– ದರ್ಶನ್‍ಗೆ ಸಹಾಯದ ಅವಶ್ಯಕತೆ ಬೇಕಿದೆ

ಬೆಂಗಳೂರು: ಕೊಚ್ಚೆಗೆ ನಾನು ಹಾಕಲ್ಲ. ನಟ ದರ್ಶನ್ ಮಾನಸಿಕವಾಗಿ ವಿಚಲಿತರಾಗಿದ್ದು, ಚಿಕಿತ್ಸೆ ತೆಗೆದುಕೊಳ್ಳುವುದು ಒಳ್ಳೆಯದು ಎಂದು ನಿರ್ಮಾಪಕ ಇಂದ್ರಜಿತ್ ಲಂಕೇಶ್ ವಾಗ್ದಾಳಿ ನಡೆಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಅವರೇ ತಮ್ಮನ್ನು ಮೂರು ಬಿಟ್ಟವರು ಅಂತ ಹೇಳಿಕೊಂಡಿದ್ದಾರೆ. ಹಾಗಾಗಿ ಮೂರು ಬಿಟ್ಟವರ ಜೊತೆ ಏನು ಮಾತನಾಡೋದು? ಕೊಚ್ಚೆಗೆ ಕಲ್ಲು ಎಸೆಯೋಕೆ ಇಷ್ಟ ಇಲ್ಲ. ನಾನು ಲಾಯರ್ ಹತ್ತಿರ ಹೋಗಿ ಕಾನೂನು ಮುಖಾಂತರ ಎಲ್ಲವನ್ನು ಎದುರಿಸುತ್ತೇನೆ. ಈ ಎಲ್ಲ ಬೆಳವಣಿಗೆಯಿಂದ ನಾನೇನು ವಿಚಲಿತನಾಗಿಲ್ಲ. ಓರ್ವ ಬಡವ ಮತ್ತು ಸಾಮಾನ್ಯ ವ್ಯಕ್ತಿಯ ಮೇಲೆ ಹಲ್ಲೆ ಆಗಿರೋದು ಮುಂದಿದ್ದೇನೆಯೇ ಹೊರತು ಬೇರಾವ ಉದ್ದೇಶಕ್ಕೂ ಅಲ್ಲ ಎಂದು ಹೇಳಿದರು.

ಸತತವಾಗಿ ಈ ರೀತಿ ಘಟನೆಗಳು ನಡೆದಾಗ ದರ್ಶನ್ ಅವರು ಸಲಹೆ ಮತ್ತು ಚಿಕಿತ್ಸೆ ಅಥವಾ ಸಹಾಯ ತೆಗೆದುಕೊಳ್ಳಬೇಕು. ದರ್ಶನ್ ಗೆ ಯಾರದೋ ಒಬ್ಬರ ಸಹಾಯದ ಅವಶ್ಯಕತೆ ಇದೆ. ಇನ್ನೂ ದರ್ಶನ್ ನಡೆಸಿರುವ ಹಲ್ಲೆಗಳ ಕುರಿತು ದಾಖಲೆಗಳಿವೆ. ಅದನ್ನು ಎಲ್ಲಿಗೆ ತಲುಪಿಸಬೇಕು? ಅಲ್ಲಿಗೆ ತಲುಪಿಸುತ್ತೇನೆ ಎಂದರು.

The post ಕೊಚ್ಚೆಗೆ ಕಲ್ಲು ಹಾಕಲ್ಲ, ಮೆಂಟಲಿ ಡಿಸ್ಟರ್ಬ್ ಅದಾಗ ಟ್ರಿಟ್ಮೆಂಟ್ ತಗೊಳೋದು ಒಳ್ಳೆಯದು: ಇಂದ್ರಜಿತ್ ಲಂಕೇಶ್ appeared first on Public TV.

Source: publictv.in

Source link