ಚಿಕ್ಕಬಳ್ಳಾಪುರ: ವ್ಯಕ್ತಿಯೋರ್ವ ನಾಗರಹಾವನ್ನ ಕೈಯಲ್ಲಿ ಹಿಡಿದುಕೊಂಡು ಊರೆಲ್ಲಾ ಸುತ್ತಾಡಿ ಜನರಿಗೆ ಭಯ ಹುಟ್ಟಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬೂದಿಗೆರೆಯಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರು ಗ್ರಾಮದ ಮನೆಯೊಂದರಲ್ಲಿ ಅವಿತು ಕೂತಿದ್ದ ವಿಷಪೂರಿತ ಹಾವನ್ನ ಕೈಯಲ್ಲಿ ಹಿಡಿದುಕೊಂಡು ಊರೆಲ್ಲಾ ರೌಂಡ್ ಹಾಕಿ ಜನರಲ್ಲಿ ಆತಂಕ ಉಂಟು ಮಾಡಿದ್ದಾರೆ. ಅಷ್ಟೇ ಅಲ್ಲದೇ ಹಾವಿನ ಸಮೇತ ಬೇಕರಿ, ಹೋಟೆಲ್ಗಳಿಗೆ ಉಪಹಾರ ಸೇವಿಸಲು ಆಗಮಿಸಿ ಅಂಗಡಿ ಮಾಲೀಕರಿಗೆ ಶಾಕ್ ನೀಡಿದ್ದಾರೆ.
ಇದನ್ನೂ ಓದಿ:300ಕ್ಕೂ ಹೆಚ್ಚು ಉರಗಗಳ ಹಿಡಿದು ಜನರ ರಕ್ಷಣೆ ಮಾಡಿದ್ದ ವೃದ್ಧ ಹಾವು ಕಚ್ಚಿ ಸಾವು