ವಿಜಯನಗರ; ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೊಟ್ಟೂರು ಸಂಸ್ಥಾನದ ಪೀಠಾಧಿಪತಿಗಳಾದ ಸಂಗನಬಸವ ಶ್ರೀಗಳು ಇಂದು ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.
ಸಂಗನಬಸವ ಶ್ರೀ ಹಂಪಿಯ ಹೇಮಕುಟ, ಬಳ್ಳಾರಿ, ಹಾಲಕೆರೆ, ಬಾದಾಮಿ ಶಿವಯೋಗ ಮಂದಿರ ಸೇರಿದಂತೆ ಹಲವು ಮಠಗಳಿಗೆ ಪೀಠಾಧ್ಯಕ್ಷರಾಗಿದ್ದರು. ನ್ಯೂಸ್ಫಸ್ಟ್ಗೆ ಹೊಸಪೇಟೆಯ ಕೊಟ್ಟೂರು ಸ್ವಾಮಿ ಮಠದ ಆಪ್ತ ಮೂಲಗಳಿಂದ ಬಂದ ಮಾಹಿತಿಯ ಅನ್ವಯ, ಶ್ರೀಗಳ ಪಾರ್ಥಿವ ಶರೀರ ಬೆಂಗಳೂರಿನ ಹೊಸಪೇಟೆಗೆ ಬಂದು ಅಲ್ಲಿ ಕೆಲ ಕಾಲ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಅನಂತರ ಗದಗ ಹಾಲಕೆರೆಗೆ ತೆರಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.
ಗದಗ ಜಿಲ್ಲೆಯ ಹಾಲಕೇರಿ ಶ್ರೀ ಅನ್ನದಾನೇಶ್ವರ ಸಂಸ್ಥಾನ ಮಠದ ಡಾ. ಸಂಗನಬಸವ (ಅಭಿನವ ಅನ್ನದಾನೇಶ್ವರ) ಸ್ವಾಮೀಜಿಗಳು ಲಿಂಗೈಕ್ಯರಾದ ವಿಷಯ ತಿಳಿದು ಅತೀವ ದುಃಖವಾಗಿದೆ. ಆಸ್ಪತ್ರೆಗೆ ತೆರಳಿ ಪೂಜ್ಯರ ಅಂತಿಮ ದರ್ಶನ ಪಡೆದು ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅವರ ನಿಧನದಿಂದ ನಾಡು ಒಬ್ಬ ಮಾರ್ಗದರ್ಶಕ ಗುರುಗಳನ್ನು ಕಳೆದುಕೊಂಡಂತಾಗಿದೆ. (1/2) pic.twitter.com/H3JLYb17IR
— B.S. Yediyurappa (@BSYBJP) November 22, 2021