ಆಕೆ ಅಪ್ರತಿಮ ಸೌಂದರ್ಯವತಿ ರೂಪಾವತಿ. ಬದುಕಿನಲ್ಲಿ ತಾನು ಬಯಸಿದ್ದನ್ನೆಲ್ಲ ದಕ್ಕಿಸಿಕೊಂಡ ಗಟ್ಟಿಗಿತ್ತಿ. ಮಾಡೆಲ್ ದುನಿಯಾದಲ್ಲಿ ಹೊಸ ಮಾರುತ್ತವನ್ನೇ ಎಬ್ಬಿಸಿದ್ದ ಸಿಕ್ಸ್ ಪ್ಯಾಕ್ ಒಡತಿ. ಮೆಕ್ಸಿಕೋದಲ್ಲಿ ಹೊಸ ಬಿರುಗಾಳಿಯನ್ನೇ ಎಬ್ಬಿಸಿದ ಆ ಮಾಡೆಲ್ ಇದೀಗ ದುರಂತ ಅಂತ್ಯ ಕಂಡಿದ್ದಾಳೆ. ಆಕೆಯ ಮನದಲ್ಲಿ ಚಿಗುರೊಡೆದಿದ್ದ ಚಿಕ್ಕ ಆಸೆ, ಆಕೆಯನ್ನು ಬಹುಬೇಗನೆ ಸಾವಿನ ಮನೆಯ ಕದ ತಟ್ಟುಮಾಡುವಂತೆ ಮಾಡಿದೆ.

ಸಕ್ಸಸ್ ಅನ್ನೋದು ಯಾರಿಗೆ ಯಾವಾಗ ಹೇಗೆ ಬರುತ್ತೆ ಅನ್ನೋದನ್ನು ಹೇಳಕ್ಕಾಗಲ್ಲ. ಲಕ್ಷ್ಮಿ ಒಂದು ಸಾರಿ ಇಂತಹವರ ಮನೆಗೆ ಹೋಗಬೇಕು ಅಂತ ಮನಸ್ಸು ಮಾಡಿದ್ರೆ ಆಕೆಯನ್ನ ತಡೆಯೋಕೇ ಯಾರಿಂದಲೂ ಸಾಧ್ಯವಿಲ್ಲ. ಹೆಸರು, ಖ್ಯಾತಿ, ಹಣ ಯಶಸ್ಸು ಒಟ್ಟೊಟ್ಟಿಗೆ ಶಾರ್ಟ್ ಟೈಂನಲ್ಲಿ ಯಾರಿಗೂ ಅಷ್ಟು ಸುಲಭಕ್ಕೆ ದಕ್ಕೋದಿಲ್ಲ. ಆದ್ರೆ ಮೆಕ್ಸಿಕೋದ ಅದೊಬ್ಬಳು ಅಪ್ರತಿಮ ಸುಂದರಿಗೆ ಎಲ್ಲವು ದಕ್ಕಿತ್ತು. ಕೇವಲ 23ನೇ ವರ್ಷಕ್ಕೆ ಆಕೆ ಮಾಡಿದ್ದ ಸಾಧನೆ ಎಲ್ಲರನ್ನು ಹುಬ್ಬೇರುವಂತ್ತಿತ್ತು. ಮಹಿಳಾ ಫಿಟ್ನೆಸ್ ಜಗತ್ತಿನಲ್ಲಿ ಆಕೆಯ ಹೆಸರಿಗೆ ವಿಶೇಷ ಹೊಳಪಿತ್ತು. ಮೆಕ್ಸಿಕೋದ ಈ ಚೆಲುವೆಯ ಹೆಸರು ಒಡಾಲಿಸ್ ಸ್ಯಾಂಟೋಸ್.

ಒಡಾಲಿಸ್ ಸ್ಯಾಂಟೋಸ್ ಇದು ಹೆಸರಲ್ಲ. ಅದೆಷ್ಟೋ ಯುವಕರ ಕನಸನ್ನು ಕದ್ದ ಬ್ರಾಂಡ್ ಅದು. ಒಡಾಲಿಸ್ ಸ್ಯಾಂಟೋಸ್ ಅಂದ್ರೆ ಸಾಕು ಮೆಕ್ಸಿಕೋದ ಯುವಕರ ಎದೆಯ ಬುಲೆಟ್ ಬೈಕ್ನಂತೆ ಸದ್ದು ಮಾಡಲು ಶುರು ಮಾಡುತ್ತೆ. ಆಕೆಯ ಸೌಂದರ್ಯಕ್ಕೆ ಮನಸೋಲದವರೇ ವಿರಳ. ಆಕೆ ಸೌಂದರ್ಯವತಿ. ಆಕಾಶದಿಂದ ಧರೆಗಿಳಿದು ಬಂದ ಅಪ್ಸರೆಯಂತಹ ಸೌಂದರ್ಯ. ಎತ್ತರದ ಬಲಾಢ್ಯ ದೇಹ. ಆಕೆಯ ಮಾದಕ ನೋಟ, ದೇಹದಾಢ್ಯ ಕಣ್ಣು ಕುಕ್ಕುವಂತ್ತಿತ್ತು. ಆಕೆಯ ಮೈಮಾಟಕ್ಕೆ ಅದೆಷ್ಟೋ ಜನರು ಕ್ಲೀನ್ ಬೋಲ್ಡ್ ಆಗಿದ್ರು. ದೈವದತ್ತವಾಗಿ ಆಕೆಗೆ ಸಿಕ್ಕಿದ್ದ ಸೌಂದರ್ಯ ಆಕೆಯನ್ನ ಬಹುಬೇಗನೆ ಸೆಲೆಬ್ರೆಟಿಯ ಪಟ್ಟಕ್ಕೆ ತಂದು ನಿಲ್ಲಿಸಿತ್ತು. ಸಾಮಾಜಿಕ ಜಾಲಾತಾಣದಲ್ಲಿ ಆಕೆಯನ್ನು ಪ್ರೀತಿಸುವ, ಆರಾಧಿಸುವ ಲಕ್ಷಾಂತರ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ.

ಆದ್ರೆ ಲೈಫ್ ಈಸ್ ನಾಟ್ ಈಸಿ ಅಲ್ವಾ. ಯಶಸ್ಸು ಉತ್ತುಂಗಕ್ಕೆ ಕರೆದುಕೊಳ್ತಿರ್ವಾಗ್ಲೇ ಆಕೆ ತನಗೆ ಗೊತ್ತಿಲ್ಲದ ಹಾಗೆ ಸಾವನ್ನು ತನ್ನತ್ತ ಬರ ಮಾಡ್ಕೊಂಡಿದ್ಳು. ಈ ಅಂದಗಾತಿಯ ಸಾವು ಕನಸ್ಸಿನಂತೆ ಇದೀಗ ನಡೆದೇ ಹೋಗಿದೆ. ಮನುಷ್ಯನಿಗೆ ಎಲ್ಲವೂ ದಕ್ಕಿದ ಮೇಲೂ ಇನ್ನೇನೋ ಬೇಕು ಅನಿಸುತ್ತೆ. ಆದ್ರೆ ಅದೇನು ಅನ್ನೋದು ಮಾತ್ರ ಅರ್ಥವೇ ಆಗೋದಿಲ್ಲ. ಇಂತಹದ್ದೇ ಕೆಟ್ಟ ಕನಸು ಆಕೆ 23 ವರ್ಷಕ್ಕೆ ಬದುಕಿಗೆ ವಿದಾಯ ಹೇಳುವಂತೆ ಮಾಡಿದೆ. ಪಾದರಸದಂತೆ ಸದಾ ಪುಟಿಯುತ್ತಿದ್ದ ಮೆಕ್ಸಿಕೋದ ಸ್ಯಾಂಟೋಸ್ ಇದೀಗ ಸಾವಿನ ಮನೆಗೆ ಧಾವಂತದಲ್ಲಿ ಹೋಗಿಬಿಟ್ಟಿದ್ದಾಳೆ. ಈ ಅಂದಗಾತಿಯ ಸಾವಿಗೆ ಕಾರಣವಾಗಿದ್ದೆ ಆಕೆಯಲ್ಲಿದ್ದ ಕೆಟ್ಟ ಆಸೆ.

ಕೇವಲ 23 ವರ್ಷಕ್ಕೆ ದುರಂತ ಅಂತ್ಯಕಂಡ ಸಿಕ್ಸ್ ಪ್ಯಾಕ್ ಒಡತಿ
‘ಮಿಸ್ ಹರ್ಕ್ಯುಲಸ್ ‘ಕಿರೀಟ ತನ್ನದಾಗಿಸಿಕೊಂಡ ಗಟ್ಟಿ ಗಿತ್ತಿ
ಬೆವರಿಗೆ ಸೆಡ್ಡು ಹೊಡೆಯಲು ಹೋದ ಮಾಡೆಲ್​ಗೆ ಏನಾಯ್ತು?

ಆಕೆಯದ್ದು ಜಸ್ಟ್ 23 ವರ್ಷ. ಬದುಕನ್ನು ಕಟ್ಟಿಕೊಳ್ಳುವ ಸಮಯ. ಆಕೆ ಬದುಕಿನ ಬಗ್ಗೆ ಸಾಕಷ್ಟು ಕನಸು ಕಂಡಿದ್ಳು. ಅದರಂತೆ ಮಾಡೆಲ್ ದುನಿಯಾದಲ್ಲಿ, ಫಿಟ್ನೆಸ್ ಜಗತ್ತಿನಲ್ಲಿ ಪದಕಗಳ ಗೊಂಚಲನ್ನು ಬೇಟೆಯಾಡಿದ್ಳು. ಉತ್ತಮ ದೇಹದಾಢ್ಯಕ್ಕಾಗಿ ಜಿಮ್​ ನಲ್ಲಿ ಬೆವರು ಸುರಿಸಿದ್ಳು. ಈ ಸುಂದರಿ ಮಾಡೆಲ್ ಲೋಕದಲ್ಲಿ ಹೊಸ ಚರಿಷ್ಮಾ ಸೃಷ್ಟಿಸಿ ಬಿಟ್ಟಿದ್ಳು. ಕೇವಲ 23 ವರ್ಷಕ್ಕೆ ಆಕೆ ಮಾಡಿದ ಸಾಧನೆ ಮೆಕ್ಸಿಕೋದ ಗಡಿ ದಾಟಿ ಇತರೆ ದೇಶಗಳಲ್ಲಿ ವ್ಯಾಪಿಸಿತು.

ಈ ಚೆಲುವೆ ಫಿಟ್ನೆಸ್ಗಾಗಿ ದಿನದ ಹೆಚ್ಚಿನ ಸಮಯ ಜಿಮ್​ನಲ್ಲಿ ಬೆವರು ಸುರಿಸ್ತಿದ್ಳು. ತಾನು ಬೆವರು ಸುರಿಸಿದ ಪರಿಣಾಮ ಆಕೆಯನ್ನು ಅದೆಷ್ಟೋ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ಳು. ಮಾಡೆಲ್ ದುನಿಯಾದಲ್ಲಿ, ಫಿಟ್ನೆಸ್ ಜಗದಲ್ಲಿ ಆಕೆಗಿದ್ದ ಶೃದ್ದೇ ,ಪರಿಶ್ರಮಗಳು ಪ್ರಶಸ್ತಿಗಳು ಆಕೆಯನ್ನು ಹುಡುಕಿಕೊಂಡು ಬರುವಂತೆ ಮಾಡಿತ್ತು. 2019 ರಲ್ಲಿ ಮಿಸ್ ‘ಮಿಸ್ ಹರ್ಕ್ಯುಲೆಸ್ ಕಿರೀಟ ಧರಿಸಿದಾಗ, ಆಕೆಯ ಸೌಂದರ್ಯವನ್ನ, ದೇಹದಾಢ್ಯವನ್ನು ನೋಡಿದವರು ಅಬ್ಬಾಬ್ಬಾ ಉದ್ಘರಿಸಿದ್ರು. ಮುಂದೊಂದು ದಿನ ಈಕೆ ವಿಶ್ವ ಸುಂದರಿ ಪಟ್ಟವನ್ನು ಅಲಂಕರಿಸುತ್ತಾಲೆಂದೇ ಮಾಡೆಲ್ ಲೋಕದ ತಜ್ಷರು ಭವಿಷ್ಯಾ ನುಡಿದಿದ್ರು. ಆದ್ರೆ ಇದೀಗ ಎಲ್ಲವು ಅದಲು ಬದಲು.

ಉತ್ತಮ ದೇಹದಾಢ್ಯಕ್ಕಾಗಿ ಬೆವರು ಹರಿಸಿದ ಒಡಾಲಿಸ್
ಬೆವರು ಸುರಿಸಿ ಸಿಕ್ಸ್ ಪ್ಯಾಕ್ ಬರಿಸಿಕೊಂಡಿದ್ದ ಮಾಡೆಲ್
ಆಕೆಯ ಬೆವರು ಆಕೆಗೆನೆ ಅಸಹ್ಯ ಹುಟ್ಟಿಸಿದ್ದು ನಿಜನಾ?

ಕೋಲು ಮುರಿಬಾರ್ದು, ಹಾವು ಸಾಯಬಾರ್ದು ಅಂತರಲ್ವಾ ಹಾಗಾಯ್ತು ನೋಡಿ. ಮಾಡೆಲ್ ದುನಿಯಾದಲ್ಲಿ ಕಣ್ಣು ತುಂಬಾ ಕನಸುಗಳನ್ನು ಕಂಡಿದ್ದ ಆಕೆ, ತಾನು ಮಾಡೆಲ್ ಜಗತ್ತಿನಲ್ಲಿ ಮತ್ತಷ್ಟು ಛಾಪು ಮೂಡಿಸಬೇಕೆಂಬ ಛಲ, ಹಠ ಹೊಂದಿದ್ಳು. ಅದ್ಕೆಂದು ತನ್ನ ದೇಹವನ್ನ ದಂಡಿಸಲು ಕೂಡ ರೆಡಿಯಾಗಿದ್ಳು. ಆದ್ರೆ ದೇಹ ದಂಡಿಸಲು ರೆಡಿಯಾಗಿದ್ದ ಆಕೆಗೆ, ತಾನು ವರ್ಕೌಟ್ ವೇಳೆ ಬೆವರುತ್ತಿದ್ದದ್ದು ಅಸಹ್ಯ ಹುಟ್ಟಿಸಿತ್ತೋ ಏನೋ? ವರ್ಕೌಟ್ ಮಾಡುವಾಗ ಬೆವರುವುದು ಕಾಮನ್ ಎಂಬುವುದನ್ನು ಆಕೆಗೆ ಸೆಲೆಬ್ರಿಟಿ ಪಟ್ಟ ಸಿಕ್ಕಿದ್ಮೇಲೆ ಮರೆತ್ತಿದ್ಳೋ ಏನೋ..? ತಾನೆಂದು ಬೆವರು ಬಾರದೆಂದು ಅಂದುಕೊಂಡ ಆಕೆ ಆಪರೇಷನ್ ಮಾಡ್ಕೊಂಡಿದ್ದಾಳೆ. ಆಪರೇಷನ್ ಮಾಡಿದ ಕೆಲವೇ ಕೆಲ ದಿನಗಳಷ್ಟೇ, ಸೌಂದರ್ಯ, ಖ್ಯಾತಿಯ ಅಲೆಯಲ್ಲಿ ತೇಲುತ್ತಿದ್ದ ಹೊತ್ತಲ್ಲಿ ಸಾವಿನ ಕರಾಳ ಅಸ್ತ ಆಪರೇಷನ್ ರೂಪದಲ್ಲಿ ಆಳಕ್ಕೆ ಇಳಿದು ಅದುಮಿತ್ತು. ಯಶಸ್ಸು ದಿನೇ ದಿನೇ ಹೆಚ್ಚುತ್ತಿದ್ದಂದೆಯೇ ಅವರ ಆಯಸ್ಸಿನ ರೇಖೆ ಕೆಳಗಿಳಿಯುತ್ತಾ ಬಂದಿತ್ತು. ವಿಧಿಯ ಮುಂದಿನ ನಡೆ ಯಾರಿಗೂ ತಾನೇ ಗೊತ್ತಿರುತ್ತೆ ಹೇಳಿ..? ಕಣ್ಣೆದುರೇ ಸಾವು ಗೆಜ್ಜೆ ಕಟ್ಟಿಕೊಂಡು ನರ್ತಿಸುತ್ತಿದ್ರು ಆಕೆಯ ಅದ್ಯಾವುದರ ಪರಿವೇ ಇರ್ಲಿಲ್ಲ. ಜೀವನದ ಕಡೆಯ ಕ್ಷಣದವರೆಗೆ ಯಶಸ್ಸನ್ನು ಅಪ್ಪಿಕೊಂಡಿದ್ದ ಗುಂಡು ಮುಖದ ಚೆಲುವೆ ಸಾಧಿಸುವುದು ಸಾವಿರ ಇದ್ರೂ, ವಿಧಿ ಅದ್ಕೆ ಅವಕಾಶ ಕೊಡ್ಲಿಲ್ಲ. ಸಾಕು ಎದ್ದು ಬಂದು ಬಿಡು ಮಗಳೇ ಎಂದು ಸಾವು ತನ್ನತ್ತಾ ಬರ ಮಾಡ್ಕೊಂಡಿದೆ.

ಆಕೆ ಮುಚ್ಚಿಟ್ಟ ಸತ್ಯವೇ ಆಕೆಯ ಜೀವವನ್ನೇ ಬಲಿ ಪಡೆಯಿತಾ?
ಶಸ್ತ್ರಚಿಕಿತ್ಸೆ ನಡೆಸುವ ಮೊದ್ಲು ಸತ್ಯವನ್ನು ಮುಚ್ಚಿಟ್ಟಳಾ ಸುಂದರಿ?
ಸ್ಕಿನ್ ಕೇರ್ ಕ್ಲಿನಿಕ್ ಜೊತೆ ಟೈಯಪ್ ಮಾಡ್ಕೊಂಡಿದ್ಳಾ ಚೆಲುವೆ?

ಆಕೆ ಶಸ್ತ್ರ ಚಿಕಿತ್ಸೆಗೆ ಮೊದಲು ವೈದ್ಯಕೀಯ ಸಿಬ್ಬಂದಿಯ ಜೊತೆ ಕೆಲವು ಸತ್ಯಗಳನ್ನು ಮುಚ್ಚಿಟ್ಟಿದ್ಳಂತೆ. ಹೌದು, ಆಕೆ ಆಕೆ ಸ್ಟಿರಾಯ್ಡ್​ ಗಳನ್ನು ತೆಗೆದುಕೊಳ್ಳುತ್ತಿದ್ದಳಂತೆ. ಆಕೆ ಸ್ಟಿರಾಯ್ಡ್​ಗಳನ್ನು ತೆಗೆದುಕೊಳ್ಳುತ್ತಿದ್ದ ಅಂಶವನ್ನು ಆಪರೇಷನ್​ಗೆ ಮೊದ್ಲು ಮುಚ್ಚಿಟ್ಟಿದ್ಳಂತೆ. ಇವು ಆಕೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಹಾರ್ಟ್ ಅಟ್ಯಾಕ್ ಸಂಭಬಿಸಿದೆ. ಸಾವು ಸಂಭಿಸಿದೆ ಎನ್ನುವುದು ವೈದ್ಯರ ವಾದ.

ಆಕೆ ಸ್ಕಿನ್ ಕೇರ್ ಕ್ಲಿನಿಕ್ ಜೊತೆ ಟೈಯಪ್ ಮಾಡ್ಕೊಂಡಿದ್ಳಂತೆ. ಮುಂದೇ ದೇಹದಲ್ಲಿ ಬೆವರು ಬಾರದಂತೆ ಆಪರೇಷನ್ ಮಾಡುವುದೇ ಆ ಸ್ಕಿನ್ ಕೇರ್ ಕ್ಲಿನಿಕ್​ನ ವಿಶೇಷತೆ ಅಂತೆ. ಅದ್ಕೆ ಈಕೆಯನ್ನೇ ಬ್ರಾಂಡ್ ರೀತಿಯಲ್ಲಿ ತೆಗೆದುಕೊಂಡು ಸ್ಕಿನ್ ಕೇರ್​ ಕ್ಲಿನಿಕ್ ಆಪರೇಷನ್ ಮಾಡಿದ್ದಾರೆ. ಬೆವರಿನಿಂದ ಮುಕ್ತಿ ಪಡೆಯಬಹುದೆಂಬ ಖುಷಿಯಿಂದ ಆಕೆ ಸಂತೋಷದಿಂದಲೇ ಆಪರೇಷನ್ ಮಾಡಿಸಿಕೊಂಡಿದ್ಳು. ಮುಂದೇ ಇದು ಆಕೆಯ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಈ ಘಟನೆ ಸಂಭವಿಸಿದೆ ಎಂಬ ಮಾತುಗಳು ಕೂಡ ಕೇಳಿ ಬರ್ತಿದೆ. ಮೆಕ್ಸಿಕೋ ಪೊಲೀಸರು ಇದೀಗ ಆ ಸ್ಕಿನ್ ಕೇರ್ ಕ್ಲೀನಿಕ್ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ತನಿಖೆ ನಡೆಸುತ್ತಿದ್ದಾರೆ.

ಮೆಕ್ಸಿಕೋ ಯುವಕರ ಹೃದಯಕ್ಕೆ ಸ್ವಪ್ನದಲ್ಲಿ ಬಂದು ಬೆಂಕಿ ಇಟ್ಟ ಒಡಾಲಿಸ್ ಮರಣವನ್ನು ವೈದ್ಯರು ಘೋಷಣೆ ಮಾಡುತ್ತಿದ್ದಂಗೆ ಲಕ್ಷಾಂತರ ಅಭಿಮಾನಿಗಳಿಗೆ ಬರಸಿಡಿಲು ಬಡಿದಂತ್ತಾಗಿದೆ. ಅಭಿಮಾನಿಗಳು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದರು. ಅವರ ಶಾರ್ಟ್ ಟೈ ಜರ್ನಿ ಆದ್ರು ಅವರ ನೆನೆಪು ಲಾಂಗ್ ಟೈಂ ಎಂದು ಅಭಿಮಾನಿಗಳು ಒಡಾಲಿಸ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಶಾರ್ಟ್ ಟೈಮ್ ನಲ್ಲಿ ಆಕೆ ಮಾಡಿದ ಸಾಧನೆ ನಿಜಕ್ಕೂ ಪ್ರಶಂಸನೀಯವಾದುದು.ಚಿಕ್ಕ ವಯಸ್ಸಿನಲ್ಲಿಯೇ ಆಕಾಶಕ್ಕೆ ಏಣಿ ಹಾಕುವ ಕನಸು ಕಂಡವಳು, ಸೋಶಿಯಲ್ ಮಿಡಿಯಾದಲ್ಲಿ ಜನಪ್ರಿಯತೆ ಗಿಟ್ಟಿಸಿ ಕೊಂಡಿದ್ದ ಗಟ್ಟಿ ಗಿತ್ತಿ ಇದೀಗ ಮಾಡೆಲ್ ದುನಿಯಾಗೆ ಮಾತ್ರವಲ್ಲ ಇಡೀ ಜಗತ್ತಿಗೆ ಗುಡ್ ಬೈ ಅಂದಿದ್ದಾಳೆ.

ಫಿಟ್ನೆಸ್ ಲೋಕದಲ್ಲಿ, ಸೋಶೀಯಲ್ ಮೀಡಿಯಾದಲ್ಲಿ ಹೊಸ ಮಾರುತವನ್ನೇ ಎಬ್ಬಿಸಿದ ಒಡಾಲಿಸ್ ಸ್ಯಾಂಟೋಸ್ ಸಾಹಸಗಾಥೆ, ಮೆಕ್ಸಿಕೋದ ಮುಂದಿನ ಪೀಳಿಗೆಯ ಜನರ ಯಶಸ್ವಿನ ಅಧ್ಯಾಯಕ್ಕೆ ಒಂದು ಮುನ್ನಡಿ ಬರೆಯುತ್ತೆ ಎಂದೇ ಹಲವುರ ಭಾವಿಸಿದ್ರು. ಆದ್ರೆ ಬದುಕು ಒಂದೊಳ್ಳೆ ಟ್ರ್ಯಾಕ್ ನಲ್ಲಿ ಸಾಗ್ತಿದಾಗಲೇ ಆಕೆಯಲ್ಲಿದ್ದ ಒಂದು ಆಸೆ ಸಾವು ತನ್ನೆದುರು ಧುತ್ತನೆ ಕುಳಿತುಕೊಳ್ಳುವಂತೆ ಮಾಡಿತ್ತು. ಇದೀಗ ಆಕೆಯೇ ಮುಗಿದು ಹೋದ ಅಧ್ಯಾಯವಾಗಿ ಬಿಟ್ಟಿದ್ದಾಳೆ.

ದೈವದತ್ತವಾಗಿ ಸಿಕ್ಕಿದ್ದ ಸೌಂದರ್ಯ ಆಕೆಯನ್ನು ಬಹುಬೇಗನೆ ಸೆಲೆಬ್ರೆಟಿ ಎಂಬ ಪಟ್ಟಕ್ಕೆ ತಂದು ನಿಲ್ಲಿಸಿತ್ತೇನೋ ಎಂಬುವುದೇ ಎಷ್ಟು ನಿಜವೋ, ಆಕೆಯ ಕೆಟ್ಟ ಆಸೇನೇ ಆಕೆಯನ್ನು ಇಂದು ಬಲಿಪಡೆದುಕೊಂಡಿತ್ತು ಎಂಬುವುದು ಕೂಡ ಅಷ್ಟೇ ಸತ್ಯ. ಬದುಕಿನಲ್ಲಿ ಎಲ್ಲವು ಇದ್ದು, ಇನ್ನೇನು ಬೇಕೆಂದು ಹೊರಟ ಮೆಕ್ಸಿಕೋದ ಮಾಡೆಲ್ ಒಂದು ದುರಂತ ಅಂತ್ಯ ಕಾಣುವಂತ್ತಾಗಿದ್ದು ಮಾತ್ರ ದುಡ್ಡ ದುರಂತ.

The post ಕೇವಲ 23 ವರ್ಷಕ್ಕೆ ದುರಂತ ಅಂತ್ಯಕಂಡ ಸಿಕ್ಸ್ ಪ್ಯಾಕ್ ಒಡತಿ -‘ಮಿಸ್ ಹರ್ಕ್ಯುಲಸ್’ ಕಥೆಯೇನು? appeared first on News First Kannada.

Source: newsfirstlive.com

Source link