ಕೇರಳದ ಭೂಗತ ಪಾತಕಿ ಜೀಯಾ ಮುಂಬೈನಲ್ಲಿ ಅರೆಸ್ಟ್


ತಿರುವನಂತಪುರಂ: ಕೇರಳದ ನಟೋರಿಯಸ್​ ಭೂಗತ ಪಾತಕಿ ಜೀಯಾನನ್ನ ಮುಂಬೈ ವಿಮಾನ ನಿಲ್ದಾಣದ ಬಳಿ ಕೇರಳ ಎಟಿಎಸ್ ಪಡೆ ಬಂಧಿಸಿದೆ.

ಕೇರಳದ ನಟೋರಿಯಸ್ ಗ್ಯಾಂಗ್ ಕಾಲಿಯಾ ರಫೀಕ್ ಮತ್ತು ಡಾನ್ ತಸ್ಲೀಮ್ ಹತ್ಯೆ ಪ್ರಕರಣದ ಆರೋಪಿಯಾಗಿರುವ ಪೈವಳಿಕೆಯ ಜೀಯಾ, ಕೊಲೆ , ಹಫ್ತಾ ವಸೂಲಿ ಪ್ರಕರಣದಲ್ಲೂ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದಾನೆ. ಅಲ್ಲದೇ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದ್ದ ಕಾಲಿಯಾ ರಫೀಕ್ ಹತ್ಯೆಯ ಪ್ರಮುಖ ಆರೋಪಿಯಾಗಿರುವ ಜೀಯಾ, ವಿದೇಶದಲ್ಲಿ ತನ್ನ ಭೂಗತ ನೆಟ್​ವರ್ಕ್​ ನಡೆಸುತ್ತಿದ್ದ.

ಸದ್ಯ ನಕಲಿ ಪಾಸ್‌ಪೋರ್ಟ್‌‌‌‌ ಬಳಸಿ ವೇಷ ಮರೆಸಿ ಕೇರಳಕ್ಕೆ ಬಂದಿದ್ದ ಜೀಯಾನನ್ನ ಕೇರಳ ಎ ಟಿ ಎಸ್ ಪಡೆಯ ಅಧಿಕಾರಿಗಳು ಬಂಧಿಸಿ, ಬಿಗಿ ಭದ್ರತೆಯ ಮಧ್ಯೆ ಭೂಗತ ಪಾತಕಿಯನ್ನ ಕೇರಳಕ್ಕೆ ಕರೆದ್ಯೊಯ್ದಿದ್ದಾರೆ.

News First Live Kannada


Leave a Reply

Your email address will not be published. Required fields are marked *