ಬೆಂಗಳೂರು: ರಾಜ್ಯ ಸರ್ಕಾರ ತನ್ನ ಮಾರ್ಗಸೂಚಿಯನ್ನ ಪರಿಷ್ಕರಣೆ ಮಾಡಿದ್ದು, ರಫ್ತು ಉತ್ಪಾದನಾ ವಲಯದಲ್ಲಿ ಮಾತ್ರ ಶೇಕಡಾ 50 ರಷ್ಟು ಕಾರ್ಮಿಕರನ್ನ ಬಳಸಿಕೊಳ್ಳಲು ಅನುಮತಿ ನೀಡಿದೆ.

ಸರ್ಕಾರದ ಆದೇಶದಂತೆ ನಾಳೆಯಿಂದ ರಫ್ತು ಉತ್ಪಾದನಾ ವಲಯದಲ್ಲಿ ಶೇಕಡಾ 50 ರಷ್ಟು ಕಾರ್ಮಿಕರು ಕೆಲಸ ಮಾಡಲಿದ್ದಾರೆ. ಹಿಂದಿನ ಮಾರ್ಗಸೂಚಿಯನ್ನ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಇಂದು ಪರಿಷ್ಕರಣೆ ಮಾಡಿದ್ದಾರೆ. ಅದರಂತೆ ರಫ್ತು ಉತ್ಪಾದನಾ ವಲಯದಲ್ಲಿ ಮಾತ್ರ ಶೇಕಡಾ 50 ರಷ್ಟು ಕಾರ್ಮಿಕರನ್ನು ಬಳಸಿಕೊಳ್ಳಲು ಅನುಮತಿ ನೀಡಿದ್ದಾರೆ.

ಅಲ್ಲದೇ ಸಾವಿರಕ್ಕಿಂತ ಹೆಚ್ಚಿರುವ ಕಾರ್ಖಾನೆಯಲ್ಲಿ, ವಾರಕ್ಕೆ ಎರಡು ಬಾರಿ ಶೇಕಡಾ 10 ರಷ್ಟು ಮಂದಿಗೆ ಕೊರೊನಾ ಪರೀಕ್ಷೆ ಮಾಡಿಸುವ ಷರತ್ತು ಕೂಡ ವಿಧಿಸಲಾಗಿದೆ.

The post ಕೈಗಾರಿಕೆಗಳ ನಿರ್ಬಂಧದಲ್ಲಿ ಸಡಿಲಿಕೆ; ಶೇ.50ರಷ್ಟು ಕಾರ್ಮಿಕರ ಬಳಕೆಗೆ ಅನುಮತಿ appeared first on News First Kannada.

Source: newsfirstlive.com

Source link