ಬೆಂಗಳೂರು: 2021 ಜೂನ್​​ನಿಂದ ಸೆಪ್ಟೆಂಬರ್​​ ವರೆಗಿನ ಮುಂಗಾರು ಅವಧಿಯಲ್ಲಿ ಸಾಧಾರಣ ಮಳೆಗಾಲ ಇರುತ್ತದೆ. ಇದು 2020ರ ಮಳೆಗಾಲದಂತೆ ಇರುತ್ತದೆ ಅಂತಾ ಭೂವಿಜ್ಞಾನಿ ಹೆಚ್.ಎಸ್.ಎಮ್. ಪ್ರಕಾಶ್ ತಿಳಿಸಿದ್ದಾರೆ.

ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ ಅವರು.. ಈ ಬಾರಿ 2017, 2018, 2019ರ ಮಳೆಗಾಲದಂತೆ ಖಂಡಿತವಾಗಿಯೂ ಇರುವುದಿಲ್ಲ. 2018/19ನೇ ಸಾಲಿನಲ್ಲಿ ನಡೆದ ಕೆಲವು ವಿಶೇಷ ಅಪರೂಪದ ಭೂವೈಜ್ಞಾನಿಕ ಘಟನೆಗಳು ಮತ್ತು ಆವಿ ಮೂಲಗಳು ಈ ವರ್ಷ ಸಕ್ರಿಯವಾಗಿಲ್ಲ.

ಆದ್ದರಿಂದ ಕೊಡಗು ಮತ್ತು ಕೇರಳ ಪ್ರಾಂತ್ಯಗಳಿಗೆ ಯಾವುದೇ ರೀತಿಯ ಆತಂಕದ ಹಾಗೂ ವಿಶೇಷ ಸಿದ್ಧತೆಗಳ ಅವಶ್ಯಕತೆ ಇರುವುದಿಲ್ಲ. ಒಂದೆರಡು ದಿನ ಸಣ್ಣ ಪುಟ್ಟ ಘಟನೆಗಳು ನಡೆದರೂ 2018 ಮತ್ತು 2019ರ ದುರಂತ ಘಟನೆಗಳು ಖಂಡಿತವಾಗಿಯೂ ಜರುಗುವುದಿಲ್ಲ. ಇದು ನೂರಕ್ಕೆ ನೂರು ವ್ಯಜ್ಞಾನಿಕ ಮುನ್ಸೂಚನೆಯಾಗಿದೆ. ಇದರಿಂದ ರಾಜ್ಯ ಸರ್ಕಾರ ಹಾಗೂ ಕೊಡಗಿನ ಜನತೆಗೆ ನಿರಾತಂಕವುಂಟಾಗಲಿ ಎಂದು ಮಾಹಿತಿ ನೀಡುತ್ತಿದ್ದೇನೆ ಅಂತಾ ತಿಳಿಸಿದರು.

The post ಕೊಡಗು ಭಾಗದ ಜನರಿಗೆ ಗುಡ್​ನ್ಯೂಸ್​ ತಿಳಿಸಿದ ಭೂ-ವಿಜ್ಞಾನಿ appeared first on News First Kannada.

Source: newsfirstlive.com

Source link