ಕೊಡಗು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ನಿನ್ನೆಯಿಂದ 14 ದಿನಗಳ ಲಾಕ್​​​ಡೌನ್ ವಿಧಿಸಲಾಗಿದ್ದು, ಹಲವು ನಿಯಮಗಳನ್ನ ಜಾರಿ ಮಾಡಲಾಗಿದೆ. ಕೊಡಗಿನಲ್ಲಿ ವಾರದಲ್ಲಿ 3 ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವನ್ನ ಕಲ್ಪಿಸಲಾಗಿದೆ.

ಸೋಮವಾರ, ಬುಧವಾರ ಹಾಗೂ ಶುಕ್ರವಾರಗಳಂದು ಅಗತ್ಯ ವಸ್ತು ಖರೀದಿಗೆ ಜಿಲ್ಲಾಡಳಿತ ಅವಕಾಶ ನೀಡಿದೆ. ಈ ಹಿಂದೆ ವಾರದಲ್ಲಿ ಎರಡು ದಿನ ನಿಗದಿಪಡಿಸಿದ್ದ ಜಿಲ್ಲಾಡಳಿತ, ಇದೀಗ ಮತ್ತೆ ಹೊಸ ಆದೇಶವನ್ನ ಹೊರಡಿಸಿದೆ.

ಸೋಮವಾರ, ಬುಧವಾರ, ಶುಕ್ರವಾರ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ವ್ಯಾಪಾರಕ್ಕೆ ಅನುಮತಿ ನೀಡಿದೆ. ಅಂದು ಪಡಿತರ ನ್ಯಾಯ ಬೆಲೆ ಅಂಗಡಿಗಳನ್ನ ಕೂಡ ತೆರೆಯಬಹುದು. ಹೋಟೇಲ್​ಗಳಿಂದ ಪಾರ್ಸಲ್​ಗೂ ಅವಕಾಶವಿದೆ. ಜೊತೆಗೆ, ಮದ್ಯ ಖರೀದಿಗೂ ಈ ಮೂರು ದಿನ ಅನುಮತಿ ಇದೆ.

ಆದ್ರೆ ಜಿಲ್ಲಾಡಳಿತ ಪದೇ ಪದೇ ಆದೇಶವನ್ನ ಬದಲಾಯಿಸ್ತಾಯಿದ್ರೆ ಜನರಲ್ಲಿ ಗೊಂದಲ ಮೂಡಲಿದೆ ಅಂತ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

The post ಕೊಡಗಿನಲ್ಲಿ ಹೊಸ ರೂಲ್ಸ್​: ವಾರದಲ್ಲಿ 3 ದಿನ ಅಗತ್ಯವಸ್ತು ಖರೀದಿಗೆ ಅವಕಾಶ appeared first on News First Kannada.

Source: newsfirstlive.com

Source link