ಕೇಸ್​ ಇತ್ಯರ್ಥ ಆಗೋವರೆಗೂ ಯಾರು ಧಾರ್ಮಿಕ ಗುರುತು ಬಳಸುವಂತಿಲ್ಲ.. ಹೈಕೋರ್ಟ್​ ಸೂಚನೆ


ಬೆಂಗಳೂರು: ಉಡುಪಿಯಲ್ಲಿ ಶುರುವಾದ ಹಿಜಾಬ್​​ ವಿವಾದ ಈಗ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈಗ ಹಿಜಾಬ್​​​ ಕೇಸ್​ ಸುಪ್ರೀಂಕೋರ್ಟ್​ ಅಂಗಳದಲ್ಲಿದೆ. ಈಗಾಗಲೇ ವಕೀಲರಾದ ದೇವದತ್​​ ಕಾಮತ್​​, ಸಂಜಯ್​​ ಹೆಗ್ಡೆ ಮೂರನೇ ದಿನವೂ ತಮ್ಮ ವಾದ ಮಂಡಿಸಿದ್ದಾರೆ.

ಇನ್ನು, ಇಂದು ಕೂಡ ಸುಧೀರ್ಘ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ತಿ, ನ್ಯಾ. ಕೃಷ್ಣ ಎಸ್ ದೀಕ್ಷಿತ್, ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ನೇತೃತ್ವದ ತ್ರಿಸದಸ್ಯ ಪೀಠ ಈಗ ಮತ್ತೆ ಕೇಸ್​​ ಮುಂದೂಡಿದೆ. ಮತ್ತೆ ಹಿಜಾಬ್​ ಕೇಸ್​ ಸೋಮವಾರಕ್ಕೆ ಮುಂದೂಡಿ ಆದೇಶಿಸಿದೆ. ಅಲ್ಲದೇ ಯಾವುದೇ ಕಾರಣಕ್ಕೂ ಕೇಸ್​ ಇತ್ಯರ್ಥ ಆಗೋವರೆಗೂ ಯಾರು ಧಾರ್ಮಿಕ ಗುರುತು ಬಳಸುವಂತಿಲ್ಲ ಎಂದು ನಿರ್ದೇಶಿಸಿದೆ.

News First Live Kannada


Leave a Reply

Your email address will not be published.