‘ಕೈ’ ಅಲ್ಪಸಂಖ್ಯಾತರ ನಾಯಕರಲ್ಲಿ ಒಡಕು; ತುಂಬಿದ ಸಭೆಯಲ್ಲೇ ಕಾರ್ಯಕರ್ತರಿಗೆ ಎಚ್ಚರಿಕೆ ಕೊಟ್ಟ DKS


ಬೆಂಗಳೂರು: ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ನಾಯಕರ ಒಡಕು ಬಹಿರಂಗವಾಗಿದೆ. ‘ಕೈ’ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ‌ ಪದಗ್ರಹಣಕ್ಕೆ ಜಮೀರ್ ಗೈರಾಗಿದ್ದು, ಕಾರ್ಯಕರ್ತರು ಸಂಯಮ ಕಳೆದುಕೊಳ್ಳುವಂತೆ ಮಾಡ್ತು. ಇದೇ ವಿಚಾರಕ್ಕೆ ಡಿ.ಕೆ.ಶಿವಕುಮಾರ್ ಕೂಡ ತಾಳ್ಮೆ ಕಳೆದುಕೊಂಡು ಕಾರ್ಯಕರ್ತರ ವಿರುದ್ಧ ಕೆಂಡಕಾರಿದ್ರು.

ಕಾಂಗ್ರೆಸ್​​​​​ನ ಅಲ್ಪಸಂಖ್ಯಾತ ನಾಯಕರ ಒಡಕು ಬಹಿರಂಗ
ಮಂಗಳವಾರ ಅರಮನೆ ಮೈದಾನದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ನೂತನ ಅಧ್ಯಕ್ಷ ಕೆ.ಅಬ್ದುಲ್ ಜಬ್ಬಾರ್ ಅವರ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿತ್ತು. ಈ ಸಮಾರಂಭಕ್ಕೆ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ಬಂದಿರಲಿಲ್ಲ. ಜಮೀರ್ ಗೈರು ಹಾಜರಿಗೆ ಸಿಟ್ಟಿಗೆದ್ದಿದ್ದ ಕಾರ್ಯಕರ್ತರು ‌ಸಂಯಮ ಮರೆತಿದ್ರು. ಇದ್ರ ಎಫೆಕ್ಟ್​​ ಎಂಬಂತೆ ಕಾರ್ಯಕ್ರಮ ಗೊಂದಲ ಗದ್ದಲ ಗಲಾಟೆಯಲ್ಲಿ ಮುಳುಗಿತ್ತು.

ಸಿದ್ದರಾಮಯ್ಯ ಭಾಷಣದ ವೇಳೆ ಕೈ ಕಾರ್ಯಕರ್ತರು ತಮ್ಮ ಸಿಟ್ಟು ಹೊರಹಾಕಿದ್ರು. ಇದೇ ವೇಳೆ ಕೇಳಿಬಂದ ಜಮೀರ್ ಪರ ಘೋಷಣೆಗಳಿಂದ ಡಿ.ಕೆ.ಶಿವಕುಮಾರ್​​​ ಸಿಟ್ಟಿಗೆದ್ದರು. ಗಲಾಟೆ ಹೆಚ್ಚಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ತಮ್ಮ ಭಾಷಣವನ್ನ ಮೊಟಕುಗೊಳಿಸಿದ್ರು. ಇದರ ಬೆನ್ನಲ್ಲೇ ಡಿ.ಕೆ.ಶಿವಕುಮಾರ್ ಕಾರ್ಯಕರ್ತರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ರು.

ಕೆಪಿಸಿಸಿ ಸಾರಥಿ ಕೆಂಡಾಮಂಡಲ!
ಡಿಕೆ ಕಿಡಿ 1: ಇದು ಕಾಂಗ್ರೆಸ್ ಸಭೆ ಎಲ್ಲರನ್ನೂ ಎತ್ತಿ ಆಚೆ ಹಾಕಿಸ್ತೀನಿ
ಡಿಕೆ ಕಿಡಿ 2: ವ್ಯಕ್ತಿ ಪೂಜೆ ಇಲ್ಲಿ ಇಲ್ಲ, ಕಾಂಗ್ರೆಸ್ ಪಾರ್ಟಿ ಪೂಜೆ ಅಷ್ಟೇ
ಡಿಕೆ ಕಿಡಿ 3: ಅಪೋಸಿಷನ್ ಪಾರ್ಟಿ ಲೀಡರ್ ಭಾಷಣ ಮಾಡ್ತಿದ್ದಾರೆ
ಡಿಕೆ ಕಿಡಿ 4: ಅವರ ಭಾಷಣ ನಿಲ್ಲಿಸಿದ್ದೀರಾ, ನೀವೆಲ್ಲ ಪಕ್ಷ ದ್ರೋಹಿಗಳು
ಡಿಕೆ ಕಿಡಿ 5: ಈ ಬೂಟಾಟಿಕೆ ಎಲ್ಲಾ ಬಿಡಿ, ಅವ್ರನ್ನೆಲ್ಲಾ ಎತ್ತಿ ಆಚೆ ಹಾಕ್ರೀ

ಜಮೀರ್​ ಯಾಕೆ ಬರಲಿಲ್ಲ..?
ಕಾರಣ 1: ಜಮೀರ್ ವಿರೋಧಿ ಬಣ ಪಾಲಾದ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಪಟ್ಟ
ಕಾರಣ 2: ಶಕೀಲ್ ನವಾಜ್​ನ್ನು ಘಟಕದ ಅಧ್ಯಕ್ಷರನ್ನಾಗಿಸಲು ಯತ್ನಿಸಿದ್ದ ಜಮೀರ್​
ಕಾರಣ 3: ಅಬ್ದುಲ್ ಜಬ್ಬಾರ್ ಪಾಲಾದ ‘ಕೈ’ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಗಾದಿ
ಕಾರಣ 4: ಆಪ್ತನಿಗೆ ಸ್ಥಾನ ಸಿಗದ ಕಾರಣ ಅಸಮಾಧಾನದಲ್ಲಿರುವ ಜಮೀರ್ ಅಹ್ಮದ್
ಕಾರಣ 5: ದೆಹಲಿಯಲ್ಲಿ ವೈಯಕ್ತಿಕ ಕೆಲಸದ ನೆಪವೊಡ್ಡಿ ಕಾರ್ಯಕ್ರಮಕ್ಕೆ ಜಮೀರ್​​​​ ಗೈರು

ಒಟ್ಟಿನಲ್ಲಿ ಅಲ್ಪಸಂಖ್ಯಾತ ಗಾದಿ ಆಪ್ತನ ಕೈ ತಪ್ಪಿದ್ದಕ್ಕೆ ಜಮೀರ್ ಗೈರಾಗಿದ್ದು ಹಸ್ತ ಮನೆಯ ಒಡಕನ್ನ ಎತ್ತಿ ತೋರಿಸಿತ್ತು. ಇದೇ ಕಾರಣಕ್ಕೆ ಜಮೀರ್ ಪರ ಘೋಷಣೆ ಕೂಗಿದ್ದು, ಡಿ.ಕೆ.ಶಿವಕುಮಾರ್​​ನ್ನ ಕೆರಳಿಸಿ, ತಮ್ಮದೇ ಪಕ್ಷದ ಕಾರ್ಯಕರ್ತರನ್ನ ಡಿ.ಕೆ.ಶಿವಕುಮಾರ್ ಪಕ್ಷ ದ್ರೋಹಿಗಳು ಎಂದುಬಿಟ್ರು. ಇದು ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದ್ದು, ಈ ಒಡಲು ಇನ್ನೆಲ್ಲಿಗೆ ಹೋಗಿ ನಿಲ್ಲುತ್ತೋ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

News First Live Kannada


Leave a Reply

Your email address will not be published. Required fields are marked *