ಕೊಡಗು: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಆರ್ಭಟ ಮಿತಿ ಮೀರುತ್ತಿದೆ, ವಿರಾಜಪೇಟೆ ತಾಲ್ಲೂಕಿನ ಕೆದಮುಳ್ಳೂರು ಗ್ರಾಮದ ಚೂರಿಯಾಲ್​ನಲ್ಲಿ ಒಂದೇ ಕುಟುಂಬದ 33 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಒಂದು ವಾರದ ಹಿಂದೆ ನಡೆದ ಜಾತ್ರೆಯಲ್ಲಿ ಸೋಂಕು ಹರಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಒಟ್ಟು 34 ಮನೆಗಳಿರುವ ಏರಿಯಾವನ್ನು ಕಂಟೈನ್​​ ಮೆಂಟ್​​ ಜೋನ್​ ಎಂದು ಘೋಷೀಸಲಾಗಿದ್ದು, ಸೀಲ್​ಡೌನ್​ ಮಾಡಲಾಗಿದೆ. ಸದ್ಯ ಇಲ್ಲಿಗೆ ಅಗತ್ಯವಸ್ತುಗಳು ಪೂರೈಕೆಯಾಗುತ್ತಿಲ್ಲ ಎಂದು ಸೋಂಕಿತರು ವೀಡಿಯೋ ಮೂಲಕ ತಮ್ಮ ಅಳಲನ್ನ ವ್ಯಕ್ತಪಡಿಸುತ್ತಿದ್ದಾರೆ.

The post ಕೊಡಗು ಜಿಲ್ಲೆಯ ಒಂದೇ ಕುಟುಂಬದ 33 ಮಂದಿಗೆ ಕೊರೊನಾ ಸೋಂಕು ದೃಢ appeared first on News First Kannada.

Source: News First Kannada
Read More