ಸ್ಯಾಂಡಲ್ವುಡ್ಗೆ ಡಾ.ರಾಜ್ ಕುಮಾರ್ ನಿವಾಸ ದೊಡ್ಮನೆ ಇದ್ದಂಗೆ.. ಸುಮ್ ಸುಮ್ನೆ ಜನ ದೊಡ್ಮನೆ ಅನಲ್ಲಿಲ್ಲ .. ಹೆಸರಿಗೆ ತಕ್ಕಂಗೆ ಉಸಿರು ಉಸಿರಿನಲ್ಲೂ ದೊಡ್ಡತನವನೇ ಬೆಳೆಸಿಕೊಂಡು ಉಳಿಸಿಕೊಂಡು ಬಂದಿರುವ ಮನೆತನ ಅದು.. ಇನ್ನೂ ಪುನೀತ್ ರಾಜ್ ಕುಮಾರ್ ನಿಜಕ್ಕೂ ದೊಡ್ಮನೆಯ ದೊಡ್ಡ ಮನಸಿನ ಮನುಷ್ಯ.. ಕೊನೆ ಕೊನೆ ದಿನಗಳಲ್ಲಿ ಯಾವುದೇ ಋಣವನ್ನ ತನ್ನ ಮೇಲೆ ಇರಿಸಿಕೊಳ್ಳದೆ ನಗುನಗುಲೇ ಮರೆಯಾದ್ರು.. ಅಪ್ಪು ಅವರ ದೊಡ್ಡ ತನದ ಬಗ್ಗೆ ಒಂದು ಮನ ಮುಟ್ಟುವ ಸ್ಟೋರಿ ನಿಮಗಾಗಿ ಕಾದಿದೆ ನೋಡಿ ಬನ್ನಿ..
ಪ್ರೀತಿಯಲ್ಲು ನೋವಲ್ಲು ಪಾಲುದಾರ.. ಕನಸಲ್ಲೂ ಕೈ ಹಿಡಿಯೋ ಸೂತ್ರಧಾರ..ಎಲ್ಲವನ್ನ ಸಹಿಸಿ ನಗುವ ಜಾದುಗಾರ.. ಮನಸು ಮನಸ ಹೊಲಿಯೊ ಸೂಜಿದಾರ.. ಸ್ಯಾಂಡಲ್ವುಡ್ ನಿಜವಾದ ಸಾಹುಕಾರ ; ನಮ್ಮ ನಿಮ್ಮೆಲ್ಲರ ರಾಜಕುಮಾರ ಇನ್ನೆನಿದ್ದರು ನೆನಪಿನ ಲೋಕದಲ್ಲಿ ಚಿರಂತನ ಚಿತ್ತಾರ..
ಕೆಲ ದಿನಗಳ ಹಿಂದೆ ತೆಲುಗು ಸಿನಿಮಾ ರಂಗ ಫೇಮಸ್ ಪೋಷಕ ನಟ ಪೋಸಾನಿ ಕೃಷ್ಣ ಮುರಳಿ ಡಾ.ರಾಜ್ ಕುಮಾರ್ ಅವರು ಇದ್ದಾಗ ನಡೆದ ಒಂದು ಘಟನೆಯನ್ನ ವಿವರಿಸಿದ್ರು.. ಅದೇನೆಂದ್ರೆ ಒಮ್ಮೆ ಡಾ.ರಾಜ್ ಕುಮಾರ್ ಕನ್ನಡ ಚಿತ್ರರಂಗದ ಎಲ್ಲಾ ನಿರ್ಮಾಪಕರನ್ನ ಮನೆಗೆ ಕರೆಸಿ ಊಟ ಹಾಕಿಸಿದ್ರಂತೆ.. ನಿರ್ಮಾಪಕರೆಲ್ಲ ಊಟ ಮುಗಿಸಿದ ನಂತರ ಒಂದು ಮನವಿ ಮಾಡ್ಕೊಂಡ್ರಂತೆ.. ಅದೇನೆಂದ್ರೆ ‘‘ನನ್ನ ಕುಟುಂಬ ದೊಡ್ಡದಾಗುತ್ತಿದೆ. ದಿನೇ ದಿನೆ ಖರ್ಚು ವೆಚ್ಚಗಳೆಲ್ಲ ಹೆಚ್ಚಾಗುತ್ತಿವೆ.. ನನ್ನ ಮುಂದಿನ ಸಿನಿಮಾದ ಸಂಭಾವನೆಯನ್ನ 25 ಸಾವಿರ ರೂಪಾಯಿ ಹೆಚ್ಚು ಮಾಡಿಕೊಳ್ಳಬೇಕು ಅಂದುಕೊಂಡಿದ್ದೇನೆ.. ನಿಮ್ಮ ಸಹಹಾರ ವಿದ್ರೆ ಮಾತ್ರ ಹೆಚ್ಚಿಸಿಕೊಳ್ತಿನಿ.. ನಿಮಗೆ ಹೊರೆಯಾದ್ರೆ ಬೇಡ, ನಮ್ಮ ಅನ್ನದಾತರು ನೀವು ಎಂದು ಮನವಿ ಮಾಡಿಕೊಂಡಿದ್ರಂತೆ.. ಆಗ ನಿರ್ಮಾಪಕರೆಲ್ಲ ‘‘ಅಯ್ಯೋ ನೀವು ಕೇಳಿದಷ್ಟು ನಾವು ಕೋಡ್ತಿವಿ’ ನೀವ್ಯಾಕೆ ಇಷ್ಟೊಂದು ಮನವಿ ಮಾಡಿಕೊಳ್ತಿದ್ದಿರಾ ಅಂದಿದ್ರಂತೆ.. ಅಂತಹ ಮೇರು ವ್ಯಕ್ತಿತ್ವದ ನಟನ ಮಗನಾಗಿ ಪುನೀತ್ ರಾಜ್ ಕುಮಾರ್ ಕೂಡ ಬದುಕಿ ಬಾಳಿದ್ರು.. ಕೆಲವೇ ವರ್ಷ ನಮ್ಮೊಡನೆ ಇದ್ದಿದ್ರು ಪುಟ್ಟಕ್ಕಿಟ್ಟ ಚಿನ್ನದಂತೆ ಬಾಳಿ ಹೋದ್ರು ಯುವರತ್ನ..
ಕೊನೆ ಕ್ಷಣದವರೆಗೂ ನಿರ್ಮಾಪಕರಿಗೆ ಹೊರೆಯಾಗಲಿಲ್ಲ ಅಪ್ಪು
ತನ್ನ ಅಪ್ಪನಂತೆ ನಿರ್ಮಾಪಕರನ್ನ ಅನ್ನದಾತರಂತೆ ಕಂಡಿದ್ರು ಅಭಿ
ಕಲಾವಿದರು ನಿರ್ಮಾಪಕರನ್ನ ಅನ್ನದಾತರ ರೀತಿ ಅಭಿಮಾನಿಗಳನ್ನ ದೇವರ ರೀತಿ ಕಾಣಬೇಕು ಎಂದು ಹೇಳಿಕೊಟ್ಟವರು ಡಾ.ರಾಜ್ ಕುಮಾರ್.. ಅವರಂತೆ ಅವರ ಮಕ್ಕಳು ಕೂಡ ನಿರ್ಮಾಪಕರನ್ನ ಅನ್ನದಾತರಂತೆ ಅಭಿಮಾನಿಗಳನ್ನ ದೇವರಂತೆ ಕಾಣುತ್ತಿದ್ದಾರೆ.. ಸಿನಿಮಾ ಶೂಟಿಂಗ್ನಲ್ಲೇ ತನ್ನ ಅರ್ಧ ಲೈಫ್ ಅನ್ನ ಕಳೆದು ಹೋದ ಪುನೀತ್ ರಾಜ್ ಕುಮಾರ್ ಕೂಡ ನಿರ್ಮಾಪಕ ದೇವೋ ಭವ ಎಂದು ಬಾಳಿ ಹೋದವರು..
ಅಪ್ಪು ಯಾವುದೇ ಕಾರಣಕ್ಕೂ ನಿರ್ಮಾಪಕರಿಗೆ ಹೊರೆಯಾಗದಂತೆ ಇರುತ್ತಿದ್ದರು.. ತಾನೊಬ್ಬ ಸ್ಟಾರ್ ನಟ ತನಗೆ ಇಂಥದ್ದೇ ಬೇಕು ಎಂದು ಎಂದಿಗೂ ಡಿಮ್ಯಾಂಡ್ ಮಾಡಿ ಖರ್ಚು ವೆಚ್ಚ ಹೆಚ್ಚಾಗುವಂತೆ ಮಾಡಿದವರಲ್ಲ.. ನಿರ್ದೇಶಕ ಪ್ಲಸ್ ನಿರ್ಮಾಪಕರ ಡಾರ್ಲಿಂಗ್ ಆಗಿದ್ದವರು ಅಪ್ಪು.. ನಿರ್ಮಾಪಕರಿಗೂ ಹೊರೆಯಾಗದಂತೆ ನಿರ್ದೇಶಕ ಕನಸಿಗೂ ಧೋಖವಾಗದಂತೆ ಕೆಲಸ ಮಾಡಿಕೊಡ್ತಿದ್ರು ಅಪ್ಪು.. ಇದನ್ನ ನಾವು ಹೇಳ್ತಿಲ್ಲ ಅವರೊಟ್ಟಿಗೆ ಸಿನಿಮಾ ಮಾಡಿದ ಭಾಗ್ಯವಂತರು ಹೇಳಿಕೊಂಡಿರುವ ಮಾತುಗಳು.. ಜೇಮ್ಸ್ ಸಿನಿಮಾ ಮುಗಿಸಿ ದ್ವಿತ್ವ ಸಿನಿಮಾ ಸೆಟ್ಗೆ ತೆರೆಳಬೇಕಿದ್ದ ಅಪ್ಪು ಕೊನೆ ದಿನಗಳಲ್ಲಿ ನಿರ್ಮಾಪಕರ ಋಣವನ್ನ ತನ್ನ ಮೇಲೆ ಇರಿಸಿಕೊಳ್ಳಲೇ ಇಲ್ಲ.. ಏನು ನಿರ್ಮಾಪಕರ ಋಣ ಅನ್ನೋ ಸ್ವಾರಸ್ಯವನ್ನ ಬಿಡಿಸಿ ಹೇಳ್ತಿವಿ ಕೇಳಿ..
ನಿರ್ಮಾಪಕರ ಋಣವನ್ನ ಹೊರಲೇ ಇಲ್ಲ ರಾಜರತ್ನ
ಏನು ನಿರ್ಮಾಪಕರ ಋಣ ? ಕೇಳಿ ಪುನೀತ್ ಪ್ರೇಮಿಗಳೇ.. ಪುನೀತ್ ರಾಜ್ ಕುಮಾರ್ ಮುಂಬರುವ ಐದು ಸಿನಿಮಾಗಳಿಗೆ ಕಮಿಟ್ ಆಗಿದ್ರು.. ಯಾವುದೇ ಹೊಸ ಸಿನಿಮಾಕ್ಕೆ ಯಾವುದೇ ನಟ ಒಪ್ಪಿಕೊಳ್ಳೋಕ್ಕು ಮುನ್ನ ನಿರ್ಮಾಪಕರಿಂದ ಮುಂಗಡ ಹಣ ಅಂದ್ರೆ ಅಡ್ವಾನ್ಸ್ ಅಂತ ಪಡೆದುಕೊಳ್ತಾರೆ.. ಆದ್ರೆ ಇತ್ತೀಚಿನ ದಿನಗಳಲ್ಲಿ ಪುನೀತ್ ರಾಜ್ ಕುಮಾರ್ ಅಡ್ವಾನ್ಸ್ ಅಮೌಂಟ್ ತೆಗೆದುಕೊಳ್ತಿದಿಲ್ವಂತೆ.. ಇರ್ಲಿ ನಿರ್ಮಾಪಕರೆ ಖರ್ಚಿಗೆ ಬೇಕಾಗುತ್ತೆ ಇಟ್ಕೊಳಿ ಅಂತ ವಾಪಸ್ ಕಳೆಸುತ್ತಿದ್ರಂತೆ.. ಉದಾರಹಣೆಗೆ ನಿರ್ಮಾಪಕ ಜಯಣ್ಣ ಅವರು ದಿನಕರ್ ತೂಗುದೀಪ ಅವರ ಜೊತೆ ಸೇರಿ ಹೊಸ ಸಿನಿಮಾ ಮಾಡಲು ಮುಂದಾದಗ ಮೂರು ಬಾರಿ ಅಡ್ವಾನ್ಸ್ ಅಮೌಂಟ್ ಕೊಡಲು ಹೋಗಿದ್ರಂತೆ.. ಆದ್ರೆ ಇರ್ಲಿ ಜಯಣ್ಣ ಸರ್ ನಿಮ್ಮ ಭಜರಂಗಿ -2 ಸಿನಿಮಾ ರಿಲೀಸ್ ಆಗಿ ಯಶಸ್ವಿಯಾಗಲಿ ಆಮೇಲೆ ನೋಡೋ ಅಂತ ಭರವಸೆ ನೀಡುತ್ತಿದ್ರಂತೆ..
ಹೊಂಬಾಳೆ ಫಿಲಂಸ್ ಜೊತೆ, ಜೇಮ್ಸ್ ನಿರ್ಮಾಪಕರ ಜೊತೆ ಹಾಗೂ ಹೆಬ್ಬುಲಿ ಕೃಷ್ಣ ಅವರ ಜೊತೆ ಸಿನಿಮಾ ಕಮಿಟ್ ಆಗಿದ್ದರು ಅಪ್ಪು.. ಆದ್ರೆ ಅಡ್ವಾನ್ಸ್ ಕೊಡಲು ಹೋದಾಗ ಬೇಡ ನಿಮ್ಮ ಖರ್ಚಿಗೆ ಇಟ್ಕೊಳಿ ಹೇಳಿ ನಿರ್ಮಾಪಕ ಹಿತಾಸಕ್ತಿಯನ್ನ ಕಾಪಾಡಿದ್ರು ಪುನೀತ್ ರಾಜ್ ಕುಮಾರ್..
ಸದಾ ಅ ಬುಕ್ ಅನ್ನ ಇಟ್ಕೊಂಡೆ ಇದ್ರು ಅಪ್ಪು
ಬುಕ್ಕಾ..? ಯಾವ ಬುಕ್ ಅಂತ ನೀವು ಕೇಳ ಬಹುದು.. ಅದಕ್ಕೆ ನಮ್ಮ ಬಳಿ ಉತ್ತರವಿದೆ.. ಪುನೀತ್ ರಾಜ್ ಕುಮಾರ್ ಯಾವುದೇ ಬೇರೆ ಊರಿಗೆ ಹೋಗ್ಲಿ ಆ ಬುಕ್ ಮತ್ತು ಪೆನ್ನನ್ನಾ ಇಟ್ಕೊಂಡು ಹೋಗುತ್ತಿದ್ರು.. ಹಾಗಾದ್ರೆ ಯಾವ ಬುಕ್ ಅನ್ನೋ ಪ್ರಶ್ನೆಗೆ ಉತ್ತರ ಚೆಕ್ ಬುಕ್.. ಕಾಣದಂತೆ ದೊಡ್ಡ ಕೊಡುಗೈ ದಾನಿಯಾಗಿದ್ದ ಪುನೀತ್ ರಾಜ್ ಕುಮಾರ್ ಸದಾ ತಮ್ಮ ಬಳಿ ಚೆಕ್ ಬುಕ್ ಅನ್ನ ಇಟ್ಕೊಳ್ತಿದ್ರಂತೆ. ಬೇರೆ ಊರಿಗೆ ಶೂಟಿಂಗೆಂದು ಹೋದಾಗ ಕಷ್ಟ ಅಂತ ಯಾರಾದ್ರು ಬಂದ್ರೆ ಹಣವನ್ನ ಚೆಕ್ ಬುಕ್ ರೂಪದಲ್ಲಿ ನೀಡ್ತಿದ್ರು.. ಕನಿಷ್ಟ ಒಬ್ಬರ ಕಷ್ಟಕ್ಕೆ 50 ಸಾವಿರದಿಂದ ಒಂದು ಲಕ್ಷ ರೂಪಾಯಿ ನೀಡ್ತಿದ್ರಂತೆ.. ಆದ್ರೆ ಈ ಸತ್ಯ ಅವರ ಜೊತೆಗಿದ್ದವರಿಗೆ ಗೊತ್ತಾಗುತ್ತಿರಲಿಲ್ವಂತೆ.. ಅಷ್ಟು ಸೀಕ್ರೆಟ್ ಆಗಿ ದಾನಧರ್ಮವನ್ನ ಮಾಡ್ತಿದ್ದ ಸಾಹುಕಾರ ಅಪ್ಪು..
ಯಾರದ್ದೋ ದುಡ್ಡಿನಲ್ಲಿ ನಿರ್ಮಾಪಕರ ಹಣದಲ್ಲಿ ದಾನ ಮಾಡಿ ದೊಡ್ಡ ಮನಷ್ಯ ಅನ್ನಿಸಿಕೊಳ್ಳೋರ ನಡುವೆ ಇಂಥ ಒಂದು ಸವ್ಯ ಸಾಚಿ ಸಾಹುಕಾರ ಇದ್ದು ಹೋದ್ರಲ್ಲ ಅನ್ನೋದೆ ನಮ್ಮ ಹೆಮ್ಮೆ.. ಕೊಡುಗೈ ಪರಮಾತ್ಮ ಕಾಣದಂತೆ ಮಾಯವಾದನು.