ನೋಯ್ಡಾ: ಉತ್ತರ ಪ್ರದೇಶದಲ್ಲಿ ದಿನದಿಂದ ಏರಿಕೆಯಾಗುತ್ತಿರುವ ಕೊರೊನಾ ಸೋಂಕು ಪ್ರಕರಣಗಳ ಹಿನ್ನೆಲೆ ಅಹಮದಾಬಾದ್ ಕೋರ್ಟ್​ ಯೋಗಿ ಸರ್ಕಾರಕ್ಕೆ 2 ವಾರಗಳ ಕಾಲ ಲಾಕ್​ಡೌನ್​ ಜಾರಿ ಮಾಡುವಂತೆ ಮನವಿ ಮಾಡಿಕೊಂಡಿದೆ.

ಕೆಲವು ದಿನಗಳ ಹಿಂದೆ ಅಹಮದಾಬಾದ್ ಕೋರ್ಟ್ ತಾನೇ ಮಧ್ಯೆ ಪ್ರವೇಶಿಸಿ ಒಂದು ವಾರ ಕಾಲ ಲಾಕ್​ಡೌನ್ ಜಾರಿ ಮಾಡಿತ್ತು. ನಂತರ ಸುಪ್ರೀಂಕೋರ್ಟ್ ಈ ಆದೇಶಕ್ಕೆ ತಡೆ ನೀಡಿತ್ತು. ಇದೀಗ ಎರಡು ವಾರಗಳ ಕಾಲ ಲಾಕ್​ಡೌನ್ ಜಾರಿ ಮಾಡುವಂತೆ ಮನವಿ ಮಾಡಿಕೊಂಡಿದೆ.

ನಾನು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಕೊರೊನಾ ಪರಿಸ್ಥಿತಿ ಹತೋಟಿಯಲ್ಲಿ ಇಲ್ಲವಾದರೆ 2 ವಾರಗಳ ಕಾಲ ಲಾಕ್​ಡೌನ್ ಘೋಷಿಸಿ. ದಯವಿಟ್ಟು ಪಾಲಿಸಿ ಮೇಕರ್ಸ್​​ಗಳಿಗೆ ಸಲಹೆ ಕೊಡಿ. ಇದು ಅನುಪಾತವನ್ನು ಮೀರಿ ಹೋಗುತ್ತಿದೆ ಮತ್ತು ಇದೇ ಮೊದಲು ಹೀಗಾಗುತ್ತಿದೆ ಎನ್ನಿಸುತ್ತಿದೆ ಎಂದು ಜಸ್ಟೀಸ್​ ಸಿದ್ಧಾರ್ಥ್ ವರ್ಮಾ ಮನವಿ ಮಾಡಿದ್ದಾರೆ.

ಮುಂದುವರೆದು.. ವೈದ್ಯರ ಕೊರತೆ ಇದೆ. ಸಿಬ್ಬಂದಿ ಕೊರತೆ ಇದೆ. ಪೇಪರ್ ಮೇಲೆ ಎಲ್ಲವೂ ಸರಿ ಇದೆ. ಆದರೆ ನಿಜಾಂಶವೆಂದರೆ ಕೊರತೆ ಇದೆ. ಕೈಮುಗಿದು ನಾವು ಮನವಿ ಮಾಡಿಕೊಳ್ಳುತ್ತೇವೆ. ದಯಮಾಡಿ ಈ ಕುರಿತು ಚಿಂತಿಸಿ ಎಂದಿದ್ದಾರೆ.

The post ‘ಕೈ ಮುಗಿದು ಕೇಳುತ್ತೇವೆ’.. ಲಾಕ್​ಡೌನ್ ಮಾಡುವಂತೆ ಯೋಗಿ ಸರ್ಕಾರಕ್ಕೆ ಕೋರ್ಟ್ ಮನವಿ appeared first on News First Kannada.

Source: newsfirstlive.com

Source link