
ಅಂಜನಾದ್ರಿ ಬೆಟ್ಟ
ಪಂಪಾ ಸರೋವರ, ಇದು ದೇಶದ ಐದು ಸರೋವರಗಳಲ್ಲಿ ಒಂದು. ಇದು ಶ್ರೇಷ್ಠವಾದ ಸರೋವರ. ಇದು ಕೂಡಾ ಹನುಮ ಹುಟ್ಟಿದ್ದು ಕಿಷ್ಕಿಂದೆ ಪ್ರದೇಶದಲ್ಲಿ ಎನ್ನುವುದಕ್ಕೆ ಇರುವ ಕುರುಹು. ಯಾಕೆಂದರೆ ಟಿಟಿಡಿ ಅಥವಾ ಮಹಾರಾಷ್ಟ್ರದಲ್ಲಿ ಪಂಪಾ ಸರೋವರ ಇಲ್ಲ.
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂಧೆ (Kishkinda) ಪ್ರದೇಶವೇ ಹನುಮ (Hanuma) ಹುಟ್ಟಿದ ಸ್ಥಳ ಎಂದು ಲಕ್ಷಾಂತರ ಭಕ್ತರ ನಂಬಿಕೆ. ಆದರೆ ಇದೀಗ ಮಹಾರಾಷ್ಟ್ರ ಹೊಸ ಖ್ಯಾತೆ ಆರಂಭಿಸಿದೆ. ಹನುಮ ಹುಟ್ಟಿರುವ ಬಗ್ಗೆ ಮಹಾರಾಷ್ಟ್ರದಲ್ಲಿ ದಾಖಲೆಗಳೇ ಇಲ್ಲ. ಕೊಪ್ಪಳ ಜಿಲ್ಲೆಯಲ್ಲಿ ಹನುಮನ ಅನೇಕ ಕುರುಹುಗಳಿವೆ. ಕಿಷ್ಕಿಂಧೆ ಪ್ರದೇಶದಲ್ಲಿ ರಾಮ ಹನುಮ ಭೇಟಿಯಾದರು ಅನ್ನೋದು ರಾಮಾಯಾಣದಲ್ಲಿ ಉಲ್ಲೇಖವಿದೆ. ಪಂಪಾ ಸರೋವರದ ಬಳಿ ರಾಮ ಹನುಮನ ಭೇಟಿಯಾದರೂ, ಸೀತೆಯನ್ನ ಹುಡಕುತ್ತಾ ಬಂದನಿಗೆ ಹನುಮ ಭೇಟಿಯಾಗುತ್ತಾನೆ ಎನ್ನುವುದಕ್ಕೆ ಇಲ್ಲಿ ಕುರುಹುಗಳಿವೆ. ಇದೆಲ್ಲ ಕುರುಹುಗಳು ಕೇಲವ ಕಾಲ್ಪನಿಕವಲ್ಲ. ರಾಮಾಯಣದಲ್ಲಿ ಉಲ್ಲೇಖವಾಗಿರುವುದು.
ಪಂಪಾ ಸರೋವರ, ಇದು ದೇಶದ ಐದು ಸರೋವರಗಳಲ್ಲಿ ಒಂದು. ಇದು ಶ್ರೇಷ್ಠವಾದ ಸರೋವರ. ಇದು ಕೂಡಾ ಹನುಮ ಹುಟ್ಟಿದ್ದು ಕಿಷ್ಕಿಂದೆ ಪ್ರದೇಶದಲ್ಲಿ ಎನ್ನುವುದಕ್ಕೆ ಇರುವ ಕುರುಹು. ಯಾಕೆಂದರೆ ಟಿಟಿಡಿ ಅಥವಾ ಮಹಾರಾಷ್ಟ್ರದಲ್ಲಿ ಪಂಪಾ ಸರೋವರ ಇಲ್ಲ. ಪಂಪಾ ಸರೋವರದ ಬಗ್ಗೆ ಸ್ಕಂದ ಪುರಾಣದಲ್ಲಿ ಉಲ್ಲೇಖವಿದೆ. ಪಂಪಾಂಬಿಕೆ ಇಲ್ಲಿ ಸ್ನಾನ ಮಾಡಿ ಶಿವನನ್ನ ಒಲಿಸಿಕೊಂಡಿರುವ ನಂಬಿಕೆ ಇದೆ. ಪಂಪಾ ಸರೋವರಕ್ಕೆ ಮೋದಿ ಪತ್ನಿ ಜಶೋದಾ ಬೆನ್ ಕೂಡಾ ಪೂಜೆ ಸಲ್ಲಿಸಿ ಹೋಗಿದ್ದಾರೆ. ಇದೇ ಜಾಗದಲ್ಲಿ ಹನುಮ ರಾಮನ ಭೇಟಿಯಾಗಿರುವುದು. ಹೀಗಾಗಿ ಪಂಪಾ ಸರೋವರಗೂ ಹನುಮ ಹುಟ್ಟಿದ್ದು ಇಲ್ಲೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
ರಾಮನಿಗೆ ಆಂಜನೇಯ ಭೇಟಿಯಾದ ನಂತರ ಸುಗ್ರೀವನ ಭೇಟಿಯಾಗತ್ತದೆ. ರಾಮ, ಸೀತೆ ಅಪಹರಣದ ಬಗ್ಗೆ ಹುಡಕಾಟ ಆರಂಭಿಸಿದಾಗ, ರಾಮ, ಹನುಮ, ಸುಗ್ರೀವ ಚಿಂತೆ ಮಾಡುತ್ತಾ ಕುಳಿತಿರುವ ಪ್ರದೇಶವನ್ನೇ ಚಿಂತಾಮಣಿ ಎನ್ನುತ್ತಾರೆ. ಇಲ್ಲಿಯೇ ರಾಮ ವಾಲಿಯ ಸಂಹಾರ ಮಾಡಿದ್ದಾನೆ ಎನ್ನುವುದು ಉಲ್ಲೇಖವಿದೆ. ಇಂದಿಗೂ ವಾಲಿ ಸಮಾಧಿ ಕಾಣಬಹುದು. ಗಂಗಾವತಿ ತಾಲೂಕಿನ ಕಿಷ್ಕಿಂಧೆ ಪ್ರದೇಶದಲ್ಲಿರುವ ಚಿಂತಾಮಣಿ ಕೂಡಾ ರಾಮಾಯಣದಲ್ಲಿ ಉಲ್ಲೇಖವಾಗಿದೆ. ಸುಗ್ರೀವನ ಹೆಂಡತಿಯನ್ನ ಬಲವಂತವಾಗಿ ಇಟ್ಟುಕೊಂಡ ವಾಲಿಯನ್ನ ರಾಮ ಸಂಹಾರ ಮಾಡಿದ ಎನ್ನುವ ಪ್ರತೀತಿಯೂ ಇದೆ.