ಮಡಿಕೇರಿ: ಕೊಡಗು ಜಿಲ್ಲೆಯ ಯುವಕ ಕೇರಳದ ಇರಿಟ್ಟಿಯ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದೆ.

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚೇರಳ ಶ್ರೀಮಂಗಲ ಚೆಟ್ಟಳ್ಳಿಯ ಪ್ರದೀಶ್ (22) ಮೃತ ಯುವಕ. ಕೇರಳದ ಇರಿಟ್ಟಿ ಪಕ್ಕದ ಕೂಟುಪುಯ ಎಂಬಲ್ಲಿ ಕೇಬಲ್ ಕೆಲಸದಲ್ಲಿದ್ದ ಪ್ರದೀಶ್ ಹಾಗೂ ಮತ್ತಿಬ್ಬರು ಗುರುವಾರ ವಳವುಪಾರ ಬಳಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದಾರೆ. ಈ ಸಂದರ್ಭ ಪ್ರದೀಶ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಇರಿಟ್ಟಿ ಅಗ್ನಿಶಾಮಕ ದಳದವರು ಮೃತದೇಹವನ್ನು ಹೊರತೆಗೆದಿದ್ದಾರೆ. ಘಟನಾ ಸ್ಥಳಕ್ಕೆ ಇರಿಟ್ಟಿ ಸಬ್ ಇನ್‍ಸ್ಪೆಕ್ಟರ್ ಪುಷ್ಕರನ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಪರಿಯಾರಮ್ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮೃತ ದೇಹವನ್ನು ಪೋಷಕರಿಗೆ ಒಪ್ಪಿಸಲಾಗಿದೆ.

The post ಕೊಡಗಿನ ಯುವಕ ಕೇರಳದಲ್ಲಿ ನೀರು ಪಾಲು appeared first on Public TV.

Source: publictv.in

Source link