ಕೊಪ್ಪಳದಲ್ಲಿ ಕೈಗಾರಿಕಾ ಸಮ್ಮೇಳನ ಮಾಡಲಾಗುವುದು; ಮುಖ್ಯಮಂತ್ರಿ ಬೊಮ್ಮಾಯಿ | Industrial conference will held in Koppal Said CM Bommai


ಕೊಪ್ಪಳದಲ್ಲಿ ಕೈಗಾರಿಕಾ ಸಮ್ಮೇಳನ ಮಾಡಲಾಗುವುದು ಎಂದು ಕೊಪ್ಪಳದಲ್ಲಿ ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ ಅವರು ಹೇಳಿದ್ದಾರೆ.

ಕೊಪ್ಪಳದಲ್ಲಿ ಕೈಗಾರಿಕಾ ಸಮ್ಮೇಳನ ಮಾಡಲಾಗುವುದು; ಮುಖ್ಯಮಂತ್ರಿ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಕೊಪ್ಪಳ: ಕೊಪ್ಪಳದಲ್ಲಿ (Koppal) ಕೈಗಾರಿಕಾ ಸಮ್ಮೇಳನ ಮಾಡಲಾಗುವುದು ಎಂದು ಕೊಪ್ಪಳದಲ್ಲಿ ಮುಖ್ಯಮಂತ್ರಿ ಬಸವಾರಜ ಬೊಮ್ಮಾಯಿ (Basavaraj Bommai) ಅವರು ಹೇಳಿದ್ದಾರೆ. ಜಿಲ್ಲೆಯ ಬಗ್ಗೆ ಬಹಳ ಅನುಕಂಪ ಹಾಗೂ ಹಳೇ ಸಂಬಂಧ ಇದೆ. 120 ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುತ್ತೇವೆ. ದುಡ್ಡೇ ದೊಡ್ಡಪ್ಪ ಅಲ್ಲ ದುಡಿಮೆಯೇ ದೊಡ್ಡಪ್ಪ. ಸ್ತ್ರೀಶಕ್ತಿ ಸಂಘಗಳಿಗೆ 500 ಕೋಟಿ ರೂಪಾಯಿ ಮೀಸಲಿಟ್ಟಿದ್ದೇವೆ. ಸ್ವಾಮಿ ವಿವೇಕಾನಂದ ಜಯಂತಿ ಹಿನ್ನೆಲೆ 5 ಲಕ್ಷ ಯುವಕರಿಗೆ ಕೆಲಸ ಕೊಡುವ ಯೋಜನೆ ರೂಪಿಸಲಾಗಿದೆ ಎಂದರು.

ದೇಶದಲ್ಲೇ ಇಂತಹ ಕಾರ್ಯಕ್ರಮ ನಾವು ಮಾಡುತ್ತಿದ್ದೇವೆ. ಕೊಪ್ಪಳ ಜಿಲ್ಲೆಯ ಋಣದಲ್ಲಿದ್ದೇವೆ, ಋಣ ತೀರಿಸುತ್ತೇವೆ ಎಂದು ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ಗವಿಮಠಕ್ಕೆ ಭೇಟಿ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಗವಿಸಿದ್ದೇಶ್ವರ ಸ್ವಾಮೀಜಿ ಆಶೀರ್ವಾದ ಪಡೆದರು. ಸಿಎಂ ಬೊಮ್ಮಾಯಿ ಜೊತೆಗೆ ಸಚಿವರಾದ ಹಾಲಪ್ಪ ಆಚಾರ್, ಸುಧಾಕರ್,ಭೈರತಿ ಬಸವರಾಜ, ಸಿ ಸಿ ಪಾಟೀಲ್, ಸಂಸದ ಕರಡಿ ಸಂಗಣ್ಣ ಇದ್ದರು.

ಸಿಎಂ ಬೊಮ್ಮಾಯಿ ಇತ್ತೀಚಿಗಷ್ಟೇ ಗವಿಮಠಕ್ಕೆ 10 ಕೋಟಿ ಅನುದಾನ ನೀಡಿದ್ದರು. ಜಿಲ್ಲೆಯ ನೀರಾವರಿ ಯೋಜನೆಗಳ, ಅಭಿವೃದ್ಧಿ ವಿಷಯ, ಅಂಜನಾದ್ರಿ ವಿಷಯದ ಕುರಿತು ಗವಿಸಿದ್ದೇಶ್ವರ ಸ್ವಾಮೀಜಿಗೆ ಮಾಹಿತಿ ಸಿಎಂ ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.  ಗವಿಸಿದ್ದೇಶ್ವರ ಸ್ವಾಮಿಜಿ ಜಾತ್ರೆಯ ಕುರಿತು ಸಿಎಂ ಮತ್ತು ಸಚಿವರಿಗೆ ಮಾಹಿತಿ ನೀಡಿದ್ದಾರೆ.

ಜನೇವರಿ 8 ಕ್ಕೆ ಜಾತ್ರೆಗೆ ಬರಲು ಸಿಎಂ ಸಚಿವರಿಗೆ ಸ್ವಾಮಿಜಿ ಆಹ್ವಾನ ನೀಡಿದ್ದಾರೆ. ಜಾತ್ರೆಗೆ ಬರುವುದಾಗಿ ಸಿಎಂ ಹೇಳಿದ್ದಾರೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published. Required fields are marked *