‘ಕೈ’ ಕಲಿಗಳಿಂದ ‘2023’ರ ಚುನಾವಣೆ ಗುರಿ; ಬಿಜೆಪಿ ವಿರುದ್ಧ ಡಿಕೆಎಸ್ ಶಪಥ..!


ಬೆಂಗಳೂರು: ಉಪಕದನದ ಸಿಎಂ ತವರು ಹಾನಗಲ್​​​ನಲ್ಲಿ ಗೆದ್ದು ಬೀಗಿದ್ದು, ಸಿಂದಗಿಯಲ್ಲಿ ಉತ್ತಮ ಮತ ಕಲೆಹಾಕಿದ್ದು ಕೈ ಪಡೆಗೆ ಶಕ್ತಿ ತುಂಬಿದೆ. ಇದೇ ಜೋಶ್​​ನಲ್ಲಿ ಕಾಂಗ್ರೆಸ್​​​​​ ಮುಂದಿನ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸ್ತಿದೆ. ಅದ್ರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅಂತೂ ಶಪಥ, ಹರಕೆಯ ಮೂಲಕ ಈಗಾಗಲೇ ಅಖಾಡಕ್ಕೆ ದುಮುಖಿದಂತಿದೆ.

2023ರ ಸಾರ್ವತ್ರಿಕ ಚುನಾವಣೆಗೆ ‘ಕೈ’ ಕಲಿಗಳಿಂದ ತಯಾರಿ
2023ರ ಸಾರ್ವತ್ರಿಕ ಚುನಾವಣೆಗೆ ‘ಕೈ’ ಕಲಿಗಳಿಂದ ಭರ್ಜರಿ ತಯಾರಿ ನಡೆಯುತ್ತಿದ್ದು, ಮುಂದಿನ ಚುನಾವಣೆಯೇ ನನ್ನ ಗುರಿ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ. ಅಷ್ಟೇ ಅಲ್ಲದೆ ನಿನ್ನೆ ಹಾನಗಲ್​​ನ ದ್ಯಾಮವ್ವನ ಗುಡಿಗೆ ತೆರಳಿ ದೇವಿಗೆ ಹರಕೆ ಸಲ್ಲಿಸಿದರು. ಬಳಿಕ ಡಿಕೆ ಶಿವಕುಮಾರ್ ಹೊಸ ಶಪಥ ಬೇರೆ ಮಾಡಿದ್ದಾರೆ. ಇನ್ನೂ ಇತ್ತ ಸಿದ್ದರಾಮಯ್ಯರಿಂದಲೂ ಚುನಾವಣಾ ಜಪ ಶುರುವಾಗಿದೆ. ಹರಕೆ, ಜಪ ಮತ್ತು ಶಪಥದ ಹಿಂದೆ 2023ರ ಚುನಾವಣೆ ಗುರಿಯನ್ನು ಕೈ ಪಡೆ ನಿಗಧಿ ಮಾಡಿಕೊಂಡಿದೆ.

‘ಕೈ’ ಕಲಿಗಳು ‘2023’ರ ಗುರಿ, ಈಗೇಕೆ ಶಪಥ?
ಕಾರಣ 01: ಹಾನಗಲ್​ ಗೆಲುವಿನ ಉತ್ಸಾಹದಲ್ಲಿರುವ ಕಾಂಗ್ರೆಸ್​ ನಾಯಕರು, ಇದೇ ಉತ್ಸಾಹದಲ್ಲಿ ಮುಂದಿನ ಚುನಾವಣೆ ಎದುರಿಸಲು ಸಜ್ಜಾಗ್ತಿದ್ದಾರೆ. ಅದ್ರಲ್ಲೂ ಪಕ್ಷ ಸಂಘಟನೆಗೆ ತಯಾರಿ ನಡೆಸಲು ಕೈ ನಾಯಕರಿಂದ ಭರ್ಜರಿ ಪ್ಲಾನ್​ ಕೂಡ ರೆಡಿಯಾಗಿದೆ.

ಕಾರಣ 02: ಸಿಎಂ ತವರು ಜಿಲ್ಲೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್​ ನಾಯಕರು, ‘ಕೈ’ ಕಾರ್ಯಕರ್ತರ ರಣೋತ್ಸಾಹ ಮುಂದುವರೆಸಲು ಕಾಂಗ್ರೆಸ್​​ ಚಿಂತನೆ ನಡೆಸಿದೆ. ಹೀಗಾಗಿ 2023ರ ಚುನಾವಣೆಗೆ ಸಜ್ಜಾಗಲು ‘ಕೈ’ ಕಾರ್ಯಕರ್ತರಿಗೆ ನಾಯಕರಿಂದ ಸಂದೇಶ ಕೂಡ ರವಾನೆಯಾಗಿದೆ.

ಕಾರಣ 03 : ಎಲೆಕ್ಷನ್ ಹತ್ತಿರ ಬರ್ತಿದ್ದಂತೆ ಅಧಿಕಾರಿಗಳ ನಿಲುವು ಬದಲಾಗುತ್ತದೆ. ಆಡಳಿತ ಪಕ್ಷದ ಪರ ಧೋರಣೆ ಹೊಂದಿರುವ ಅಧಿಕಾರಿಗಳು ತಟಸ್ಥರಾಗ್ತಾರೆ. ಅಧಿಕಾರಿಗಳು, ಸರ್ಕಾರಿ ನೌಕರರ ಈ ನಡೆ ವಿಪಕ್ಷಗಳಿಗೆ ಪೂರಕವಾಗುತ್ತದೆ. ಅಧಿಕಾರಿಗಳು ತಟಸ್ಥ ನಿಲುವು ತಳೆಯುವಂಥಾ ಮೂಡ್ ಸೆಟ್​ ಮಾಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿಕೊಂಡಿದೆ. ಅಧಿಕಾರಿಗಳು ತಟಸ್ಥರಾಗುವಂಥಾ ವಾತಾವರಣ ಸೃಷ್ಟಿಗೆ ‘ಕೈ’ ಪಡೆ ತಂತ್ರ ಕೂಡ ರೂಪಿಸಿದೆ.

ಒಟ್ನಲ್ಲಿ ಹಾನಗಲ್ ಹಂಗಾಮದಲ್ಲಿ ಕಮಾಲ್ ಮಾಡಿರುವ ಕಾಂಗ್ರೆಸ್​​ ಸಿಎಂ ತವರಿನಲ್ಲೇ ಗೆದ್ದು ಬೀಗಿದೆ. ಇದೇ ಉತ್ಸಾಹದಲ್ಲಿ 2023ರ ಸಾವ್ರರ್ತಿಕ ಚುನಾವಣೆಗೆ ಕೈ ಪಡೆ ಸಿದ್ಧತೆ ನಡೆಸುತ್ತಿದ್ದು, ಇದಕ್ಕಾಗಿ ಸಿದ್ದು-ಡಿಕೆಶಿ ಟೀಂ ತಂತ್ರ ರಣತಂತ್ರವನ್ನ ಈಗಿನಿಂದಲೇ ಹೆಣೀತಿದೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ

News First Live Kannada


Leave a Reply

Your email address will not be published. Required fields are marked *