ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ತಂಡಗಳ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಚೆನ್ನೈ ತಂಡ 20 ಓವರ್​ಗಳಲ್ಲಿ  4 ವಿಕೆಟ್​ ನಷ್ಟಕ್ಕೆ 191 ರನ್​ಗಳಿಸಿದೆ. ಆ ಮೂಲಕ ಆರ್​ಸಿಬಿ ತಂಡ ಗೆಲ್ಲಲು 192 ರನ್​​ಗಳ ಬೃಹತ್​ ಮೊತ್ತದ ಗುರಿಯನ್ನು ಪಡೆದುಕೊಂಡಿದೆ.

ಟಾಸ್​​ ಗೆದ್ದು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡ ನಾಯಕ ಧೋನಿ ಅವರ ನಡೆಯನ್ನು ಸಮರ್ಥಿಸಿಕೊಳ್ಳುವಂತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಜಡೇಜಾ, 221ರ ಸ್ಟ್ರೇಕ್​ ರೇಟ್​​​ನಲ್ಲಿ 28 ಎಸೆತಗಳಲ್ಲಿ 62 ರನ್​ ಸಿಡಿಸಿದರು. ಇದರಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸೇರಿದೆ.

ಉಳಿದಂತೆ ಇನ್ನಿಂಗ್ಸ್ ಆರಂಭಿಸಿದ ಗಾಯಕ್​​ವಾಡ್​​, ಡುಪ್ಲೆಸಿಸ್​ ಮೊದಲ ವಿಕೆಟ್​ಗೆ 74 ರನ್​​ಗಳ ಉತ್ತಮ ಜೊತೆಯಾಟ ನೀಡಿದರು. ಈ ಹಂತದಲ್ಲಿ ಗಾಯಕ್​ವಾಡ್​ 33 ರನ್​ ಗಳಿಸಿ ನಿರ್ಗಮಿಸಿದರು. ಈ ಹಂತದಲ್ಲಿ ಚೆನ್ನೈಗೆ ಶಾಕ್​ ನೀಡಿದ ಹರ್ಷಲ್​ ಪಟೇಲ್​ 41 ಎಸೆತಗಳಲ್ಲಿ 50 ರನ್​ ಸಿಡಿಸಿದ ಡುಪ್ಲೆಸಿಸ್ ಹಾಗೂ 24 ರನ್​ ಗಳಿಸಿದ್ದ ರೈನಾ ವಿಕೆಟ್ ಪಡೆದು ಚೆನ್ನೈ ರನ್​ ವೇಗಕ್ಕೆ ಕಡಿವಾಣ ಹಾಕಿದರು. ಅಲ್ಲದೇ ಬಂದಷ್ಟೇ ವೇಗದಲ್ಲಿ ಅಂಬಟಿ ರಾಯುಡು ವಿಕೆಟ್​ ಕೂಡ ಪಡೆದರು. 17.3 ಓವರ್​ಗಳಲ್ಲಿ 142 ರನ್​ ಗಳಿಸಿದ್ದ ಸಂದರ್ಭದಲ್ಲಿ ಜಡೇಜಾ, ಧೋನಿ ಜೋಡಿ 5ನೇ ವಿಕೆಟ್​ಗೆ 17 ಎಸೆತಗಳಲ್ಲಿ 49 ರನ್​ಗಳನ್ನು ಸಿಡಿಸಿತು. ಕೊನೆ ಓವರ್​​​ನಲ್ಲಿ 37 ರನ್​​ ಚಚ್ಚಿದ ಜಡೇಜಾ.. ಚೆನ್ನೈ ಭಾರೀ ಮೊತ್ತ ಗಳಿಸಲು ಕಾರಣರಾದರು.

The post ಕೊನೆ ಓವರ್​​​ನಲ್ಲಿ 37 ರನ್​​ ಚಚ್ಚಿದ ಜಡೇಜಾ- ಗೆಲ್ಲಲು ಆರ್​​ಸಿಬಿಗೆ 192 ರನ್​​ ಗುರಿ appeared first on News First Kannada.

Source: News First Kannada
Read More