ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಹಲ್ಲೆ; ಇದು ತಮಿಳುನಾಡು ಅಲ್ಲ ಎಂದು ಎಚ್ಚರಿಕೆ ನೀಡಿದ ಹಲ್ಲೆಕೋರ – Kerala High Court Chief Justice S Manikumar attacked by drunk man in Kochi


ಭಾನುವಾರ ರಾತ್ರಿ  ವಿಮಾನ ನಿಲ್ದಾಣದಿಂದ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದ ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ವಾಹನ ಹಾಗೂ ಬೆಂಗಾವಲು ವಾಹನವನ್ನು ರಾತ್ರಿ 11 ಗಂಟೆ ಸುಮಾರಿಗೆ ಗೋಶ್ರೀ ಸೇತುವೆ ಬಳಿ ಟಿಜೊ ತಡೆದಿದ್ದಾನೆ.

ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಹಲ್ಲೆ; ಇದು ತಮಿಳುನಾಡು ಅಲ್ಲ ಎಂದು ಎಚ್ಚರಿಕೆ ನೀಡಿದ ಹಲ್ಲೆಕೋರ

ಕೇರಳ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು

ಕೊಚ್ಚಿ ನಗರದಲ್ಲಿ ಭಾನುವಾರ ರಾತ್ರಿ ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಕೇರಳ ಹೈಕೋರ್ಟ್(Kerala High Court)  ಮುಖ್ಯ ನ್ಯಾಯಮೂರ್ತಿ ಮೇಲೆ ಹಲ್ಲೆ ನಡೆಸಿದ್ದಾನೆ. ನ್ಯಾಯಮೂರ್ತಿ ಎಸ್ ಮಣಿಕುಮಾರ್ ( S Manikumar) ನೆಡುಂಬಶ್ಶೇರಿ ವಿಮಾನ ನಿಲ್ದಾಣದಿಂದ ಹಿಂತಿರುಗುತ್ತಿದ್ದಾಗ ಕೊಚ್ಚಿಯ(Kochi) ಗೋಶ್ರೀ ಸೇತುವೆಯಲ್ಲಿ ಟಿಜೊ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬ ಕಾರನ್ನು ತಡೆದು ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ಉಡುಂಬಂಚೋಳ ನಿವಾಸಿ ಟಿಜೊನನ್ನು ಬಂಧಿಸಲಾಗಿದೆ. ವರದಿಗಳ ಪ್ರಕಾರ, ಆ ವ್ಯಕ್ತಿ ಮುಖ್ಯ ನ್ಯಾಯಮೂರ್ತಿಯನ್ನು ಕೆಟ್ಟಪದಗಳಿಂದ ಬೈದಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಟಿಜೋ ಇದು ತಮಿಳುನಾಡು ಅಲ್ಲ ಎಂದು ನ್ಯಾಯಮೂರ್ತಿಗೆ ಎಚ್ಚರಿಕೆ ನೀಡಿದ್ದಾನೆ. ಮುಖ್ಯ ನ್ಯಾಯಮೂರ್ತಿ ಮಣಿಕುಮಾರ್ ತಮಿಳುನಾಡು ಮೂಲದವರಾಗಿದ್ದಾರೆ. ಮುಖ್ಯ ನ್ಯಾಯಮೂರ್ತಿಗಳ ಗನ್‌ಮ್ಯಾನ್ ನೀಡಿದ ದೂರಿನ ಮೇರೆಗೆ ಮುಳವುಕಾಡ್ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 308 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದಾಳಿಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.

ಭಾನುವಾರ ರಾತ್ರಿ  ವಿಮಾನ ನಿಲ್ದಾಣದಿಂದ ಅಧಿಕೃತ ನಿವಾಸಕ್ಕೆ ತೆರಳುತ್ತಿದ್ದ ಮುಖ್ಯ ನ್ಯಾಯಮೂರ್ತಿಗಳ ಅಧಿಕೃತ ವಾಹನ ಹಾಗೂ ಬೆಂಗಾವಲು ವಾಹನವನ್ನು ರಾತ್ರಿ 11 ಗಂಟೆ ಸುಮಾರಿಗೆ ಗೋಶ್ರೀ ಸೇತುವೆ ಬಳಿ ಟಿಜೊ ತಡೆದಿದ್ದಾನೆ. ಆತ ಚೇರನಲ್ಲೂರಿನಿಂದ ಮುಖ್ಯ ನ್ಯಾಯಮೂರ್ತಿಯವರ ವಾಹನವನ್ನು ಹಿಂಬಾಲಿಸಿದ್ದರು. ಕೊಚ್ಚಿಯಲ್ಲಿ ಕಂಟೈನರ್ ಲಾರಿ ಚಾಲಕ ಟಿಜೊ ಕುಡಿದ ಅಮಲಿನಲ್ಲಿ ಹಲ್ಲೆ ನಡೆಸಿದ್ದಾನೆ. ಡಿಜೊ ಅವರನ್ನು ತಡೆಯಲು ಯತ್ನಿಸಿದ ಮುಖ್ಯ ನ್ಯಾಯಮೂರ್ತಿಗಳ ಮುಖ್ಯ ಭದ್ರತಾ ಅಧಿಕಾರಿಯ ಮೇಲೂ ಅವರು ಹಲ್ಲೆಗೆ ಯತ್ನಿಸಿದರು. ಮುಖ್ಯ ನ್ಯಾಯಾಧೀಶರ ಮುಖ್ಯ ಭದ್ರತಾ ಅಧಿಕಾರಿಯನ್ನು ಅತಿಕ್ರಮಣ ಮಾಡಲು ಯತ್ನಿಸಿದ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ಟಿಜೊ ಬೈಕ್ ನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.