ಕೋಲಾರ: ನೇಣು ಬಿಗಿದುಕೊಂಡು ಗ್ರಾಮ ಪಂಚಾಯತಿ ಕಾರ್ಯದರ್ಶಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಕೋಲಾರ ನಗರದ ಕೋಲಾರಮ್ಮ ಬಡಾವಣೆಯಲ್ಲಿ ನಡೆದಿದೆ. 23 ವರ್ಷದ ಕಾವ್ಯ ಆತ್ಮಹತ್ಯೆ ಮಾಡಿಕೊಂಡ ಯುವತಿ

ಕಾವ್ಯ ಕೋಲಾರ ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯತಿ ಕಾರ್ಯದರ್ಶಿಯಾಗಿದ್ದರು. ಅವರ ಆತ್ಮಹತ್ಯೆಗೆ ಕಾರಣವೇನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಕಳೆದ‌ರಾತ್ರಿ ಮನೆಯಲ್ಲಿ‌ ನೇಣುಬಿಗಿದುಕೊಂಡು ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೋಲಾರ ನಗರ ಠಾಣಾ ವ್ಯಾಪ್ತಿಯಲ್ಲಿ ‌ಪ್ರಕರಣ ನಡೆದಿದೆ.

 

The post ಕೇವಲ 23 ವರ್ಷಕ್ಕೇ ಗ್ರಾಮ ಪಂ. ಕಾರ್ಯದರ್ಶಿ ಹುದ್ದೆ; ಆದ್ರೂ ಸಡನ್ ಆಗಿ ಆತ್ಮಹತ್ಯೆ appeared first on News First Kannada.

Source: newsfirstlive.com

Source link