ನವದೆಹಲಿ:  ಕೇರಳ ರಾಜ್ಯ ಸರ್ಕಾರದ ಕೊರೊನಾ ನಿರ್ವಹಣೆ ಬಗ್ಗೆ ಪ್ರಶಂಸೆ ಕೇಳಿಬಂದ ಬೆನ್ನಲ್ಲೇ ಇದೀಗ ಅಲ್ಲಿನ ಆರೋಗ್ಯ ಕಾರ್ಯಕರ್ತರು ನರ್ಸ್​​ಗಳ ಬಗ್ಗೆಯೂ ಭಾರೀ ಮೆಚ್ಚುಗೆ ಕೇಳಿಬರ್ತಿದೆ.. ಕೇರಳದಲ್ಲಿ ನರ್ಸ್​ಗಳು ಹಾಗೂ ಆರೋಗ್ಯ ಸಿಬ್ಬಂದಿಯ ಕಾರ್ಯವನ್ನ ಬಗ್ಗೆ ಸ್ವತಃ ಪ್ರಧಾನಿ ಮೋದಿ ಟ್ವೀ್ಟ್ ಮೂಲಕ ಶ್ಲಾಘಿಸಿದ್ದಾರೆ.

ಕೇರಳದಲ್ಲಿ ವ್ಯಾಕ್ಸಿನೇಷನ್​ ಪ್ರಕ್ರಿಯೆ ಯಾವುದೇ ಸಮಸ್ಯೆ ಇಲ್ಲದೇ ಮುಂದುವರೆದಿದೆ, ಅಲ್ಲಿನ ಆರೋಗ್ಯ ಸಿಬ್ಬಂದಿ ಹಾಗೂ ನರ್ಸ್​ಗಳು ವ್ಯಾಕ್ಸಿನೇಷನ್ ವೇಳೆ ಅತ್ಯಮೂಲ್ಯವಾದ ವ್ಯಾಕ್ಸಿನ್​ ವೇಸ್ಟೇಜ್ ಆಗದಂತೆ ಬಳ ಎಚ್ಚರಿಕೆಯಿಂದ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್.. ವೇಸ್ಟೇಜ್ ಆಗಬೇಕಿದ್ದ ವ್ಯಾಕ್ಸಿನ್​ನ್ನೂ ಕೂಡ ಸದ್ಬಳಕೆ ಮಾಡಿಕೊಂಡು ನಿಗದಿತ ಸಂಖ್ಯೆಗಿಂತಲೂ ಹೆಚ್ಚು ಜನರಿಗೆ ವ್ಯಾಕ್ಸಿನೇಷನ್​ ಮಾಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

ಇದಕ್ಕೆ ಪ್ರಶಂಸೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ.. ನಮ್ಮ ಆರೋಗ್ಯ ಕಾರ್ಯಕರ್ತರು ಹಾಗೂ ನರ್ಸ್​ಗಳು ವ್ಯಾಕ್ಸಿನ್ ವೇಸ್ಟೇಜ್​​ ಹೆಚ್ಚಾಗದಂತೆ ನೋಡಿಕೊಳ್ಳುವ ಮೂಲಕ ಉದಾಹರಣೆ ಸೃಷ್ಟಿಸಿದ್ದಾರೆ. ಕೊರೊನಾ ವಿರುದ್ಧದ ಹೋರಾಟ ಬಲಪಡಿಸಲು ವ್ಯಾಕ್ಸಿನ್ ವೇಸ್ಟೇಜ್​ ಕಡಿಮೆಯಾಗಿಸುವುದು ಪ್ರಮುಖವಾದುದು ಎಂದಿದ್ದಾರೆ.

The post ಕೇರಳ ಆರೋಗ್ಯ ಕಾರ್ಯಕರ್ತರೇ ಭೇಷ್​ ಎಂದ ಪ್ರಧಾನಿ.. ಯಾಕೆ ಗೊತ್ತಾ..? appeared first on News First Kannada.

Source: newsfirstlive.com

Source link