ಕೊಡಗು: ಜಿಲ್ಲೆಯಲ್ಲಿ ಆನೆಗಳ ದಾಳಿ ಮುಂದುವರೆದಿದೆ. ಪೊನ್ನಂಪೇಟೆ ತಾಲ್ಲೂಕಿ‌ನ ದೇವಮಚ್ಚಿ ಗ್ರಾಮದಲ್ಲಿ ಆನೆದಾಳಿಗೊಳಗಾಗಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ದೇವಮಚ್ಚಿ ನಿವಾಸಿ ನಾಣು(60) ಮೃತ ದುರ್ದೈವಿ.

ಇಂದು ಮುಂಜಾನೆ 6.30 ಕ್ಕೆ ಆಹಾರ ಸಾಮಾಗ್ರಿ ತರಲು ತಿತಿಮತಿಗೆ ತೆರಳಿದಾಗ ನಾಣು ಅವರ ಮೇಲೆ ಆನೆ ದಾಳಿ ಮಾಡಿದೆ. ಇದರಿಂದ ಗಂಭಿರವಾಗಿ ಗಾಯಗೊಂಡಿದ್ದ ಅವರು ಸ್ಥಳದಲ್ಲೇ  ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿರಂತರ ಆನೆ ದಾಳಿಯಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

The post ಕೊಡಗಿನಲ್ಲಿ‌ ಆಹಾರ ಸಾಮಾಗ್ರಿ ತರಲು ಹೋಗಿದ್ದ ವ್ಯಕ್ತಿ ಆನೆ ದಾಳಿಗೆ ಬಲಿ appeared first on News First Kannada.

Source: newsfirstlive.com

Source link