ಕೊಪ್ಪಳದ ಗ್ರಾಮವೊಂದರ ಹೊರವಲಯದಲ್ಲಿ ಸಿಲಿಂಡರ್ ಸ್ಫೋಟಗೊಂಡು ಸುಟ್ಟು ಹೋದ ಧಾಬಾ, ಪ್ರಾಣಹಾನಿ ಇಲ್ಲ | Dhaba on the outskirts of a village in Koppal burns to ashes after cylinder explodes ARBಅದೃಷ್ಟವಶಾತ್ ಸದರಿ ಅನಾಹುತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬುಧವಾರ ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡಾಗ ಧಾಬಾದಲ್ಲಿ ಒಬ್ಬ ವಯಸ್ಸಾದ ಮಹಿಳೆ ಮಾತ್ರ ಇದ್ದರು ಮತ್ತು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

TV9kannada Web Team


| Edited By: Arun Belly

May 18, 2022 | 6:36 PM
Koppal: ರಾಜ್ಯದಲ್ಲಿ ಮಳೆ ಸೃಷ್ಟಿಸುತ್ತಿರುವ ಅವಾಂತರ ಒಂದೆಡೆಯಾದರೆ ಕೊಪ್ಪಳ ಜಿಲೆಯಲ್ಲಿ ಧಾಬಾದಲ್ಲಿದ್ದ ಅಡುಗೆ ಅನಿಲ ಸಿಲಿಂಡರ್ (gas cylinder) ಸ್ಫೋಟಗೊಂಡು ಇಡೀ ಧಾಬಾ ಸುಟ್ಟುಹೋದ ಪ್ರಕರಣ ಜರುಗಿದೆ. ಅದು ಉರಿಯುತ್ತಿರುವುದನ್ನು ವಿಡಿಯೋನಲ್ಲಿ ನೋಡಬಹುದು. ದುರ್ಘಟನೆ ನಡೆದಿರೋದು ಕೊಪ್ಪಳ (Koppal) ಜಿಲ್ಲೆ ಕನಕಗಿರಿ ತಾಲ್ಲೂಕಿನ ಹುಲಿಹೈದರ್ (Hulihydder) ಗ್ರಾಮದ ಹೊರಭಾಗಲ್ಲಿ. ಅದೃಷ್ಟವಶಾತ್ ಸದರಿ ಅನಾಹುತದಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಬುಧವಾರ ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡಾಗ ಧಾಬಾದಲ್ಲಿ ಒಬ್ಬ ವಯಸ್ಸಾದ ಮಹಿಳೆ ಮಾತ್ರ ಇದ್ದರು ಮತ್ತು ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ವೃದ್ಧೆಯನ್ನು ಕನಕಗಿರಿ ತಾಲ್ಲೂಕು ಅಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.

ಕನಕಗಿರಿಯಿಂದ ಸ್ವಲ್ಪ ದೂರದಲ್ಲಿರುವ ಹುಲಿಹೈದರ್ ಒಂದು ಚಿಕ್ಕ ಗ್ರಾಮ ಮಾರಾಯ್ರೇ. ಯಮುನಪ್ಪ ಹವಾಲ್ದಾರ್ ಹೆಸರಿನ ವ್ಯಕ್ತಿಗೆ ಈ ಧಾಬಾ ಸೇರಿದೆ. ಅವರು ವಿಮೆ ಮಾಡಿಸಿದ್ದಾರೋ ಇಲ್ಲವೋ ಅನ್ನೋದು ಗೊತ್ತಿಲ್ಲ. ಅದನ್ನು ಮಾಡಿಸಿರದಿದ್ದರೆ ಧಾಬಾ ಮತ್ತೊಮ್ಮೆ ನಿರ್ಮಿಸುವುದು ಅವರಿಗೆ ಕಷ್ಟವಾಗಲಿದೆ.

ಸುಟ್ಟು ಕರಕಲಾಗಿರುವ ಧಾಬಾವನ್ನು ಹುಲಿಹೈದರ್ ಗ್ರಾಮ ಜನ ನಿಂತು ನೋಡುತ್ತಿದ್ದಾರೆ. ಅವರಾದರೂ ಏನು ಮಾಡಿಯಾರು? ಸುತ್ತಮುತ್ತ ನೀರಿನ ಮೂಲ ಇದ್ದಂತೆ ಗೋಚರಿಸುವುದಿಲ್ಲ. ಜನರೆಲ್ಲ ಅನಾಹುತದ ಬಗ್ಗೆ ತಮಗೆ ತಿಳಿದಿದ್ದನ್ನು ಮಾತಾಡಿಕೊಳ್ಳುತ್ತಿದ್ದಾರೆ. ಕೆಲವರು ದೃಶ್ಯವನ್ನು ತಮ್ಮ ಮೊಬೈಲ್ ಗಳಲ್ಲಿ ಚಿತ್ರಿಸಿಕೊಳ್ಳುತ್ತಿದ್ದಾರೆ. ಈ ಭಾಗದಲ್ಲಿ ಮಳೆ ಆದಂತಿಲ್ಲ.

TV9 Kannada


Leave a Reply

Your email address will not be published. Required fields are marked *