆಡೆ ವ್ಯಾಕ್ಸಿನ್, ಆಕ್ಸಿಜನ್, ವೆಂಟಿಲೇಟರ್​​ಗಳ ಕೊರತೆ ಎದುರಾಗುತ್ತಿದೆ. ಇಂಥ ಸಂದರ್ಭದಲ್ಲಿ ತಮ್ಮ ರಾಜ್ಯದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸೋದು ಆಯಾ ರಾಜ್ಯ ಸರ್ಕಾರಗಳ ಜವಾಬ್ದಾರಿ. ಅಲ್ಲದೇ ತಮ್ಮ ಬಳಿ ಇರುವ ಸಂಪನ್ಮೂಲಗಳ ಮಾಹಿತಿಯನ್ನು ರಾಜ್ಯದ ಜನತೆಯ ಎದುರು ಬಿಚ್ಚಿಡುವುದು ಸರ್ಕಾರಗಳ ಕೆಲಸ. ಹೀಗೆ ತಮ್ಮ ಬಳಿಯಿರುವ ಸಂಪನ್ಮೂಲಗಳ ಅಂಕಿ ಅಂಶಗಳನ್ನ ಪಾರದರ್ಶಕವಾಗಿಡುವ ಮೂಲಕ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಒಂದು ಕಡೆ ಕರ್ನಾಟಕದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಜನರು ಸಾವನ್ನಪ್ಪುತ್ತಿದ್ದರೂ ಸರ್ಕಾರ ನಮ್ಮಲ್ಲಿ ಸಾಕಷ್ಟು ಆಕ್ಸಿಜನ್ ಇದೆ ಎನ್ನುತ್ತಲೇ ಬರುತ್ತಿದೆ.. ಇನ್ನೊಂದೆಡೆ ಬೆಡ್​​ಗಳು ಸಿಗದೇ ಕೊರೊನಾ ಸೋಂಕಿತರು ಆಸ್ಪತ್ರೆಗಳ ಎದುರು, ಮನೆಗಳಲ್ಲೇ ಸಾವನ್ನಪ್ಪುತ್ತಿದ್ದರೂ ನಮ್ಮ ಬಳಿ ಸಾಕಷ್ಟು ಬೆಡ್​ಗಳಿವೆ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಲೇ ಇದೆ. ಇನ್ನೊಂದೆಡೆ ಅಧಿಕಾರಿಗಳು ಹಣದ ಆಸೆಗೆ ಬಡವರಿಗೆ ಸಿಗಬೇಕಿದ್ದ ಬೆಡ್​ಗಳನ್ನು ಹಣದ ಆಸೆಗೆ ಮಾರಿಕೊಳ್ತಿದ್ದಾರೆ. ಸರ್ಕಾರ ಸಂಪನ್ಮೂಲಗಳ ಅಂಕಿಅಂಶಗಳನ್ನ ಪಾರದರ್ಶಕವಾಗಿಡುವಲ್ಲಿ ಸೋತಿದೆ ಎಂದು ವಿಪಕ್ಷಗಳು ಕಿಡಿಕಾರಿದರೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ.

ಆದ್ರೆ ಇನ್ನೊಂದೆಡೆ, ಕೇರಳ ಸರ್ಕಾರ ಕೊರೊನಾ ಪರಿಸ್ಥಿತಿಯನ್ನ ನಿಭಾಯಿಸುವುದರಿಂದ ಹಿಡಿದು ಅಂಕಿಅಂಶಗಳನ್ನ ಪಾರದರ್ಶಕವಾಗಿಡುವುದರವರೆಗೆ.. ಸೋಂಕು ತೀವ್ರವಾಗಿ ಏರಿಕೆಯಾಗುತ್ತಿದ್ದರೂ ಅದರ ಅಂಕಿಅಂಶಗಳನ್ನ ಜನತೆಯ ಮುಂದಿಡುವ ಮೂಲಕ ತಮ್ಮ ಕೆಲಸವನ್ನ ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ.

ಇನ್ನು ಸದ್ಯ ಕೇರಳ ಸರ್ಕಾರದ ಬಳಿ 2,40,000 ಡೋಸ್ ವ್ಯಾಕ್ಸಿನ್ ಸ್ಟಾಕ್ ಇದ್ದು ಮುಂದಿನ ಎರಡು ದಿನಗಳವರೆಗೆ ವ್ಯಾಕ್ಸಿನೇಷನ್​ಗೆ ಚಿಂತೆಯಿಲ್ಲ.. ಇಂದು 4 ಲಕ್ಷ ಡೋಸ್ ಕೋವಿಶೀಲ್ಡ್ ಹಾಗೂ 70,000 ಕೊವ್ಯಾಕ್ಸಿನ್ ಡೋಸ್​ ಬಂದಿಳಿಯುವ ನಿರೀಕ್ಷೆ ಇದೆ. ಮೇ 3 ರವರೆಗೆ ಕೇರಳದಲ್ಲಿ 270.2 ಮೆಟ್ರಿಕ್ ಟನ್ ಲಿಕ್ವಿಡ್ ಆಕ್ಸಿಜನ್ ಹಾಗೂ 8.97 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಸ್ಟಾಕ್ ಇದೆ.. ನಮಗೆ ದಿನಕ್ಕೆ 108.35 ಮೆಟ್ರಿಕ್ ಟನ್ ಆಕ್ಸಿಜನ್ ಅವಶ್ಯಕತೆ ಇದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ.

ಸದ್ಯ ಇನ್ನಾದ್ರೂ ದೆಹಲಿ, ಮಹಾರಾಷ್ಟ್ರ, ಕರ್ನಾಟಕ, ಪಂಜಾಬ್ ಮುಂತಾದ ರಾಜ್ಯಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕಿದೆ. ಕೇವಲ ಧರ್ಮ, ಜಾತಿ, ತುಷ್ಟೀಕರಣ ಇದ್ರಿಂದ ಜನರ ಜೀವ ಉಳಿಯೋದಿಲ್ಲ ಅನ್ನೋದನ್ನ ಮತ್ತೊಮ್ಮೆ ಈ ಸೋಂಕು ತೋರಿಸಿಕೊಟ್ಟಿದೆ.

The post ‘ಕೇರಳದಲ್ಲಿ ವ್ಯಾಕ್ಸಿನ್, ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇಲ್ಲ’ ಏನಿದು ಪಿಣರಾಯಿ ಆಡಳಿತದ ಮ್ಯಾಜಿಕ್? appeared first on News First Kannada.

Source: newsfirstlive.com

Source link