ಬೆಂಗಳೂರು: ಕೊರೊನಾಗೆ ಸಂಬಂಧಿಸಿದ ಔಷಧಗಳನ್ನ ಮಾರಾಟ ಮಾಡುವುದಾಗಿ ನಂಬಿಸಿ ಹಣ ದೋಚುತ್ತಿದ್ದ ಇಬ್ಬರು ಆಫ್ರಿಕನ್​ ಪ್ರಜೆಗಳನ್ನ ಕೇಂದ್ರ ವಿಭಾಗದ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಇಸ್ಮಾಯಿಲ್ ಖಾದ್ರಿ ಹಾಗೂ ಅಳದೆ ಅಬ್ದುಲ್ಲಾ ಯೂಸುಫ್ ಬಂಧಿತ ಆಫ್ರಿಕನ್ ಪ್ರಜೆಗಳು. ನಕಲಿ ಮೆಡಿಕಲ್ ಕಂಪನಿ ಹೆಸರಿನಲ್ಲಿ ಸಾರ್ವಜನಿಕರನ್ನ ಸಂಪರ್ಕಿಸುತ್ತಿದ್ದ ಆರೋಪಿಗಳು, ರೆಮ್ಡೆಸಿವ್  ಹಾಗೂ ಮತ್ತಿತರ ಔಷಧಿಗಳನ್ನ ನೀಡುವುದಾಗಿ ಹಣ ಪಡೆದು ವಂಚಿಸುತ್ತಿದ್ದರು.

ಸದ್ಯ ಬಂಧಿತ ಆರೋಪಿಗಳಿಂದ 4 ಮೊಬೈಲ್​, ಒಂದು ಹಾರ್ಡ್ ಡಿಸ್ಕ್, 110 ಸಿಮ್ ಕಾರ್ಡ್ ಹಾಗೂ 4 ಲಕ್ಷ ಸಹಿತ 10 ಬ್ಯಾಂಕ್ ಅಕೌಂಟ್​ನ್ನ ಪೊಲೀಸ್ರು ಜಪ್ತಿ ಮಾಡಿದ್ದಾರೆ.

The post ‘ಕೊರೊನಾಗೆ ಔಷಧಿ ನೀಡ್ತೀವಿ’ ಎಂದು ಸುಲಿಗೆ; ಇಬ್ಬರು ಆಫ್ರಿಕನ್ ಪ್ರಜೆ ಅರೆಸ್ಟ್ appeared first on News First Kannada.

Source: newsfirstlive.com

Source link