ಬೆಂಗಳೂರು: ದಂಡ ವಸೂಲಿಗೆ ಪೊಲೀಸ್ ಇಲಾಖೆ ನೀಡಿದ್ದ ಟಾರ್ಗೆಟ್​ನ್ನ ಬೆಂಗಳೂರು ಪೊಲೀಸ್​ ಡಿಪಾರ್ಟ್​ಮೆಂಟ್​ ರೀಚ್ ಮಾಡಿದೆ. 28 ದಿನದಲ್ಲಿ ಮಾಸ್ಕ್ ಹಾಕದ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಂದ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪೊಲೀಸರು ಬರೋಬ್ಬರಿ 2.57 ಕೋಟಿ ರೂಪಾಯಿ ವಸೂಲಿ ಮಾಡಿದ್ದಾರೆ. ಅಲ್ಲದೇ, 1 ಲಕ್ಷ 7 ಸಾವಿರ ಕೇಸನ್ನ ದಾಖಲಿಸಿದ್ದಾರೆ. ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ, ಬೆಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ, ಪೊಲೀಸರನ್ನು ದಂಡ ವಸೂಲಿ ಮಾಡೋದಕ್ಕೆ ಸಜ್ಜುಗೊಳಿಸಲಾಗಿತ್ತು. ಹೀಗಾಗಿ ಕಾನೂನು ಸುವ್ಯವಸ್ಥೆ, ಪೊಲಿಸ್ ಠಾಣೆಗಳಿಗೆ ದಿನಕ್ಕೆ ಐವತ್ತು ಪ್ರಕರಣ ಟಾರ್ಗೆಟ್ ನೀಡಲಾಗಿತ್ತು. ಅದರಂತೆ ಮಾಸ್ಕ್ ಇಲ್ಲದೇ ಓಡಾಡುವರ ವಿರುದ್ಧ ದಂಡ ಪ್ರಯೋಗ ಆರಂಭಿಸಿದ್ದರು, ಸಾಮಾಜಿಕ ಅಂತರ ಕಾಪಾಡದವರ ವಿರುದ್ಧವೂ ಕೇಸ್ ದಾಖಲಿಸಿದ್ರು. 28ದಿನದಲ್ಲಿಯೇ ದಂಡ ವಸೂಲಿ ಟಾರ್ಗೆಟ್​ನ್ನ ರೀಚ್ ಮಾಡಿದ್ದಾರೆ.

ಗುಪ್ತಚರ ಇಲಾಖೆಯಿಂದ ಅಂಕಿ ಅಂಶ ಬಿಡುಗಡೆ.
ಗುಪ್ತಚರ ಇಲಾಖೆಯಿಂದ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ಈ ಮಾಹಿತಿ ಗೊತ್ತಾಗಿದೆ. ಬೆಂಗಳೂರಿನಲ್ಲಿ ಮಾಸ್ಕ್ ಹಾಕಿಲ್ಲದವರು ಮಾತ್ರವಲ್ಲ, ಸರಿಯಾಗಿ ಮಾಸ್ಕ್ ಹಾಕದವರ ವಿರುದ್ಧವೂ ಈ ಸಲ ದಂಡ ಪ್ರಯೋಗ ಮಾಡಲಾಗಿದೆ. ಕಳೆದ 28 ದಿನದಲ್ಲಿ ಎಂಟು ಪೊಲೀಸ್ ವಿಭಾಗದಿಂದ 98,671 ಪ್ರಕರಣ ದಾಖಲಿಸಲಾಗಿದೆ. ಮಾಸ್ಕ್ ದಂಡದಿಂದಲೇ 2.37 ಕೋಟಿ ರೂಪಾಯಿ ದಂಡವನ್ನು ಬೆಂಗಳೂರು ಪೊಲೀಸರು ವಸೂಲಿ ಮಾಡಿದ್ದಾರೆ. ಅದರಲ್ಲಿ ದಕ್ಷಿಣ ವಿಭಾಗದ ಪೊಲೀಸರು 19,680 ಕೇಸು ದಾಖಲಿಸಿದ್ರೆ, ₹47ಲಕ್ಷ ದಂಡ ಸಂಗ್ರಹ ಮಾಡುವ ಮೂಲಕ ಮೊದಲ ಸ್ಥಾನ ಗಳಿಸಿದ್ದಾರೆ. ಇನ್ನೂ, ಪಶ್ಚಿಮ ವಿಭಾಗದ ಪೊಲೀಸರು 18 ಸಾವಿರ ಪ್ರಕರಣ ದಾಖಲಿಸಿ, ₹46ಲಕ್ಷ ದಂಡ ಸಂಗ್ರಹ ಮಾಡಿ ಎರಡನೇ ಸ್ಥಾನ ಗಳಿಸಿದ್ದಾರೆ. ವೈಟ್‌ಫೀಲ್ಡ್ ವಿಭಾಗ ಮತ್ತು ಕೇಂದ್ರ ವಿಭಾಗದ ಪೊಲೀಸರು ಕಡಿಮೆ ಕೇಸು ದಾಖಲಿಸಿ. ಕಡಿಮೆ ದಂಡ ಸಂಗ್ರಹ ಮಾಡಿದ್ದಾರೆ. ಈ‌ ಮೂಲಕ ಜನರಿಂದಲೇ ಸರ್ಕಾರದ ಖಜಾನೆಗೆ ಕೋಟಿ ಕೋಟಿ ಹರಿದು ಬರ್ತಿದೆ ಅಂದ್ರೆ ತಪ್ಪಾಗೋದಿಲ್ಲ. ಇನ್ನಾದ್ರೂ ಸರಿಯಾಗಿ ಮಾಸ್ಕ್​ ಹಾಕಿಕೊಂಡು ಸಾಮಾಜಿಕ ಅಂತರರ ಕಾಪಡಿಕೊಳ್ಳಿ.

The post ಕೊಟ್ಟ ಟಾರ್ಗೆಟ್​ನ್ನ ರೀಚ್​ ಮಾಡಿದ ಬೆಂಗಳೂರು ಪೊಲೀಸ್; ಜನರಿಂದ ₹2.57 ಕೋಟಿ ದಂಡ ವಸೂಲಿ appeared first on News First Kannada.

Source: newsfirstlive.com

Source link