ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ರೆಮ್ಡಿಸಿವಿರ್ ಔಷಧಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿರುವ ಘಟನೆ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಸಂಜೀವ್ ಕುಮಾರ್, ಪ್ರತೀಕ್, ಅಭಿಜಿತ್ ಬಂಧಿತ ಆರೋಪಿಗಳಾಗಿದ್ದು, ರಹಸ್ಯ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳ ಬಳಿ ರೆಮ್ಡಿಸಿವರ್ ಖರೀದಿ ಮಾಡಲು ಡೀಲ್​​ ನಡೆಸಿ ಬಲೆಗೆ ಕೆಡವಿದ್ದಾರೆ.

ಅಕ್ರಮವಾಗಿ ಹೆಚ್ಚಿನ ಬೆಲೆ ರೆಮ್ಡಿಸಿವರ್​ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಗಳೊಂದಿಗೆ ಮಾತನಾಡಿ ಔಷಧಿಗೆ ಬೇಡಿಕೆ ಇಟ್ಟಿದ್ದರು. ಇದರಂತೆ ರೆಮ್ಡಿಸಿವಿರ್ ಇಂಜೆಕ್ಷನ್ ಬೇಕು ಎಂದು ಸಂಜೀವ್​ಗೆ ಕರೆ ಮಾಡಿದ್ದರು. ಆ ವೇಳೆ ಆತ ಪ್ರತೀಕ್​ಗೆ ಸಂಪರ್ಕ ಮಾಡುವಂತೆ ತಿಳಿಸಿದ್ದ. ಆರೋಪಿ ಆರೋಪಿ ಪ್ರತೀಕ್ 1 ವಯಲ್​ ರೆಮ್ಡಿಸಿವರ್ ಔಷಧಿಯನ್ನು 10 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದ.

ಪ್ರತೀಕ್​ಗೆ ಕರೆ ಮಾಡಿದ್ದ ಪೊಲೀಸರು ರೆಮ್ಡಿಸಿವರ್ ಖರೀದಿಸಿಲು ವ್ಯವಹಾರ ಕುದುರಿಸಿದ್ದರು. ಇದರಂತೆ ಪ್ರತೀಕ್​​ ಒಬ್ಬ ಹುಡುಗನ ಕೈಲಿ ಔಷಧಿ ಕಳಿಸುವುದಾಗಿ ಹೇಳಿ, ಮತ್ತೊಬ್ಬ ಆರೋಪಿ ಅಭಿಜತ್ ಕೈಯಲ್ಲಿ ಔಷಧಿ ಕಳುಹಿಸಿದ್ದ. ಕೂಡಲೇ ಆರೋಪಿಗಳ ಮೇಲೆ ದಾಳಿ ಮಾಡಿದ ಬಸವೇಶ್ವರ ನಗರ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿ ತನಿಖೆ ನಡೆಸಿದ್ದಾರೆ. ಆರೋಪಿಗಳು ಕೇರಳಾದಲ್ಲಿ ರೆಮ್ಡಿಸಿವರ್ ಖರೀದಿ ಮಾಡಿ ಅದನ್ನು ಬೆಂಗಳೂರಿಗೆ ತಂದು ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ರು. ಸದ್ಯ ಬಂಧಿತರಿಂದ 25 ವಯಲ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

The post ಕೇರಳ ಟು ಬೆಂಗಳೂರು ರೆಮ್ಡಿಸಿವಿರ್ ದಂಧೆ – ಮೂವರನ್ನ ಬಲೆಗೆ ಕೆಡವಿದ ಪೊಲೀಸರು appeared first on News First Kannada.

Source: newsfirstlive.com

Source link