ಕೊಪ್ಪಳ: ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಘೋಷಿಸಲಾಗಿದ್ದ ಐದು ದಿನಗಳ ಸಂಪೂರ್ಣ ಲಾಕ್​​ಡೌನ್​​ ಇಂದು ಕೊನೆಯಾಗಿದೆ. ಇದರ ನಡುವೆಯೇ ಸೋಂಕಿನ ತೀವ್ರತೆ ಕಡಿಮೆಯಾಗದ ಕಾರಣ ಜಿಲ್ಲೆಯಲ್ಲಿ ಸೋಮವಾರದಿಂದ ಏಳು ದಿನಗಳ ಕಾಲ ಮತ್ತೆ ಸಂಪೂರ್ಣ ಲಾಕ್​ಡೌನ್ ಜಾರಿ ಆಗಲಿದೆ.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಲಾಕ್​​ಡೌನ್ ವಿಸ್ತರಣೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಮುಂದಿನ ಎರಡು ದಿನಗಳವರೆಗೆ ಅಂದರೇ ಶನಿವಾರ ಮತ್ತು ಭಾನುವಾರ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಲಾಕ್‌ಡೌನ್ ಜಾರಿ ಇರಲಿದೆ. ಆ ಬಳಿಕ ಸೋಮವಾರದಿಂದ ಮತ್ತೆ 7 ದಿನಗಳವರೆಗೆ ಸಂಪೂರ್ಣ ಲಾಕ್​​ಡೌನ್ ಜಾರಿ ಆಗಲಿದೆ. ಮೇ 24 ರಿಂದ ಮೇ 30ರ ರಾತ್ರಿ 12 ರವರೆಗೆ ಜಿಲ್ಲಾ ಮಟ್ಟದ ಸಂಪೂರ್ಣ ಲಾಕ್​​ಡೌನ್​​ ಜಾರಿ ಇರಲಿದೆ. ನಾಳೆಯಿಂದ ಎರಡು ದಿನಗಳ ಕಾಲ ಅಗತ್ಯ ವಸ್ತುಗಳ ಖರೀದಿಗೆ ಅನುಮತಿ ನೀಡಲಾಗಿದ್ದು, ಕೋವಿಡ್ ನಿಯಮಗಳನ್ನು ಮೀರದಂತೆ ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.

The post ಕೊಪ್ಪಳದಲ್ಲಿ ಮತ್ತೆ 7 ದಿನ​​ ಸಂಪೂರ್ಣ ಲಾಕ್​ಡೌನ್​​: ಅಗತ್ಯ ವಸ್ತು ಖರೀದಿಗೂ ಇರಲ್ಲ ಅವಕಾಶ appeared first on News First Kannada.

Source: newsfirstlive.com

Source link