ಗದಗ: ಕೈ ಮುಗಿದು ಬೇಡಿಕೊಳ್ಳುತ್ತೇನೆ.. ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ಗದಗ ಶಾಸಕ, ಮಾಜಿ ಸಚಿವ ಹೆಚ್. ಕೆ. ಪಾಟೀಲ್ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

ಕಲಬುರಗಿ, ಬೆಳಗಾವಿಯಲ್ಲಿ ಆಕ್ಸಿಜನ್ ಕೊರತೆಯಿಂದ ಸೋಂಕಿತರು ಮೃತಪಟ್ಟಿದ್ದು ದುರ್ದೈವ..ಎಲ್ಲರೂ ಎಚ್ಚರಿಕೆ ಕೊಡುತ್ತಿರುವ ಸಂದರ್ಭದಲ್ಲಿಯೂ ಸರಕಾರ ನಿರ್ಲಕ್ಷ್ಯ ತೋರಿದೆ.. ಸರ್ಕಾರ ಕೆಲಸದಲ್ಲಿ ಅಯೋಗ್ಯತೆ ತೋರಿದೆ.. ಜನರನ್ನ ಸಾವಿನಂಚಿನೆಡೆಗೆ ಕೊಂಡೊಯ್ಯುತ್ತಿದೆ.. ಸರಕಾರಕ್ಕೆ ಪತ್ರ ಬರೆದು ಎಚ್ಚರಿಕೆ ನೀಡಿದ್ದೆ.. ಆ ಬಗ್ಗೆ ನಿರ್ಲಕ್ಷ್ಯ ತೋರಿದೆ.. ಚಾಮರಾಜನಗರ, ಬೆಂಗಳೂರಿನಲ್ಲಿ ಜನ ಆಕ್ಸಿಜನ್ ಕೊರೆತಯಿಂದ ಸಾವನ್ನಪ್ಪಿದ್ದು ನಿಮಗೆ ಏನೂ ಅನಿಸುತ್ತಿಲ್ಲವಾ..?

ಸರಕಾರಕ್ಕೆ ಕೈ ಮುಗಿದು ಕೇಳುತ್ತೇನೆ, ದಯಮಾಡಿ ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಿ.. ಮಹತ್ವದ ನಿರ್ಣಯ ತೆಗೆದುಕೊಳ್ಳಿರಿ, ದೊಡ್ಡ ಹೆಜ್ಜೆ ಇಡಿ.. ಕೇಂದ್ರ ಸರಕಾರದ ಬಳಿ‌ ಕೇಳಿ.. ನಿಮ್ಮಲ್ಲಿನ ಸಂಪನ್ಮೂಲ ಬಳಸಿಕೊಂಡು ಆಕ್ಸಿಜನ್ ಉತ್ಪಾದನೆ ಮಾಡಿ.. ಇಲ್ಲಾಂದ್ರೆ ಜನರ ಆಕ್ರೋಶಕ್ಕೆ, ಶಾಪಕ್ಕೆ ಗುರಿಯಾಗ್ತಿರಿ..

ರಾಜಧಾನಿ ದೆಹಲಿ ಮಾದರಿಯಲ್ಲಿ ಲಾಕ್ ಡೌನ್ ಮಾಡಿ..

ಇನ್ನು ಸರ್ಕಾರಕ್ಕೆ ಕಿವಿಮಾತು ಹೇಳಿದ ಶಾಸಕ ಹೆಚ್. ಕೆ. ಪಾಟೀಲ್​.. ದೆಹಲಿಯಲ್ಲಿ ದುಡಿಯುವ ವರ್ಗಕ್ಕೆ ಪಡಿತರ ನೀಡಲಾಗಿದೆ, ಐದು ಸಾವಿರ ಹಣ ಕೊಟ್ಟಿದ್ದಾರೆ.. ದೆಹಲಿ ಸರ್ಕಾರ ಲಾಕ್ ಡೌನ್ ಮಾಡಿರೋದನ್ನ ನೋಡಿ ಅರ್ಥ ಮಾಡಿಕೊಳ್ಳಬೇಕು.. ಐದು ಸಾವಿರ ರೂಪಾಯಿ ಕೊಡಲು ಆಗದಿದ್ದರೆ 4 ಸಾವಿರ ರೂಪಾಯಿ ಕೊಡಲಿ.. ದೆಹಲಿ ಸಣ್ಣ ಸರ್ಕಾರ.. ನಾವು ಆರು ಸಾವಿರ ರೂಪಾಯಿ ಕೊಡಬಹುದು.. ಅದ್ಯಾವ ಕೆಲಸವನ್ನೂ ನೀವು ಮಾಡುತ್ತಿಲ್ಲ.

ಏಳು ಕೆಜಿ ಪಡಿತರ ಅಕ್ಕಿಯನ್ನ ಐದು ಕೆಜಿಗೆ ಇಳಿಸಿದ್ದೀರಿ, ಎರಡು ಕೆಜಿ ಮಾಡಿದ್ದೀರಿ‌..ಲಾಕ್ ಡೌನ್ ಯಾಕೆ ಮಾಡುತ್ತೀರಿ ಅನ್ನೋದು ಸರ್ಕಾರಕ್ಕೆ ಕಲ್ಪನೆ ಇರಬೇಕು.. ಜನರನ್ನ ಮನೆಯಲ್ಲಿ ಕೂರಿಸೋದಕ್ಕೆ ಲಾಕ್ ಡೌನ್ ಮಾಡುವುದಲ್ಲ..ಸರ್ಕಾರ ಬಯಲಿನಲ್ಲಿ ಓಡಾಡಿ ಕೆಲಸ ಮಾಡಬೇಕು.. ಸಂಪನ್ಮೂಲ ಬಳಸಿ ಕೊರೊನಾ ವಿರುದ್ಧದ ಹೋರಾಟಕ್ಕೆ ಸಿದ್ಧರಾಗಬೇಕು.. ಕರ್ಫ್ಯೂ ಹಾಕಿ ಪೊಲೀಸರನ್ನ ಓಡಾಡಿಸಿದ್ರೆ ಉದ್ದೇಶ ಪೂರ್ಣವಾಗುವುದಿಲ್ಲ ಎಂದಿದ್ದಾರೆ.

The post ಕೈ ಮುಗಿದು ಬೇಡಿಕೊಳ್ಳುತ್ತೇನೆ.. ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಿ- ಹೆಚ್.​ಕೆ. ಪಾಟೀಲ್ ಮನವಿ appeared first on News First Kannada.

Source: newsfirstlive.com

Source link