ಯಲಹಂಕ ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಹತ್ಯೆ ಕೇಸ್ ಪ್ರಮುಖ ಆರೋಪಿ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಿರೀಕ್ಷಣಾ ಜಾಮೀನು ಮೇಲೆ ಹೊರಬಂದಿದ್ದಾರೆ. ಈ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ ಗೋಪಾಲಕೃಷ್ಣಾ, ಎಸ್.ಆರ್ ವಿಶ್ವನಾಥ್ ಟಿಟಿಡಿ ಬೆಂಬರ್. ಬೇಕಾದರೆ ತಿರುಪತಿಗೆ ಬರಲಿ, ನಾನು ದೇವರ ಮೇಲೆ ಪ್ರಮಾಣ ಮಾಡೋಕೆ ಸಿದ್ಧನಿದ್ದೇನೆ ಎಂದರು.
ನಾಲ್ಕು ದಿನಗಳಿಂದ ಮಾಧ್ಯಮದಲ್ಲಿ ಪಾರದರ್ಶಕವಾಗಿ ತೋರಿಸ್ತಿದ್ದಾರಾ. ಯಾವ ರೀತಿ ಟ್ರ್ಯಾಪ್ ಮಾಡಿದ್ದಾರೆ ಗೊತ್ತಾಗಿದೆ. ನಾನು ಬೆಂಗಳೂರಿಗೆ ಬಂದಾಗ ದೇವರಾಜ್ ನನ್ನನ್ನ ಕರೆಸಿಕೊಂಡಿದ್ದ. ಆತನೊಂದಿಗೆ ಸೆಂಥಿಲ್ ಕೂಡ ಹೋಟೇಲ್ನಲ್ಲೇ ಇದ್ದ. ಅಲ್ಲಿಗೆ ಅವರೇ ಸಿಸಿಬಿ ಅವರನ್ನ ಕರೆಸಿಕೊಂಡಿದ್ದಾರೆ ಎಂದು ಹೇಳಿದರು.
ಬಳಿಕ ನಮ್ಮನ್ನ ವಿಚಾರಣೆ ಮಾಡಿ ಬಿಟ್ಟಿದ್ದಾರೆ. ನನ್ನ ಜೊತೆ ಸ್ನೇಹಿತ ಮಂಜು ಸೇರಿ ಹಲವರು ಇದ್ರು. ನಾನು ತುಂಬಾ ಇನೋಸೆಂಟ್. 2013 ಹಾಗೂ 2018ರಲ್ಲಿ ನಾನು ಮೂರನೇ ಪ್ಲೇಸ್ಗೆ ಹೋಗಿದ್ದೆ ಅಂದಿದ್ರು. ಇದಕ್ಕೆಲ್ಲಾ ಮೂಲ ಕಾರಣ ಸತೀಶ್ ಎಂಬ ವ್ಯಕ್ತಿ. ಒಬ್ಬ ಪೊಲೀಸ್ ಅಧಿಕಾರಿ ಟ್ರ್ಯಾನ್ಸ್ಫರ್ ಆಗಬೇಕಾದ್ರು ಸತೀಶ್ ಪರ್ಮೀಷನ್ ಬೇಕು ಎಂದರು.
ಸತೀಶ್ ಹಾಗೂ ಶಾಸಕರ ಕಾಲ್ ಲಿಸ್ಟ್ ತೆಗೆದ್ರೆ ಗೊತ್ತಾಗತ್ತೆ. ಸಿಸಿಬಿ ಅವರಾದ್ರೂ ತನಿಖೆ ಮಾಡ್ಲಿ, ಸಿಬಿಐಗಾದ್ರೂ ಕೊಡ್ಲಿ. ನಾನು ತಪ್ಪು ಮಾಡಿಲ್ಲ. ಹಾಗಾಗಿ ನನಗೆ ಇವತ್ತು ಬೇಲ್ ಕೊಟ್ಟಿದ್ದಾರೆ. ಮೂರು ಜನ ಸೇರಿ ನನ್ನ ಟ್ರ್ಯಾಫ್ ಮಾಡಿದ್ದಾರೆ. ನನ್ನ ಹೆಂಡ್ತಿ, ಮಕ್ಕಳು ಮೂರು ದಿನದಿಂದ ಊಟ ಮಾಡಿಲ್ಲ. ನನ್ನನ್ನ ತೇಜೋವಧೆ ಮಾಡೋ ಕೆಲ್ಸ ಮಾಡಿದ್ದಾರೆ ಎಂದು ಭಾವುಕರಾದರು.
ದೇವರ ಮುಂದೆ ಪ್ರಮಾಣ ಮಾಡ್ಲಿ, ನಾನು ಬರ್ತೀನಿ. ಡಿ.ಕೆ ಶಿವಕುಮಾರ್, ರಾಮಲಿಂಗಾರೆಡ್ಡಿ ನನ್ನ ಜೊತೆ ಇದ್ದಾರೆ. ಎಲ್ಲಾ ಕಾಂಗ್ರೆಸ್ ಮುಖಂಡರು ನನ್ನ ಜೊತೆ ಇದ್ದಾರೆ. ಎಲ್ಲರಿಗೂ ಗೊತ್ತಾಗಿದೆ ಇದು ಶಾಸಕರೇ ಮಾಡಿರೋದು ಅಂಥ ಬಿಜೆಪಿ ನಾಯಕರೇ ನಮಗೆ ಹೇಳಿದ್ದಾರೆ. ಎಡಿಟ್ ಮಾಡಿರೋ ವಿಡಿಯೋ ಅಂದಿದ್ದಾರೆ. 100ರಲ್ಲಿ 80 ಭಾಗ ಎಡಿಟ್ ಮಾಡಿರೋದು. ನನ್ನ ಮೇಲೆ ಯಾವುದೇ ಕೇಸ್ಗಳಿಲ್ಲ ಎಂದು ತಿಳಿಸಿದರು.
ತಿರುಪತಿ ತಿಮ್ಮಪ್ಪನ ಮೇಲೆ ಆಣೆ ಮಾಡಲಿ ಅವರು. ಈ ಕೇಸ್ನ ಸಿಬಿಐ ವಹಿಸಲಿ ಅಂಥ ನಾನೇ ಹೇಳ್ತೀನಿ. ವಂಶಿಕೃಷ್ಣ ನೇತೃತ್ವದಲ್ಲಿ ಪಾರದರ್ಶಕತೆಯಿಂದ ತನಿಖೆ ಆಗಲಿ. ನಾನು ಸಿಎಂ ಬಳಿ ಅದನ್ನೇ ಕೇಳಿಕೊಳ್ಳುತ್ತೇನೆ. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ. ನಾನು ಯಾವುದೇ ಕಾರಣಕ್ಕೂ ಆ ರೀತಿ ಮಾತಾಡಿಲ್ಲ. ಎಲ್ಲಾ ಮಾತುಗಳು ಕೂಡ ಎಡಿಟ್ ಆಗಿದೆ. ನನಗೆ ಭದ್ರತೆ ಅವಶ್ಯಕತೆ ಇದೆ. ದೇವರಾಜ್ ಏಳೆಂಟು ಅಮಾಯಕ ಪೊಲೀಸರನ್ನ ಸಸ್ಪೆಂಡ್ ಮಾಡಿಸಿದ್ದಾನೆ. ನನಗೂ ಮತ್ತು ಶಾಸಕರಿಗೂ ಯಾವುದೇ ಸಂಬಂಧ ಇಲ್ಲ, ವ್ಯವಹಾರನೂ ಇಲ್ಲ ಎಂದರು.