ನವದೆಹಲಿ: ಕೋವಿಶೀಲ್ಡ್ ಮೊದಲ ಹಾಗೂ ಎರಡನೇ ಡೋಸ್ ಲಸಿಕೆ ಪಡೆಯುವ ಅವಧಿಯನ್ನು ವಿಸ್ತರಿಸಿದ ನಿರ್ಧಾರ ಸಂಪೂರ್ಣವಾಗಿ ವೈಜ್ಞಾನಿಕವಾಗಿದೆ. ಇದನ್ನು ದಯವಿಟ್ಟು ಯಾರೂ ವಿವಾದ ಮಾಡಬೇಡಿ ಎಂದು ನೀತಿ ಆಯೋಗದ ಸದಸ್ಯರಾದ ವಿ.ಕೆ ಪೌಲ್ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರ ನೇಮಿಸಿಸಿದ್ದ ಪ್ಯಾನಲ್ ಒಂದು ಕೋವಿಶೀಲ್ಡ್ ವ್ಯಾಕ್ಸಿನ್ ಸಂಬಂಧ ಪಟ್ಟಂತೆ ಡೋಸ್‍ಗಳ ನಡುವಿನ ಅವಧಿಯನ್ನು 12 ರಿಂದ 16 ವಾರಗಳಿಗೆ ಹೆಚ್ಚಿಸಲು ಶಿಫಾರಸು ಮಾಡಿತ್ತು. ಆದರೆ ಇದನ್ನು ಕೆಲ ರಾಜಕೀಯ ನಾಯಕರು ತಜ್ಞರು ಸುಳ್ಳು ಹೇಳುತ್ತಿದ್ದಾರೆ ಅನಿಸುತ್ತದೆ ಎಂದು ಟೀಕೆ ಮಾಡಿದ್ದರು.

 

ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿರುವ ವಿಕೆ ಪೌಲ್, ತಜ್ಞರ ತಂಡ ಕೋವಿಶೀಲ್ಡ್ ಎರಡು ಡೋಸ್‍ಗಳ ನಡುವಿನ ಅಂತರವನ್ನು ಹೆಚ್ಚು ಮಾಡುವ ತೀರ್ಮಾನವನ್ನು ಸ್ವತಂತ್ರ್ಯವಾಗಿ ವೈಜ್ಞಾನಿಕವಾಗಿ ತೆಗೆದುಕೊಂಡಿದೆ. ಕೈ ಮುಗಿದುಕೊಳ್ಳುತ್ತಿದ್ದು, ಇದನ್ನು ದಯವಿಟ್ಟು ವಿವಾದ ಮಾಡಬೇಡಿ ಎಂದು ಮನವಿ ಮಾಡಿದರು.

The post ‘ಕೈ ಮುಗಿದು ಕೇಳಿಕೊಳ್ತೀನಿ ಇದನ್ನ ವಿವಾದ ಮಾಡಬೇಡಿ’- ನೀತಿ ಆಯೋಗದ ಸದಸ್ಯ ಮನವಿ appeared first on News First Kannada.

Source: newsfirstlive.com

Source link