ಮಡಿಕೇರಿ: ಸ್ಯಾಂಡಲ್‍ವುಡ್ ಕಲಾವಿದರಾದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ತೆರಳಿ ಕೊಡವ ನೃತ್ಯ ಮಾಡುವ ಮೂಲಕ ಕೊರೊನಾ ಸೋಂಕಿತರಿಗೆ ಮನರಂಜನೆ ನೀಡಿದ್ದಾರೆ.

ಮಡಿಕೇರಿಯ ಕೋವಿಡ್ ಸೋಂಕಿತರಿರುವ ಜಿಲ್ಲಾಸ್ಪತ್ರೆಗೆ ಪಿಪಿಇ ಕಿಟ್ ಧರಿಸಿ ಭೇಟಿಕೊಟ್ಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ನಾಲ್ಕು ನೂರಕ್ಕೂ ಹೆಚ್ಚು ಸೋಂಕಿತರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು. ಬಳಿಕ ಸೋಂಕಿತರೊಂದಿಗೆ ಕೊಡವ ಓಲಗ ನೃತ್ಯ ಮಾಡುವ ಮೂಲಕ ರಂಜಿಸಿದ್ದಾರೆ. ಬೆಡ್ ಮೇಲೆ ಮಲಗಿದ್ದ ಸೋಂಕಿತರು ಮಲಗಿದ್ದಲ್ಲಿಂದಲೇ ನೃತ್ಯ ನೋಡಿ ಎಂಜಾಯ್ ಮಾಡಿದ್ದಾರೆ. ಇದನ್ನೂ ಓದಿ: ಕಷ್ಟದಲ್ಲಿದ್ದವರ ಕಣ್ಣೀರು ಒರೆಸಲು ಮುಂದಾದ ನಟಿ ಹರ್ಷಿಕಾ ಪೂಣಚ್ಚ, ಭುವನ್ ಪೊನ್ನಣ್ಣ

ಕೆಲ ಸೋಂಕಿತರು ಬೆಡ್ ಮೇಲೆ ಎದ್ದು ಕುಳಿತು ಡ್ಯಾನ್ಸ್ ಮಾಡಿ ರಿಲ್ಯಾಕ್ಸ್ ಆಗಿದ್ದಾರೆ. ಸೋಂಕಿತ ಮಹಿಳೆಯೊಬ್ಬರು ಕೊಡವ ಓಲಗ ಸೌಂಡ್ ಕೇಳುತ್ತಿದ್ದಂತೆ ಬೆಡ್ ನಿಂದ ಕೆಳಗಿಳಿದು ಫುಲ್ ಡ್ಯಾನ್ಸ್ ಮಾಡಿದ್ದಾರೆ. ಇದಾದ ಬಳಿಕ ಕೆಲ ವಾರ್ಡ್‍ಗಳಲ್ಲಿ ವರನಟ ರಾಜ್ ಕುಮಾರ್ ಅವರ ಸಿನಿಮಾದ ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಡಿಗೆ ಸೋಂಕಿತರು ಹೆಜ್ಜೆ ಹಾಕಿದ್ದಾರೆ. ಭುವನ್ ಮತ್ತು ಹರ್ಷಿಕಾ ಜೋಡಿ ಕಳೆದ ಒಂದು ವಾರದಿಂದ ಹಳ್ಳಿ, ಹಳ್ಳಿಗಳಿಗೆ ತೆರಳಿ ಹೋಂಕ್ವಾರಂಟೈನ್ ಆಗಿರುವ ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಿ ಸೋಂಕಿತರಿಗೆ ನೆರವಾಗಿದ್ದರು.ಇದನ್ನೂ ಓದಿ: ಬೆಟ್ಟಗುಡ್ಡದಲ್ಲಿ ಸೀಲ್ ಡೌನ್ ಆದ ಸೋಂಕಿತರ ಮನೆಗಳಿಗೆ ಭುವನ್ ಹರ್ಷಿಕಾ ನೆರವು

The post ಕೊಡವ ನೃತ್ಯ ಮಾಡಿ ಕೊರೊನಾ ಸೋಂಕಿತರನ್ನು ರಂಜಿಸಿದ ಹರ್ಷಿಕಾ, ಭುವನ್ appeared first on Public TV.

Source: publictv.in

Source link