ಕೊಡಗು/ಚಿಕ್ಕಮಗಳೂರು: ತೌಕ್ತೆ ಚಂಡಮಾರುತದ ಹಿನ್ನೆಲೆ ಕೊಡಗಿನಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಸೈಕ್ಲೋನ್ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇಂದು ಕೊಡಗು ಜಿಲ್ಲೆಗೆ 25 ಸದಸ್ಯರ ಎನ್​ಡಿಆರ್​​ಎಫ್​ ತಂಡ ಆಗಮಿಸಿದೆ.

ಆಂಧ್ರದ ವಿಜಯವಾಡದಿಂದ ಇನ್ಸ್‌ಪೆಕ್ಟರ್ ಬಬ್ಲೂ ಬಿಸ್ವಾಸ್ ನೇತೃತ್ವದ ಬೆಟಾಲಿಯನ್ ಕೊಡಗಿಗೆ ಬಂದಿದೆ. ಮಡಿಕೇರಿ ನಗರದ ಮೈತ್ರಿ ಸಭಾಂಗಣದಲ್ಲಿ NDRF ಸಿಬ್ಬಂದಿ ತಂಗಿದ್ದಾರೆ. ರಕ್ಷಣಾ ಕಾರ್ಯಾಕ್ಕೆ ಬೇಕಾದ ಅಗತ್ಯ ಸಲಕರಣೆಗಳೊಂದಿಗೆ ಟೀಂ ಸಜ್ಜಾಗಿದೆ. ಇಂದು ರಕ್ಷಣಾ ಸಿಬ್ಬಂದಿ ಅಪಾಯಕಾರಿ ಪ್ರದೇಶಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ.

ಚಿಕ್ಕಮಗಳೂರಿನಲ್ಲಿ ಮಳೆ
ಅತ್ತ ಚಿಕ್ಕಮಗಳೂರಿನಲ್ಲಿ ತೌಕ್ತೆ ಚಂಡಮಾರುತದ ಎಫೆಕ್ಟ್​ನಿಂದ, ರಾತ್ರಿಯಿಡೀ ಮಳೆಯಾಗಿದೆ. ಮಲೆನಾಡು ಭಾಗದಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದೆ. ಮೂಡಿಗೆರೆ ತಾಲೂಕಿನ ಹಲವೆಡೆ 8 ರಿಂದ 9 ಇಂಚು ಮಳೆಯಾಗಿದೆ. ಕೊಟ್ಟಿಗೆಹಾರ, ಜಾವಳಿ, ಬಾಳೂರು, ಚಾರ್ಮಾಡಿ ಘಾಟ್​ನಲ್ಲೂ ವರುಣ ತಂಪೆರೆದಿದ್ದಾನೆ. ಮಳೆಯಿಂದಾಗಿ ಬಿದರಹಳ್ಳಿಯಲ್ಲಿ ರಸ್ತೆ ಮೇಲೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಮಳೆ ಹಿನ್ನೆಲೆ ಜನಜೀವನದಲ್ಲಿ ವ್ಯತ್ಯಯ ಉಂಟಾಗಿದೆ.

The post ಕೊಡಗಿನಲ್ಲಿಂದು ಭಾರೀ ಮಳೆ ಸಾಧ್ಯತೆ, 25 ಸದಸ್ಯರ NDRF ತಂಡ ಆಗಮನ appeared first on News First Kannada.

Source: newsfirstlive.com

Source link