ಕೊಟ್ಟ ಹಣವನ್ನ ಸ್ನೇಹಿತ ವಾಪಸ್​ ಕೊಡಲಿಲ್ಲ ಎಂದು ಆತ್ಮಹತ್ಯೆಗೆ ಶರಣಾದ ರೈತ..!


ಯಾದಗಿರಿ: ಕೊಟ್ಟ ಹಣವನ್ನು ವಾಪಸ್​ ನೀಡದೇ ಸ್ನೇಹಿತ ಮೋಸ ಮಾಡಿದ್ದಾನೆಂದು ಮನನೊಂದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಹೆಡಗಿಮುದ್ರಾ ಗ್ರಾಮದಲ್ಲಿ ನಡೆದಿದೆ.

ರಾಮ ಮೋಹನ್ (55) ಆತ್ಮಹತ್ಯೆ ಮಾಡಿಕೊಂಡ ಆಂಧ್ರ ಪ್ರದೇಶ ಮೂಲದ ರೈತ. ಮೃತ ರೈತ ಇತ್ತೀಚೆಗೆ ತನ್ನ ಸ್ನೇಹಿತ ರಮೇಶ್​ ಎಂಬುವವರಿಗೆ 4.5 ಲಕ್ಷ ರೂಪಾಯಿ ಹಣವನ್ನು ಕೊಟ್ಟಿದ್ದರಂತೆ. ಈ ದುಡ್ಡನ್ನು ವಾಪಸ್​ ಕೇಳಿದರೆ ಕೊಡದೆ ಸ್ನೇಹಿತ ಸತಾಯಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ರೈತ ಡೆತ್​​ನೋಟ್​ ಬರೆದಿಟ್ಟು ಜಮೀನಿನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಯಾದಗಿರಿ ಗ್ರಾಮಾಂತರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

 

News First Live Kannada


Leave a Reply

Your email address will not be published. Required fields are marked *