ಬೆಂಗಳೂರು: ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರು ಕೊರೊನಾದಿಂದಾಗಿ ಮಣಿಪಾಲ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.. ಚಿಕಿತ್ಸೆ ಫಲಕಾರಿಯಾಗದೇ ಸಿದ್ದಲಿಂಗಯ್ಯ ಇಂದು ವಿಧಿವಶರಾಗಿದ್ದಾರೆ. ಸಿದ್ದಲಿಂಗಯ್ಯ ಅವರ ಸಾವು ಆಘಾತಕಾರಿ ಸುದ್ದಿ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಸಿದ್ದಲಿಂಗಯ್ಯ ಅವರ ಸಾವು ಆಘಾತಕಾರಿ ಸುದ್ದಿ.. ನಮ್ಮ ಒಡನಾಟಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಅವರು ನನ್ನ ವಿದ್ಯಾರ್ಥಿಯೂ ಆಗಿದ್ದರು, ಸಹೋದ್ಯೋಗಿಯೂ ಆಗಿದ್ದರು. ಅವರ ಹೊಲೆಮಾದಿಗರ ಹಾಡು ಕನ್ನಡ ಕಾವ್ಯ ಪ್ರಪಂಚದಲ್ಲಿ ಸಂಚಲನ ಮೂಡಿಸಿತು. ಹುಟ್ಟಿದ್ದು ದಲಿತ ಮೂಲದಿಂದ ಆದರೂ ಜಾತಿ ವರ್ಗ ಸಮಾನದ ಚಿಂತನೆಗಳನ್ನ ಇಟ್ಟುಕೊಂಡಿದ್ದರು. ಅವರೊಳಗೆ ಅದ್ಭುತವಾದ ಹಾಸ್ಯ ಪ್ರಜ್ಞೆಇತ್ತು.

ಮೂರ್ನಾಲ್ಕು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.. ಮೂರ್ನಾಲ್ಕು ದಿನಗಳಿಗೊಮ್ಮೆ ಅವರ ಆರೋಗ್ಯದ ಮಾಹಿತಿ ಪಡೆಯುತ್ತಿದ್ದೆ. ಕವಿಯನ್ನಷ್ಟೇ ಅಲ್ಲ, ಮಿತ್ರ, ಸಹೋದ್ಯೋಗಿಯನ್ನ ಕಳೆದುಕೊಂಡಿದ್ದೇನೆ.

ಸಿದ್ದಲಿಂಗಯ್ಯ ಮತ್ತು ನಾವು ವಿಶ್ವವಿದ್ಯಾಲಯ ಬಿಟ್ಟ ಮೇಲೆ ನಾವು ಕಾರ್ಯಕ್ರಮಗಳಲ್ಲಷ್ಟೇ ಭೇಟಿಯಾಗುತ್ತಿದ್ದೆವು. ಏಳೆಂಟು ತಿಂಗಳಿನಿಂದ ನನ್ನ ಅವರ ಭೇಟಿ ಸಾಧ್ಯವಾಗಲಿಲ್ಲ. ಅವರನ್ನ ಕಳೆದುಕೊಂಡ ಆಘಾತದಲ್ಲಿ ಏನು ಮಾತನಾಡುವುದು ತಿಳಿಯುತ್ತಿಲ್ಲ ಎಂದರು.

The post ಕೇವಲ ಕವಿಯಷ್ಟೇ ಅಲ್ಲ.. ನನಗೆ ಮಿತ್ರ, ಸಹೋದ್ಯೋಗಿಯೂ ಆಗಿದ್ದರು- ಬರಗೂರು ರಾಮಚಂದ್ರಪ್ಪ appeared first on News First Kannada.

Source: newsfirstlive.com

Source link