ಕೊಪ್ಪಳ; ಆನೆಗುಂದಿ ವೃತ್ತಕ್ಕೆ ಪುನೀತ್​ ಹೆಸರು ನಾಮಕರಣ


ಕೊಪ್ಪಳ: ಆನೆಗುಂದಿಯ ಸರ್ಕಲ್​ಗೆ ನಟ ಪುನೀತ್​ರಾಜ್​ಕುಮಾರ್​ ಹೆಸರು ನಾಮಕರಣ ಮಾಡಲಾಯಿತು. ಆನೆಗೊಂದಿಯ ವಿರುಪಾಪರುಗಡ್ಡಿಗೆ ತೆರಳುವ ಮಾರ್ಗದ ವೃತ್ತಕ್ಕೆ ಅಪ್ಪು ಹೆಸರಿಟ್ಟ ಗ್ರಾಮಸ್ಥರು, ನಾಮಫಲಕಕ್ಕೆ ಪೂಜೆ ಸಲ್ಲಿಸಿ ಅನಾವರಣಗೊಳಿಸಿದ್ರು.

ಈ ನೂತನ ವೃತ್ತದ ನಾಮಕರಣದ ವೇಳೆ ಗ್ರಾಮಸ್ಥರು, ಶಾಲಾ ಮಕ್ಕಳು, ಮಹಿಳೆಯರೆಲ್ಲರೂ ಸೇರಿ ಪುನೀತ್​ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ್ರು. ಇನ್ನು ಇದೇ ವೇಳೆ ಗ್ರಾಮಸ್ಥರು ಪಟಾಕಿ ಸಿಡಿಸಿ ಪುನೀತ್​ರಾಜ್​ಕುಮಾರ್​ಗೆ ಜೈಕಾರ ಘೋಷಣೆ ಕೂಗಿ ನಮನ ಸಲ್ಲಿಸಿದ್ರು.

News First Live Kannada


Leave a Reply

Your email address will not be published. Required fields are marked *