ಕೊನೆ ಓವರ್​.. ಕೊನೆ ಬಾಲ್​​ನ ರೋಚಕ ಕ್ಷಣ.. ಕೊಹ್ಲಿಯ ರಿಯಾಕ್ಷನ್ ಹೇಗಿತ್ತು ಗೊತ್ತಾ..?​ 

ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್​ ಸಾಲಿಡ್​ ಓಪನಿಂಗ್​ ಪಡೆದುಕೊಳ್ತು. ಆರಂಭಿಕರಾಗಿ ಕಣಕ್ಕಿಳಿದ ಪೃಥ್ವಿ ಶಾ- ಶಿಖರ್​​ ಧವನ್​ ಮೊದಲ ವಿಕೆಟ್​ಗೆ 88 ರನ್​ಗಳ ಜೊತೆಯಾಟವಾಡಿದ್ರು. 43 ರನ್​ಗಳಿಸಿದ್ದ ಶಿಖರ್​​ ಧವನ್​ಗೆ ಹರ್ಷಲ್​ ಪಟೇಲ್​​ ಗೇಟ್​ ಪಾಸ್​ ನೀಡುವಲ್ಲಿ ಯಶಸ್ವಿಯಾದ್ರೆ, 48 ರನ್​ಗಳಿಸಿದ್ದ ಪೃಥ್ವಿ ಷಾ ಯುಜುವೇಂದ್ರ ಚಹಲ್​ಗೆ ವಿಕೆಟ್​​ ಒಪ್ಪಿಸಿದ್ರು. ಬಳಿಕ ಕಣಕ್ಕಿಳಿದ ನಾಯಕ ರಿಷಭ್​ ಪಂತ್​ ನಿರೀಕ್ಷೆ ಹುಸಿಗೊಳಿಸಿದ್ರು.

ಶ್ರೇಯಸ್​​ ಅಯ್ಯರ್​ ಆಟ 18 ರನ್​ಗಳಿಗೆ ಅಂತ್ಯವಾದ್ರೆ, ಅಂತಿಮ ಹಂತದಲ್ಲಿ ಅಬ್ಬರಿಸಿದ ಶಿಮ್ರಾನ್​ ಹೆಟ್ಮಾಯರ್ 29 ರನ್​ಗಳಿಸಿ ಕೊನೆಯ ಎಸೆತದಲ್ಲಿ ಔಟಾದ್ರು. ಅಂತಿಮವಾಗಿ 20 ಓವರ್​ಗಳಲ್ಲಿ 5 ವಿಕೆಟ್​​ ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್​ 164 ರನ್​ಗಳಿಸಿತು.

165 ರನ್​ಗಳ ಸ್ಪರ್ಧಾತ್ಮಕ ಟಾರ್ಗೆಟ್​​​ ಬೆನ್ನತ್ತಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಆರಮಭದಲ್ಲೇ ಮುಗ್ಗರಿಸಿತು. ನಾಯಕ ವಿರಾಟ್​ ಕೊಹ್ಲಿ, ದೇವದತ್​ ಪಡಿಕ್ಕಲ್​ಗೆ ಗೇಟ್​ ಪಾಸ್​ ನೀಡಿದ ಎನ್ರಿಚ್​ ನೋಕಿಯಾ ಡೆಲ್ಲಿಗೆ ಆರಂಭಿಕ ಯಶಸ್ಸು ತಂದುಕೊಟ್ರು. ಆಘಾತ ಕಂಡಿದ್ದ ತಂಡಕ್ಕೆ ಎಬಿ ಡಿವಿಲಿಯರ್ಸ್​ – ಶ್ರೀಕರ್​ ಭರತ್​ ಕೆಲ ಕಾಲ ಆಸರೆಯಾದ್ರು. ಆದ್ರೆ , ಈ ಜೊತೆಯಾಟಕ್ಕೆ ಬ್ರೇಕ್​ ಹಾಕುವಲ್ಲಿ ಯಶಸ್ವಿಯಾದ ಅಕ್ಷರ್​ ಪಟೇಲ್​​ 26 ರನ್​ಗಳಿಸಿದ್ದ ಎಬಿಡಿಯನ್ನ ಪೆವಿಲಿಯನ್​​ಗೆ ಕಳಿಸಿದ್ರು.

ಆದ್ರೆ, 5ನೇ ವಿಕೆಟ್​​ಗೆ ಜೊತೆಯಾದ ಗ್ಲೇನ್​ ಮ್ಯಾಕ್ಸ್​ವೆಲ್​ – ಶ್ರೀಕರ್​​​ ಭರತ್​​​ ಡೆಲ್ಲಿ ಬೌಲರ್​​ಗಳನ್ನ ಸಮರ್ಥವಾಗಿ ಎದುರಿಸಿದ್ರು. ತಲಾ ಅರ್ಧಶತಕ ಸಿಡಿಸಿ ಮಿಂಚಿದ ಭರತ್ ಹಾಗೂ​ ಮ್ಯಾಕ್ಸ್​ವೆಲ್​ ಮುರಿಯದ 111 ರನ್​ಗಳ ಜೊತೆಯಾಟವಾಡಿದ್ರು. ರೋಚಕ ಘಟ್ಟ ತಲುಪಿದ್ದ ಪಂದ್ಯದ ಅಂತಿಮ ಓವರ್​ನ ಕೊನೆಯ ಓವರ್​ನ ಕೊನೆ ಎಸೆತದಲ್ಲಿ ಆರ್​ಸಿಬಿ ಗೆಲುವಿಗೆ 5 ರನ್​ ಅಗತ್ಯವಿತ್ತು. ಆವೇಶ್​ ಖಾನ್​ ಎಸೆದ ಎಸೆತವನ್ನ ಲಾಂಗ್​ ಆನ್​ ಕಡೆಗಟ್ಟಿದ ಶ್ರೀಕರ್​​ ಭರತ್​​ ಸಿಕ್ಸರ್​ ಸಿಡಿಸಿ ಆರ್​ಸಿಬಿಯನ್ನ ಗೆಲುವಿನ ದಡ ಸೇರಿಸಿದ್ರು.

News First Live Kannada

Leave a comment

Your email address will not be published. Required fields are marked *