ಕೊನೆಗೂ ಮದುವೆ ಬಗ್ಗೆ ಮೌನಮುರಿದ ತಮಿಳು ನಟ ಸಿಂಬು: ಯಾವ ಹೀರೋಯಿನ್​​ ಜೊತೆಗೆ?


ತಮಿಳಿನ ನಟ ಸಿಂಬು ಅವರ ಸಿನಿಮಾಗಳಿಗಿಂತ ಅವರ ಮದುವೆ ಯಾವಾಗ ಆಗುತ್ತೆ ಅಂತಾನೆ ಅವರ ಅಭಿಮಾನಿಗಳಲ್ಲಿ ಕಾಡುತ್ತಿರುವ ಯಕ್ಷ ಪ್ರೆಶ್ನೆಯಾಗಿದೆ. ಸದ್ಯ ಸಿಂಬು ಅವರ ಮುಂದಿನ ಬಹು ನಿರೀಕ್ಷಿತ ಚಿತ್ರ ”ದಿ ಲೂಪ್​” ಸಿನಿಮಾದ ಪ್ರಮೋಷನ್​ ವೇಳೆ ಮದುವೆ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ.

”ದಿ ಲೂಪ್”​ ಸಿನಿಮಾದ ಪ್ರಮೋಷನ್​ಗಾಗಿ ಹೈದರಾಬಾದ್​ಗೆ​ ಭೇಟಿ ನೀಡಿದ್ದ ಸಂದರ್ಭದಲ್ಲಿ ಪತ್ರ ಕರ್ತರು ಸರ್​ ನಿಮ್ಮ ಮದುವೆ ಯಾವಾಗ ಅಂತ ಕೇಳಿದಾಗ ”ನೀವೆ ಒಂದು ಸುಂದರ ಹುಡುಗಿಯನ್ನು ತೋರಿಸಿ ಸಾರ್​” ಅಂತ ಮರು ಪ್ರಶ್ನೆ ಮಾಡಿದ್ದಾರೆ. ಈ ರೀತಿ ಪ್ರಶ್ನೆ ಕೇಳುವುದರ ಮೂಲಕ ನಾನು ಇನ್ನು ಒಂಟಿ ನನಗೆ ಇನ್ನು ಯಾರು ಸಿಕ್ಕಿಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ ಸಿಂಬು.

ಇನ್ನು ಸಿಂಬು ಅವರ ”ದಿ ಲೂಪ್”​​ ಸಿನಿಮಾ ತೆಲುಗು ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದ್ದು, ಇದೇ ತಿಂಗಳ 25ನೇ ತಾರೀಖು ತೆರೆಗಪಗ್ಪಳಿಸಲು ಸಿದ್ಧಾವಾಗಿದೆ. ಇದೇ ಸಂದರ್ಭದಲ್ಲಿ ತೆಲುಗಿನಲ್ಲೂ ನಟಿಸಲು ಆಸಕ್ತಿ ವ್ಯಕ್ತಪಡಿಸಿದ್ದು, ಉತ್ತಮ ಕಥೆಗಳಿಗಾಗಿ ಕಾಯುತ್ತಿದ್ದಾರಂತೆ.

News First Live Kannada


Leave a Reply

Your email address will not be published. Required fields are marked *