– ರಾಜ್ಯದಲ್ಲಿ 93 ಸಾವು, 14,724 ಮಂದಿ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿಂದು 3,222 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 93 ಮಂದಿ ಸಾವನ್ನಪ್ಪಿದ್ದಾರೆ. ಇಂದು 14,724 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ರಾಜ್ಯದಲ್ಲಿ 85,997 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ರಾಜ್ಯದಲ್ಲಿ 34,929 ಮಂದಿ ಕೊರೊನಾಗೆ ಬಲಿಯಾಗಿದ್ದು, ಪ್ರಕರಣಗಳ ಸಂಖ್ಯೆ 28,40,428 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೋವಿಡ್-19 ಸೋಂಕು ಖಚಿತ ಶೇಕಡಾವಾರು ಪ್ರಮಾಣ ಶೇ.2.54 ಮತ್ತು ಮರಣ ಪ್ರಮಾಣ ಶೇ. 2.88 ರಷ್ಟು ದಾಖಲಾಗಿದೆ. ಇವತ್ತು ರಾಜ್ಯದಲ್ಲಿ ಒಟ್ಟು 126670 ಸ್ಯಾಂಪಲ್ (ಆರ್ ಟಿ ಪಿಸಿಆರ್ 83874 + 42796 ರಾಪಿಡ್ ಆಂಟಿಜನ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದ್ದು, ಇಂದು 753 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಇಂದು 16 ಮಂದಿ ಸಾವನ್ನಪ್ಪಿದ್ದು, ಸದ್ಯ ಸಿಲಿಕಾನ್ ಸಿಟಿಯಲ್ಲಿ 52,445 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ ಇದುವರೆಗೂ ಮಹಾಮಾರಿ ಜನರನ್ನು 15,615 ಬಲಿ ಪಡೆದುಕೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ 2,576 ಹೊಸ ಪ್ರಕರಣ, 93 ಸಾವು – 5,933 ಮಂದಿ ಡಿಸ್ಚಾರ್ಜ್

ಯಾವ ಜಿಲ್ಲೆಯಲ್ಲಿ ಎಷ್ಟು ಪ್ರಕರಣ?:
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 8, ಬಳ್ಳಾರಿ 18, ಬೆಳಗಾವಿ 114, ಬೆಂಗಳೂರು ಗ್ರಾಮಾಂತರ 48, ಬೆಂಗಳೂರು ನಗರ 753, ಬೀದರ್ 2, ಚಾಮರಾಜನಗರ 50, ಚಿಕ್ಕಬಳ್ಳಾಪುರ 25, ಚಿಕ್ಕಮಗಳೂರು 114, ಚಿತ್ರದುರ್ಗ 44, ದಕ್ಷಿಣ ಕನ್ನಡ 385, ದಾವಣಗೆರೆ 95, ಧಾರವಾಡ 30, ಗದಗ 26, ಹಾಸನ 242, ಹಾವೇರಿ 10, ಕಲಬುರಗಿ 36, ಕೊಡಗು 130, ಕೋಲಾರ 105, ಕೊಪ್ಪಳ 20, ಮಂಡ್ಯ 89, ಮೈಸೂರು 415, ರಾಯಚೂರು 7, ರಾಮನಗರ 16, ಶಿವಮೊಗ್ಗ 225, ತುಮಕೂರು 99, ಉಡುಪಿ 83, ಉತ್ತರ ಕನ್ನಡ 25, ವಿಜಯಪುರ 6 ಮತ್ತು ಯಾದಗಿರಿಯಲ್ಲಿ 2 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

The post ಕೊಂಚ ಏರಿಕೆ ಕಂಡ ಕೊರೊನಾ ಪ್ರಕರಣ- ರಾಜ್ಯದಲ್ಲಿಂದು 3,222 ಮಂದಿಗೆ ಪಾಸಿಟಿವ್ appeared first on Public TV.

Source: publictv.in

Source link