ಕೊಡಗು: ಅಕ್ಟೋಬರ್ 17 ರವೆಗೆ ಪ್ರವಾಸಿ ಕೇಂದ್ರ ಬಂದ್; ಜಿಲ್ಲಾಡಳಿತದಿಂದ ಮಹತ್ವದ ಆದೇಶ | Tourist places ban in Kodagu district till October 17th order by Kodagu dc

ಕೊಡಗು: ಅಕ್ಟೋಬರ್ 17 ರವೆಗೆ ಪ್ರವಾಸಿ ಕೇಂದ್ರ ಬಂದ್; ಜಿಲ್ಲಾಡಳಿತದಿಂದ ಮಹತ್ವದ ಆದೇಶ

ಅಕ್ಟೋಬರ್ 17 ರವೆಗೆ ಪ್ರವಾಸಿ ಕೇಂದ್ರ ಬಂದ್

ಕೊಡಗು: ನವರಾತ್ರಿ ಉತ್ಸವ ಹಿನ್ನೆಲೆ ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಪ್ರವಾಸಿ ಕೇಂದ್ರಗಳನ್ನು ಬಂದ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಇಂದಿನಿಂದ (ಅಕ್ಟೋಬರ್ 8) 11 ದಿನಗಳ‌ ಕಾಲ ಮಡಿಕೇರಿ ನಗರ ವ್ಯಾಪ್ತಿ ಪ್ರವಾಸಿ ಕೇಂದ್ರಗಳನ್ನು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕೊರೊನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ.

ಅಕ್ಟೋಬರ್ 17 ರವೆಗೆ ಪ್ರವಾಸಿ ಕೇಂದ್ರಗಳನ್ನು ಬಂದ್ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ರಾಜಾಸೀಟು, ಗದ್ದುಗೆ, ಓಂಕಾರೇಶ್ವರ ದೇವಸ್ಥಾನ, ನೆಹರು ಮಂಟಪ, ಜನರಲ್ ತಿಮ್ಮಯ್ಯ ಮ್ಯೂಸಿಯಂ ಬಂದ್ ಆಗಲಿದೆ. ಕೊರೋನಾ ಸೋಂಕು ತಡೆಗಟ್ಟಲು ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ. ಸದ್ಯ ಮಡಿಕೇರಿ ನಗರಕ್ಕೆ ಆಗಮಿಸಿದ‌ ಪ್ರವಾಸಿಗರಿಗೆ ನಿರಾಸೆಯಾಗಿದೆ.

TV9 Kannada

Leave a comment

Your email address will not be published. Required fields are marked *