ಧಾರವಾಡ: ಹಸಿ ಮೆಣಸಿನಕಾಯಿ ದರ ಕುಸಿತವಾಗಿದ್ದು ಜಿಲ್ಲೆಯಲ್ಲಿನ ರೈತರು ತಾವು ಬೆಳೆದಿದ್ದ ಮೆಣಸಿನಕಾಯಿ ಬೆಳೆಯನ್ನ ನಾಶ ಮಾಡಿದ್ದಾರೆ.

ಧಾರವಾಡ ತಾಲೂಕಿನ ಅಮ್ಮಿನಬಾವಿ ರೈತರು ಬೆಳೆಯನ್ನ ನಾಶ ಮಾಡಲಾಗಿದೆ. ಹಸಿಮೆಣಸಿನ ಕಾಯಿಯ ಪ್ರತಿ ಕೆಜಿಗೆ 5 ರೂಗಿಂತ ಕಡಿಮೆ ಆಗಿದೆ. ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ ಮೆಣೆಸು ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಅದರಂತೆ ಒಂದು ಎಕರೆಗೆ 25 ಸಾವಿರಕ್ಕೂ ಹೆಚ್ಚು ಹಣವನ್ನ ಖರ್ಚು ಮಾಡಿರುವ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೇ ಮಾರುಕಟ್ಟೆಯಲ್ಲಿ 5 ರೂಪಾಯಿಗಿಂತ ಕಡಿಮೆ ಬೆಲೆ ಕೇಳುತ್ತಿರೋದ್ರಿಂದ ಟ್ರ್ಯಾಕ್ಟರ್​ ಹೊಡೆದು ಬೆಳೆಗಳನ್ನ ನಾಶ ಮಾಡಿದ್ದಾರೆ.

The post ಕೈಹಿಡಿಯಲಿಲ್ಲ ಮೆಣಸಿನಕಾಯಿ ದರ.. ಬೇಸರದಲ್ಲಿ ಬೆಳೆ ಸರ್ವನಾಶ ಮಾಡಿದ ಅನ್ನದಾತ appeared first on News First Kannada.

Source: newsfirstlive.com

Source link